More

    ಮೈತ್ರಿ ಬಗ್ಗೆ ಬಿಜೆಪಿಯಲ್ಲಿ ನಿಲ್ಲದ ಬೇಗುದಿ; ರಾಜಕೀಯ ಲಾಭ ನಷ್ಟದ ಲೆಕ್ಕಚಾರ

    ಬೆಂಗಳೂರು:
    ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎನ್ನುವಂತೆ ಬಿಜೆಪಿಯೊಳಗಿನ ಮೈತ್ರಿ ಬೇಗದಿ ನಾನಾ ಹೇಳಿಕೆ ರೂಪದಲ್ಲಿ ಇನ್ನೂ ಹೊರಬರುತ್ತಲೇ ಇದೆ.
    ಜೆಡಿಎಸ್ ಜೊತೆಗೆ ಮೈತ್ರಿ ಆಗುವುದು ಬಿಜೆಪಿಯಲ್ಲಿ ಒಂದು ವರ್ಗಕ್ಕೆ ಸುತರಾಂ ಇಷ್ಟವಿಲ್ಲ. ತಟಸ್ಥ ಮನೋಧೋರಣೆಯಲ್ಲಿರುವ ಹಲವು ನಾಯಕರು ತಮ್ಮ ಅಭಿಪ್ರಾಯ ಹೇಳಲೂ ಆಗದೆ, ಬಿಡಲೂ ಆಗದೆ ಮೌನಕ್ಕೆ ಶರಣಾಗಿದ್ದಾರೆ. ಮತ್ತೊಂದು ವರ್ಗ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಂಡರೂ ಅದು ಸರಿಯಾದ ತೀರ್ಮಾನವೇ ಆಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ.
    ಹೈಕಮಾಂಡ್ ಹಂತದಲ್ಲಿ ಆಗಿರುವ ಮೈತ್ರಿ ತೀರ್ಮಾನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮತಿ ನೀಡಿರುವುದರಿಂದ ಅವರ ಬಳಗ ಇಕ್ಕಟ್ಟಿನಲ್ಲಿ ಸಿಲುಕಿದೆ. ಮೈತ್ರಿ ಆಗುವುದು ಮೈಸೂರು, ಶಿವಮೊಗ್ಗ ಮತ್ತಿತರ ಭಾಗದಲ್ಲಿ ಕೆಲವರಿಗೆ ಚುನಾವಣೆಯಲ್ಲಿ ವರದಾನವಾಗಿದ್ದರೆ, ಜೆಡಿಎಸ್ ಭದ್ರನೆಲೆಯಿರುವ ಗೌಡರ ತವರು ಹಾಸನ ಸೇರಿದಂತೆ ಕೆಲವು ಕಡೆಯಲ್ಲಿ ಸಂಕಷ್ಟ ತಂದಿದೆ.
    ಮೈತ್ರಿ ಬಗ್ಗೆಯೇ ಯಡಿಯೂರಪ್ಪ ಅವರ ಬಣದಲ್ಲಿ ಕೆಲ ಶಾಸಕರು ಮತ್ತು ಮಾಜಿ ಶಾಸಕರ ಅಪಸ್ವರವೂ ಇದೆ. ಈ ನಿಟ್ಟಿನಲ್ಲಿ ಬಹಳಷ್ಟು ಶಾಸಕರು ಮತ್ತು ಮಾಜಿ ಶಾಸಕರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಖುದ್ದು ಭೇಟಿ ಮಾಡಿ, ಈ ಬಗ್ಗೆ ಚರ್ಚೆ ಮಾಡಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಆದರೆ, ಯಾವುದಕ್ಕೂ ಸ್ಪಷ್ಟ ಪ್ರತಿಕ್ರಿಯೆ ನೀಡದ ಬಿಎಸ್‌ವೈ, ಇದೆಲ್ಲವೂ ಹೈಕಮಾಂಡ್ ಹಂತದಲ್ಲಿ ಆಗುತ್ತಿರುವ ಬೆಳವಣಿಗೆ. ಮುಂದೆ ಒಳ್ಳೆಯದಾಗುತ್ತದೆ ಕಾದು ನೋಡೋಣ ಎಂದಷ್ಟೆ ಹೇಳಿ ತಮ್ಮ ಬಣವನ್ನು ಸಂಬಾಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ಹಠದ ಕಾರಣಕ್ಕಾಗಿಯೇ ತೆಗದುಕೊಂಡ ಹಲವು ತಪ್ಪು ನಿರ್ಣಯಗಳ ಲವಾಗಿ ಲಿತಾಂಶದಲ್ಲಿ ಭಾರಿ ವ್ಯತ್ಯಾಸವಾಯಿತು ಎನ್ನುವ ನೋವು ಬಿಎಸ್‌ವೈ ಬಣದಲ್ಲಿ ಆಳವಾಗಿ ಬೇರೂರಿದೆ. ಮತ್ತೊಂದೆಡೆ ಜೆಡಿಎಸ್ ಮೈತ್ರಿಯಿಂದ ಸಂತೋಷ್ ಬಣಕ್ಕೆ ಒಂದಿಷ್ಟು ಕಡಿವಾಣ ಹಾಕಬಹುದು ಎನ್ನುವ ಲೆಕ್ಕಾಚಾರವೂ ಅವರ ಆಪ್ತ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
    ಲೋಕಸಭೆ ಚುನಾವಣೆಯಲ್ಲಿ ತಮಗೇನು ಲಾಭ ಆಗಬಹುದು ಎನ್ನುವ ನಿರೀಕ್ಷೆಯಲ್ಲಿಯೂ ಹಲವರಿದ್ದು, ಈ ನಿಟ್ಟಿನಲ್ಲಿ ಈಗಲೂ ಲಾಭ ನಷ್ಟದ ಲೆಕ್ಕಾಚಾರದಲ್ಲಿದ್ದಾರೆ.
    ಸದಾ ಹೈಕಮಾಂಡ್ ತೀರ್ಮಾನವನ್ನು ಸಮರ್ಥಿಸಿಕೊಳ್ಳುವ ಮಾಜಿ ಸಚಿವರಾದ ಸಿ.ಟಿ.ರವಿ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸ್ವಪಕ್ಷದ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಯ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ವರಿಷ್ಠರು ಸದ್ಯದಲ್ಲಿಯೇ ರಾಜ್ಯಕ್ಕೆ ಬಂದು ಮೈತ್ರಿ ವಿಚಾರದಲ್ಲಿನ ಗೊಂದಲಗಳನ್ನು ನಿವಾರಣೆ ಮಾಡಲಿದ್ದಾರೆ. ಅಲ್ಲಿಯ ತನಕ ಅಭಿಪ್ರಾಯ ಬೇಧಗಳು ಇರುತ್ತವೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.

    *ವರಿಷ್ಠರ ತೀರ್ಮಾನ ಬಗ್ಗೆ ಎಸ್.ಟಿ.ಸೋಮಶೇಖರ್ ಬಹಿರಂಗವಾಗಿ ಮಾತನಾಡಿರುವುದು ಸರಿಯಲ್ಲ. ಅವರು ಏನು ಎನ್ನುವುದನ್ನು ಸಂದರ್ಭ ಬಂದಾಗ ಮಾತನಾಡುತ್ತೇನೆ.
    -ಸಿ.ಟಿ.ರವಿ, ಮಾಜಿ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts