More

    ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ?

    ನವದೆಹಲಿ: ರಾಜ್ಯಸಭೆಗೆ ನಾಲ್ವರು ಖ್ಯಾತ ಗಣ್ಯವ್ಯಕ್ತಿಗಳನ್ನು ನೇಮಕ ಮಾಡಿರುವ ಆಡಳಿತಾರೂಢ ಬಿಜೆಪಿ ಈ ಮೂಲಕ ಬಹುತೇಕ ಭೇಷ್ ಎನಿಸಿಕೊಂಡಿದೆ. ಇದು ಕೂಡ ಅಚ್ಚರಿ ಮೂಡಿಸುವಂಥ ನೇಮಕವೇ ಆಗಿದ್ದರೂ, ಬಹುತೇಕ ಎಲ್ಲರೂ ಒಪ್ಪುವಂಥ ನೇಮಕವೂ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ದಕ್ಷಿಣ ಭಾರತಕ್ಕೇ ಆದ್ಯತೆ

    ಸಾಮಾನ್ಯವಾಗಿ ಕೇಂದ್ರ ಸರ್ಕಾರ ಉತ್ತರ ಭಾರತೀಯರಿಗೇ ಮಣೆ ಹಾಕುತ್ತದೆ, ದಕ್ಷಿಣ ಭಾರತವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಅಲ್ಲಲ್ಲಿ ಕೇಳಿ ಬಂದಿದೆ. ಆದರೆ ಈ ಸಲ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೇ ಆದ್ಯತೆ ನೀಡಿದೆ. ಏಕೆಂದರೆ ನೇಮಕಗೊಂಡಿರುವ ನಾಲ್ವರೂ ದಕ್ಷಿಣ ಭಾರತದವರು.

    ಪ್ರಾದೇಶಿಕ ನ್ಯಾಯ

    ರಾಜ್ಯಸಭೆಗೆ ನಾಲ್ವರು ದಕ್ಷಿಣ ಭಾರತದವರನ್ನು ಆಯ್ಕೆ ಮಾಡಿದ್ದಷ್ಟೇ ಅಲ್ಲದೆ, ಕೇಂದ್ರ ಸರ್ಕಾರ ಈ ವಿಷಯದಲ್ಲಿ ಪ್ರಾದೇಶಿಕ ನ್ಯಾಯವನ್ನೂ ಮೆರೆದಿದೆ. ಅದೇನೆಂದರೆ ನಾಲ್ವರೂ ಬೇರೆ ಬೇರೆ ರಾಜ್ಯದವರು. ಕರ್ನಾಟಕದ ಡಾ.ವೀರೇಂದ್ರ ಹೆಗ್ಗಡೆ, ಕೇರಳದ ಪಿ.ಟಿ.ಉಷಾ, ತಮಿಳುನಾಡಿನ ಇಳಯರಾಜ, ಆಂಧ್ರಪ್ರದೇಶದ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.

    ವೈವಿಧ್ಯಮಯ ಆಯ್ಕೆ

    ಈ ಸಲದ ನಾಲ್ವರ ನೇಮಕದ ಮೂಲಕ ನಾಲ್ಕು ವಿಭಿನ್ನ ಕ್ಷೇತ್ರಕ್ಕೂ ಮನ್ನಣೆ ನೀಡಿದಂತಾಗಿದೆ. ಆ ಮೂಲಕ ವಿಭಿನ್ನ ಮನಸ್ಥಿತಿಯ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಲಾಗಿದೆ. ಹೆಗ್ಗಡೆಯವರ ಆಯ್ಕೆ ಮೂಲಕ ಧಾರ್ಮಿಕ-ಸಾಂಸ್ಕೃತಿಕ-ಶೈಕ್ಷಣಿಕ ಕ್ಷೇತ್ರದವರನ್ನು, ಪಿ.ಟಿ. ಉಷಾ ಆಯ್ಕೆ ಮೂಲಕ ಕ್ರೀಡಾಕ್ಷೇತ್ರದವರನ್ನು, ಇಳಯರಾಜ ಆಯ್ಕೆ ಮೂಲಕ ಸಂಗೀತ ಕ್ಷೇತ್ರದವರನ್ನು ಹಾಗೂ ವಿಜಯೇಂದ್ರಪ್ರಸಾದ್ ಅವರ ಆಯ್ಕೆ ಮೂಲಕ ಸಿನಿಮಾ/ಸಾಹಿತ್ಯ ಕ್ಷೇತ್ರದವರನ್ನು ಮೆಚ್ಚಿಸುವ ಕೆಲಸ ಮಾಡಲಾಗಿದೆ.

    ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ? ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ? ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ? ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ? ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ?

    ಗುಂಪು ಘರ್ಷಣೆ: ಇಬ್ರಿಗೆ ಚೂರಿ ಇರಿತ; 2 ತಳ್ಳುಗಾಡಿಗಳಿಗೆ ಬೆಂಕಿ, 5 ಬೈಕ್ ಜಖಂ!

    ಹೀಗೂ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನಿರ್ದೇಶಕ ಅನೂಪ್ ಭಂಡಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts