More

    ತೀರ್ಥಹಳ್ಳಿ-ಭದ್ರಾವತಿ ಸ್ಥಳೀಯ ಸಂಸ್ಥೆಗೆ ಅಖಾಡ ಸಿದ್ಧ

    ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಭದ್ರಾವತಿ ನಗರಸಭೆ ಚುನಾವಣೆಗೆ ಅಂತಿಮ ಅಖಾಡ ಸಿದ್ಧವಾಗಿದೆ. ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಸೋಮವಾರ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ರಾಜಕೀಯ ಪಕ್ಷಗಳು ತಕ್ಕಮಟ್ಟಿಗೆ ಯಶಸ್ಸು ಕಂಡವು.
    ಎರಡೂ ಸ್ಥಳೀಯ ಸಂಸ್ಥೆಯಲ್ಲಿ ಸಂಪೂರ್ಣವಾಗಿ ಬಂಡಾಯಗಾರರಿಲ್ಲದೇ ನಿಶ್ಚಿಂತೆಯಿಂದ ಬಿಜೆಪಿ ಮುಖಂಡರು ಪ್ರಚಾರ ಆರಂಭಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ 15 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 13 ವಾರ್ಡ್‌ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
    ಇನ್ನು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಪಕ್ಷೇತರರನ್ನು ಬೆಂಬಲಿಸಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. 13 ಕ್ಷೇತ್ರಗಳ ಪೈಕಿ ಮೂರು ವಾರ್ಡ್‌ಗಳಲ್ಲಿ ಬಂಡಾಯಗಾರರ ಮನವೊಲಿಕೆಯಲ್ಲಿ ಕಾಂಗ್ರೆಸ್ ವಿಫಲವಾಗಿದೆ.
    ಸ್ಪರ್ಧೆಗೆ ಉಕ್ಕಿನ ನಗರಿ ಸಿದ್ಧ
    ಭದ್ರಾವತಿ ನಗರಸಭೆಗೆ ಎಲ್ಲ ಪಕ್ಷಗಳಿಗೂ ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಅಚ್ಚರಿ ಬೆಳವಣಿಗೆ ಎಂಬಂತೆ ಒಂದು ವಾರ್ಡ್‌ನಲ್ಲಿ ಅಭ್ಯರ್ಥಿಯ ಉಮೇದುವಾರಿಕೆಯನ್ನು ಹಿಂಪಡೆದಿದೆ. ಹೀಗಾಗಿ 34 ವಾರ್ಡ್‌ಗಳಲ್ಲಿ ಮಾತ್ರ ಬಿಜೆಪಿ ಸ್ಪರ್ಧೆ ಇರಲಿದೆ. ಭದ್ರಾವತಿಯಲ್ಲಿ ಹೆಚ್ಚು ಬಂಡಾಯ ಭೀತಿ ಎದುರಿಸುತ್ತಿದ್ದ ಜೆಡಿಎಸ್ ಉಮೇದುವಾರಿಕೆ ಹಿಂಪಡೆಯಲು ಕಡೇದಿನವಾದ ಸೋಮವಾರ ಕೊಂಚ ನಿರಾಳವಾಗಿದೆ. ವಾರ್ಡ್ ನಂ.30 ಹಾಗೂ 34 ಸೇರಿದಂತೆ ಒಟ್ಟು ಮೂರು ವಾರ್ಡ್‌ಗಳಲ್ಲಿ ನಾಲ್ವರು ಬಂಡಾಯಗಾರರು ಉಮೇದುವಾರಿಕೆ ಹಿಂಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts