More

    ಡಿಸಿಎಂ ಸೃಷ್ಟಿ ಬಗ್ಗೆ ಮತ್ತೆ ಚರ್ಚೆ

    ಬೆಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಮತ್ತಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ನಲ್ಲಿ ಐದು ಡಿಸಿಎಂ ಸೃಷ್ಟಿ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿತ್ತು. ಬಳಿಕ ಹೈಕಮಾಂಡ್ ಎಲ್ಲರ ಬಾಯಿಗೆ ಬೀಗ ಹಾಕಿತ್ತು.
    ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ‘ತಮಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದು ಬಿಡುವುದು ಹೈಕಮಾಂಡ್‌ಗೆ ಸೇರಿದ್ದು. ನಾವು ಅದರ ಬಗ್ಗೆ ಹೇಳಿದ್ದೆವು. ಈಗ ಪಕ್ಷ ನಿರ್ಧಾರ ಮಾಡಬೇಕಿದೆ’ ಎಂದು ಹೇಳಿದ್ದಾರೆ.
    ಈ ಮೂಲಕ ಪಕ್ಷದ ಮುಂದೆ ತಮ್ಮ ಅಭಿಲಾಷೆಯನ್ನು ಮತ್ತೊಮ್ಮೆ ಹೊರಗೆಡಹಿದ್ದಾರೆ. ಅಷ್ಟೇ ಅಲ್ಲದೇ ಮುಂದುವರಿದ ಚರ್ಚೆಗೂ ನಾಂದಿ ಹಾಡಿದ್ದಾರೆ. ಪ್ರಸ್ತುತ ಸಿದ್ದರಾಮಯ್ಯ ಸಂಪುಟದಲ್ಲಿ ಡಿ.ಕೆ.ಶಿವಕುಮರ್ ಏಕ ಮಾತ್ರ ಉಪ ಮುಖ್ಯಮಂತ್ರಿ. ಅವರನ್ನು ಹೊರತುಪಡಿಸಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ, ಲಿಂಗಾಯತರೊಬ್ಬರಿಗೆ ಡಿಸಿಎಂ ಮಾಡಬೇಕು ಎಂಬುದು ಪ್ರಬಲ ಬೇಡಿಕೆ.
    ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ ಲಿತಾಂಶ ಬರಬೇಕೆಂದರೆ ಜಾತಿ ವಾರು ಡಿಸಿಎಂ ಸೃಷ್ಟಿಮಾಡಿ ಎಂದು ಸಚಿವರು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು. ಈ ಪ್ರಸ್ತಾವನೆಗೆ ಡಿ.ಕೆ.ಶಿವಕುಮಾರ್ ಅಸಹನೆ ಹೊರಹಾಕಿದ್ದರು.
    ಬಳಿಕ ಹೈಕಮಾಂಡ್ ಹಂತಕ್ಕೂ ಹೋಗಿತ್ತಲ್ಲದೇ, ಯಾರೂ ಸಹ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮತನಾಡಬಾರದು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಎಚ್ಚರಿಕೆ ಸಂದೇಶ ಕಳಿಸಿದ್ದರು.
    ಲೋಕಸಭೆ ಚುನಾವಣೆ ಬಳಿಕ ಸಂಪುಟ ಪುನಾರಚನೆ ಆಗಬಹುದೆಂಬ ಕುರಿತು ಚರ್ಚೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ಸಂಪುಟ ಪುನಾರಚನೆ ವಿಚಾರವನ್ನು ಮುಖ್ಯಮಂತ್ರಿಯವರಲ್ಲೇ ಕೇಳಬೇಕು. ಸಚಿವರಿಗಂತೂ ಯಾವ ಟಾಸ್ಕ್, ಷರತ್ತು. ಕೊಟ್ಟಿರಲಿಲ್ಲ. ಗೆಲ್ಲಿಸಿಕೊಂಡು ಬರಲೇಬೇಕೆಂದೇನು. ಹೇಳಿರಲಿಲ್ಲ. ಹಾಗೊಂದು ಸೂಚನೆ ಇದ್ದಿದ್ದರೆ ಹೈಕಮಾಂಡ್ ನಿಂದ ಬರಬೇಕಿತ್ತು ಅಲ್ಲವೇ. ಇಂಗ್ಲೆಂಡ್‌ನಂತೆ ನಮ್ಮಲ್ಲಿ ಪರಿಸ್ಥಿತಿ ಇಲ್ಲ ಎಂದು ಸೂಚ್ಯವಾಗಿ ಹೇಳಿದರು.
    ಲೋಕಸಭೆ ಚುನಾವಣೆ ಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ, 28 ಸ್ಥಾನದ ಪೈಕಿ ಬಿಜೆಪಿಯವರು 14 ಸ್ಥಾನದಲ್ಲಿ, ನಾವು 14ರಲ್ಲಿ ಗೆಲ್ಲುತ್ತೇವೆ. ಸಮಾನವಾಗಿದ್ದರೆ ಯಾರ ಮೇಲೂ ಆಪಾದನೆ ಮಾಡಲಾಗಲ್ಲ. ಹೈದ್ರಾಬಾದ್ ಕರ್ನಾಟಕದಲ್ಲಿ 5 ಸ್ಥಾನ ಗೆಲ್ಲುತ್ತೇವೆ, ಕಿರ್ತೂರು ಕರ್ನಾಟಕದಲ್ಲೂ ಮೂರ್ನಾಲ್ಕು ಬರ್ತೇವೆ. ಗ್ಯಾರೆಂಟಿಗಳು ಉತ್ತರದಲ್ಲಿ ವರ್ಕೌಟ್ ಆಗಿವೆ. ಗ್ಯಾರೆಂಟಿಗಳು ನಮಗೆ ಅನುಕೂಲವಾಗಿವೆ. ನೇಹಾ ಪ್ರಕರಣ ಆ ಕ್ಷೇತ್ರಕ್ಕೆ ಸೀಮಿತವಾಗಿದೆ ಎಂದು ಸತೀಶ್ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts