More

    ಪ್ರಪಂಚದ ಕೊನೆಯ ಬಿಳಿ ಜಿರಾಫೆಯ ಕುಟುಂಬವೀಗ ಬರಿದು: ಕಳ್ಳ ಬೇಟೆಗಾರರಿಗೆ ಬಲಿಯಾದ ತಾಯಿ-ಮಗು

    ನೈರೋಬಿ: ಮನುಷ್ಯ ಸ್ವಾರ್ಥ ಜೀವಿ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಲಭಿಸಿದೆ. ಪ್ರಪಂಚದ ವಿಶಿಷ್ಟ ಪ್ರಾಣಿಗಳು ಅಂಚಿನಳಿವಿಗೆ ಸಾಗುತ್ತಿರುವ ಈ ಸಮಯದಲ್ಲಿ ಕೊನೆಯ ಬಿಳಿ ಜಿರಾಫೆಯ ಕುಟುಂಬವನ್ನೂ ಸಹ ಬರಿದು ಮಾಡುವ ಕೆಲಸ ನಡೆದಿದೆ. ಕೀನ್ಯಾದಲ್ಲಿರುವ ಮೂರು ಬಿಳಿ ಜಿರಾಫೆಗಳ ಪೈಕಿ ಎರಡು ಜಿರಾಫೆಗಳನ್ನು ಕಳ್ಳ ಬೇಟೆಗಾರರು ಕೊಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಕೀನ್ಯಾದಲ್ಲಿ 2017ರಲ್ಲಿ ಹೆಣ್ಣು ಬಿಳಿ ಜಿರಾಫೆಯೊಂದು ತನ್ನ ಎರಡು ಮರಿಗಳ ಜತೆ ಪತ್ತೆಯಾಗಿತ್ತು. ಅಂದಿನಿಂದ ಅಭಯಾರಣ್ಯದಲ್ಲಿ ಜಿರಾಫೆಯನ್ನು ಸಾಕಲಾಗುತ್ತಿತ್ತು. ಪ್ರಪಂಚದ ಕೊನೆಯ ಬಿಳಿ ಜಿರಾಫೆಯ ಕುಟುಂಬವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದರು. ಇದರಿಂದ ದೇಶದ ಪ್ರವಾಸೋದ್ಯಮ ಇಲಾಖೆಗೂ ಸಾಕಷ್ಟು ಲಾಭವಾಗಿತ್ತು.

    ಪ್ರವಾಸೋದ್ಯಮದ ಚಿನ್ನದ ಕಣಜವಾಗಿದ್ದ ಈ ಜಿರಾಫೆಯ ಕುಟುಂಬದ ತಾಯಿ ಮತ್ತು ಒಂದು ಕರು ಕೆಲ ತಿಂಗಳುಗಳಿಂದ ಕಾಣೆಯಾಗಿತ್ತು. ಅದಕ್ಕೆಂದು ಸಾಕಷ್ಟು ಹುಡುಕಾಟ ಮಾಡಲಾಗಿದ್ದು, ಇದೀಗ ಅದರ ಅಳಿದುಳಿದ ಮೂಳೆಗಳು ಲಭ್ಯವಾಗಿವೆ. ಕಳ್ಳ ಬೇಟೆಗಾರರು ಹೆಣ್ಣು ಜಿರಾಫೆ ಮತ್ತು ಅದರ ಒಂದು ಮರಿಯನ್ನು ಕೊಂದಿದ್ದಾರೆ ಎಂದು ಅಲ್ಲಿನ ಮೀಸಲು ವ್ಯವಸ್ಥಾಪಕರಾಗಿರುವ ಮೊಹಮ್ಮದ್​ ಅಹ್ಮದ್ನೂರ್​ ತಿಳಿಸಿದ್ದಾರೆ.

    ಇದು ದೇಶಕ್ಕೆ ಅತ್ಯಂತ ದೊಡ್ಡ ನಷ್ಟವಾಗಿದ್ದು, ಬಿಳಿ ಜಿರಾಫೆಯ ಕುರಿತಾಗಿ ಸಂಶೋಧಕರು ನಡೆಸುತ್ತಿದ್ದ ಸಂಶೋಧನೆಗೆ ದೊಡ್ಡ ಹೊಡೆತ ನೀಡಿದೆ ಎಂದು ಅವರು ತಿಳಿಸಿದ್ದಾರೆ.

    ಪ್ರಾಣಿಗಳ ಚರ್ಮ ಕೋಶದಲ್ಲಿ ವರ್ಣದ್ರವ್ಯವನ್ನು ಉಂಟು ಮಾಡುವ ಶಕ್ತಿ ವಿಫಲವಾದಾಗ ಅವು ಬಿಳಿ ಬಣ್ಣದಲ್ಲಿ ಹುಟ್ಟುತ್ತವೆ. ಇದನ್ನು ಲ್ಯೂಸಿಸಮ್​ ಎಂದು ಕರೆಯಲಾಗುತ್ತದೆ. (ಏಜೆನ್ಸೀಸ್​)

    ಕರೊನಾ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡ ಉದ್ಯೋಗಿಗಳಿಗೆ ರಜೆ ನೀಡಿ: ಖಾಸಗಿ ಸಂಸ್ಥೆಗಳಿಗೆ ಸಲಹೆ

    ಮಧ್ಯಪ್ರದೇಶದಲ್ಲಿ ಅಧಿಕಾರ ‘ಕೈ’ ಜಾರುತ್ತಿದ್ದರೂ ಕಳೆದಿಲ್ಲ ಭರವಸೆ; ಸಿಎಂ ಕಮಲ್​ನಾಥ್​ ಪುತ್ರ ನಕುಲ್​ ಮಾತುಗಳ ಅರ್ಥ ಏನಿರಬಹುದು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts