More

    ಡೆಲಿವರಿ ಬಾಯ್​ ಸೋಗಿನಲ್ಲಿ ಕಳ್ಳತನ; ಆರೋಪಿಗಳ ಬಂಧನ

    ಬೆಂಗಳೂರು: ಡೆಲಿವರಿ ಬಾಯ್ ಸೋಗಿನಲ್ಲಿ ನಕಲೀ ಕೀ ಬಳಸಿ ಮನೆಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಕಳ್ಳ ಮತ್ತು ಈತನಿಗೆ ಸಹಕರಿಸಿದ ರೌಡಿಶೀಟರ್ ಸೇರಿ ಮೂವರನ್ನು ಬಂಧಿಸಿರುವ ಎಚ್‌ಎಸ್‌ಆರ್ ಲೇಔಟ್‌ನ ಪೊಲೀಸರು 75 ಲಕ್ಷ ರೂ. ಮೌಲ್ಯದ 1.5 ಕೆ.ಜಿ ಚಿನ್ನಾಭರಣ, ನಕಲಿ ಕೀಗಳು, ಟೂಲ್‌ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಡೆಲಿವರಿ ಬಾಯ್ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಪ್ರಕಾಶ್ ಅಲಿಯಾಸ್ ಬಾಲಾಜಿ, ಈತನಿಗೆ ಸಹಕರಿಸಿದ್ದ ಕೋಣನಕುಂಟೆ ರೌಡಿ ಶೀಟರ್ ಅನಿಲ್ ಮತ್ತು ಯಶವಂತ್​ ಬಂಧಿತರು.

    ಯಾರು ಇಲ್ಲದೆ ವೇಳೆ ಕೃತ್ಯ

    ಆರೋಪಿ ಬಾಲಾಜಿ ಪ್ರತಿಷ್ಠಿತ ಯೂರೋಪ್ ಮತ್ತು ಗೊದ್ರೇಜ್ ಕಂಪನಿಯ ಡೋರ್‌ಲಾಕ್‌ಗಳನ್ನು ಕ್ಷಣಾರ್ಧದಲ್ಲಿ ತೆಗೆಯುವ ಕೌಶಲ್ಯ ಹೊಂದಿದ್ದನು. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕದ್ದಿದ್ದ ಕೀಗಳನ್ನು ಬಳಸಿ ಕನ್ನಗಳವು ಮಾಡುತ್ತಿದ್ದನು. ಈತನ ಕೃತ್ಯಕ್ಕೆ ಅನಿಲ್ ಹಾಗೂ ಯಶವಂತ್​ ಸಹಕರಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

    ಮೂವರ ಬಂಧನಕ್ಕಾಗಿ ಎಚ್‌ಎಸ್‌ಆರ್ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಪ್ರತ್ಯೇಕ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ಕೈಗೊಂಡು ಆರೋಪಿ ಹಾಗೂ ಇನ್ನಿಬ್ಬರ ಬಗ್ಗೆ ಮಾಹಿತಿ ಸಂಗ್ರಹಿಸಿ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆರೋಪಿಗಳಿಂದ 75 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಡೆಲಿವರಿ ಬಾಯ್​ ಸೋಗಿನಲ್ಲಿ ಕಳ್ಳತನ; ಆರೋಪಿಗಳ ಬಂಧನ

    ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡ; ಪ್ರಕರಣದ 8 ಆರೋಪಿಗಳಿಗೆ ಜಾಮೀನು

    17 ಪ್ರಕರಣಗಳು ಪತ್ತೆ

    ಅನಿಲ್, ಯಶವಂತ್​​ ಇಬ್ಬರು ಕುಖ್ಯಾತ ಕಳ್ಳರಾಗಿದ್ದು, ಇವರ ಬಂಧನದಿಂದ ಬಂಡೇಪಾಳ್ಯದ ಮೂರು, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ ಎರಡು, ಬೊಮ್ಮನಹಳ್ಳಿ, ಹುಳಿಮಾವು, ಸದಾಶಿವನಗರ, ವಿವೇಕನಗರ, ಮಾರತಹಳ್ಳಿ ತಲಾ ಒಂದು ಸೇರಿ 12 ಮನೆಕಳವು ಪ್ರಕರಣ ಸೇರಿ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ.

    78 ಪ್ರಕರಣದಲ್ಲಿ ಭಾಗಿ

    18 ವರ್ಷಗಳಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ ಬಾಲಾಜಿ 2005ರಿಂದ ಇದುವರೆಗೂ ಬರೋಬ್ಬರಿ 78 ಪ್ರಕರಣದಲ್ಲಿ ಭಾಗಿಯಾಗಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದ. ಜಾಮೀನು ಪಡೆದು ಜೈಲಿಂದ ಬಿಡುಗಡೆಯಾದ ಬಳಿಕವೂ ಮತ್ತದೇ ಕೃತ್ಯದಲ್ಲಿ ತೊಡಗಿದ್ದ.

    ಈತನ ವಿರುದ್ದ 17 ವಾರೆಂಟ್‌ಗಳು ಪೆಂಡಿಂಗ್ ಇದೆ. ಫುಡ್​​​ ಡೆಲಿವೆರಿ ಬಾಯ್ ಸೋಗಿನಲ್ಲಿ ಸುತ್ತಾಡುತ್ತಿದ್ದ ಆರೋಪಿ ಯಾರೂ ಇರದ ಮನೆಗಳನ್ನ ಗುರುತಿಸಿಕೊಂಡು ನಕಲಿ ಕೀ ಬಳಸಿ ನುಗ್ಗುತ್ತಿದ್ದ. ನಂತರ ಮನೆಯಲ್ಲಿನ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ.

    ಕದ್ದ ಚಿನ್ನಾಭರಣದಲ್ಲಿ ಸ್ವಲ್ಪ ಅನಿಲ್ ಹಾಗೂ ಯಶವಂತ್​ಗೆ ನೀಡಿ ಅವರ ಮೂಲಕ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದ. ಬಂದ ಹಣದಲ್ಲಿ ಯುವತಿಯರ ಜತೆ ಮೋಜು ಮಾಡಿ, ಉಳಿದ ಚಿನ್ನವನ್ನ ಅವರಿಗೆ ಟಿಪ್ಸ್ ರೂಪದಲ್ಲಿ ಕೊಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts