More

    ಕಳ್ಳಬಟ್ಟಿ ಮದ್ಯ ವಶ, ಬೈಕ್ ಸವಾರ ಪರಾರಿ

    ಖಾನಾಪುರ: ತಾಲೂಕಿನ ಇದ್ದಲಹೊಂಡ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಒಂದು ಬೈಕ್ ಮತ್ತು 50 ಲೀಟರ್ ಕಳ್ಳಬಟ್ಟಿ ಮದ್ಯ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವಸ್ತುಗಳ ಮೌಲ್ಯ 25 ಸಾವಿರ ರೂ.ಎಂದು ಮೂಲಗಳು ತಿಳಿಸಿವೆ. ಇದ್ದಲಹೊಂಡದಿಂದ ಬೆಳಗಾವಿ-ಖಾನಾಪುರ ರಸ್ತೆ ಮಾರ್ಗದಲ್ಲಿ ಬರುತ್ತಿದ್ದ ಬೈಕ್ ತಡೆದು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಂತೆ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ರವಿ ನಾರಾಯಣ, ಸಿಬ್ಬಂದಿ ಹನುಮಂತ ನಾಗನೂರ, ಮಂಜುನಾಥ ಬಳಗಪ್ಪನವರ, ಪ್ರವೀಣ ಯಡ್ರಾವಿ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ: ಖಾನಾಪುರ ತಾಲೂಕಿನ ಕಾಟಗಾಳಿ ಗ್ರಾಮದ ವ್ಯಾಪ್ತಿಯ ವಾಲ್ಮೀಕಿ ನಗರ ಪ್ರದೇಶದ ಅರಣ್ಯದಲ್ಲಿ ಶುಕ್ರವಾರ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತಯಾರಿಸಿದ 25 ಲೀಟರ್ ಕಳ್ಳಬಟ್ಟಿ ಸಾರಾಯಿ, 50 ಲೀಟರ್ ಬೆಲ್ಲದ ರಸಾಯನ, ಒಂದು ಬೈಕ್ ಹಾಗೂ ಕಳ್ಳಬಟ್ಟಿ ತಯಾರಿಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಲ್ಲಿ ಖಾನಾಪುರ ಅಬಕಾರಿ ನಿರೀಕ್ಷಕ ಮಹೇಶ ಪರೀಟ, ಉಪ ನಿರೀಕ್ಷಕ ರವಿ ನಾರಾಯಣ, ಸಿಬ್ಬಂದಿ ಹನುಮಂತ ನಾಗನೂರ, ಮಹಾಂತೇಶ ವಗ್ಗಿ, ಮಂಜುನಾಥ ಬಳಗಪ್ಪನವರ, ಪ್ರವೀಣ ಯಡ್ರಾವಿ ಇತರರು ಪಾಲ್ಗೊಂಡಿದ್ದರು. ಬೆಳಗಾವಿ ಅಬಕಾರಿ ಉಪ ಆಯುಕ್ತರು ಹಾಗೂ ಉಪ ಅಧೀಕ್ಷಕರ ಆದೇಶದ ಮೇರೆಗೆ ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts