More

    ಮುಖ್ಯಮಂತ್ರಿ ಬದಲಾವಣೆ ವಿಚಾರ: ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇನು?

    ಚಿಕ್ಕಬಳ್ಳಾಪುರ: ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಬಹಳಷ್ಟು ಮಂದಿಯ ಹೇಳಿಕೆಗಳು ಕೂಡ ಹೊರಬಿದ್ದಿವೆ. ಈ ನಡುವೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಅಲ್ಲೀಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಆರಂಭದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಪ್ರಸಕ್ತ ವಿದ್ಯಾಮಾನಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅಷ್ಟಕ್ಕೂ ಬಿಜೆಪಿಯ ಪಕ್ಷದ ನಿರ್ಣಯಕ್ಕೂ ನನಗೂ ಸಂಬಂಧವಿಲ್ಲ. ಅದರ ಬಗ್ಗೆ ನಾನು ಗಮನಹರಿಸಿಲ್ಲ, ಯಾವ ವ್ಯಾಖ್ಯಾನವನ್ನೂ ಮಾಡುವುದಿಲ್ಲ. ನಾನು ಆ ಕುರಿತು ಮಾತನಾಡುವುದಿಲ್ಲ ಎಂದರು. ನಂತರ ಸಿಎಂ ಬದಲಾವಣೆ ವಿಚಾರವಾಗಿ ಒಂದಷ್ಟು ಅನಿಸಿಕೆಗಳನ್ನು ತಿಳಿಸಿದರು.

    ಬಿಜೆಪಿಯಲ್ಲಿ 75 ವರ್ಷದ ಮೇಲೆ ಯಾರಿಗೂ ಜವಾಬ್ದಾರಿ ಸ್ಥಾನ ಕೊಟ್ಟಿಲ್ಲ. ಯಡಿಯೂರಪ್ಪ ಅವರಿಗೆ ಮಾತ್ರ 3 ವರ್ಷ ಹೆಚ್ಚುವರಿ ಅಧಿಕಾರ ಕೊಟ್ಟಿದ್ದಾರೆ. ಅದು ವಿಶೇಷವಾಗಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಕೊಟ್ಟಿರೋ ಬೆಂಬಲ. ಮುಖ್ಯಮಂತ್ರಿ ವಿಚಾರವಾಗಿ ರಾಜ್ಯದ ಎಲ್ಲ ಬಿಜೆಪಿ ಶಾಸಕರು-ಮುಖಂಡರು ನಿರ್ಣಯ ಮಾಡುತ್ತಾರೆ. ಆ ನಿರ್ಣಯ ಏನು ಎಂಬುದು ನನಗೆ ಗೊತ್ತಿಲ್ಲ. ನಿರ್ಣಯ ಹೊರಬೀಳುವ ಮುನ್ನ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರು.

    ಬಿಎಸ್‌ವೈ ಚೆನ್ನಾಗಿ ಕೆಲಸ ಮಾಡ್ತಿದಾರೆ, ಬದಲಿಸುತ್ತೇವೆ ಅನ್ನೋದು ನಿಮ್ಮ ಊಹೆ: ನಡ್ಡಾ ಅಚ್ಚರಿಯ ಹೇಳಿಕೆ

    ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts