More

    ವಸತಿ ಶಾಲೆ ಮಕ್ಕಳಿಗಿಲ್ಲ ಪ್ರವಾಸ ಭಾಗ್ಯ: ನಮ್ಮನ್ನೂ ಟೂರ್‌ಗೆ ಕಳಿಸಿ ಎಂದ ಮಕ್ಕಳು

    ಬೆಂಗಳೂರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಅವಕಾಶವಿದ್ದು, ಉಳಿದ ವಿದ್ಯಾರ್ಥಿಗಳು ಪ್ರವಾಸದಿಂದ ವಂಚಿತರಾಗುತ್ತಿದ್ದಾರೆ.

    9 ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ. ಇದೇ ಆದೇಶವು ಉಳಿದ ತರಗತಿಗಳ ವಿದ್ಯಾರ್ಥಿಗಳಿಗೆ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.

    2019ರ ವರೆಗೂ 6ರಿಂದ 12ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಪ್ರವಾಸಕ್ಕೆ ಅನುಮತಿ ನೀಡಲಾಗಿತ್ತು. 2019ರ ನಂತರ ಕೇವಲ 2 ತರಗತಿಗಳಿಗೆ ಮಾತ್ರ ಅನುಮತಿ ನೀಡಿದೆ. ಉಳಿದ ತರಗತಿಗಳನ್ನು ಪರಿಗಣಿಸುತ್ತಿಲ್ಲ ಎನ್ನುತ್ತಾರೆ.

    ಕಾರಣಗಳೇನು?
    ಪ್ರವಾಸದ ಸಮಯದಲ್ಲಿ 6ರಿಂದ 8ನೇ ತರಗತಿವರೆಗಿನ ಮಕ್ಕಳ ನಿರ್ವಹಣೆ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳಿಗೆ ಅವಕಾಶ ನೀಡುತ್ತಿಲ್ಲ. ಇನ್ನು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ಲಿತಾಂಶದ ಹಿತದೃಷ್ಟಿಯಿಂದ ಕರೆದುಕೊಂಡು ಹೋಗುತ್ತಿಲ್ಲವೆಂದು ಕೆಲವು ಶಿಕ್ಷಕರು ಮಾಹಿತಿ ನೀಡಿದ್ದಾರೆ.

    ಶೈಕ್ಷಣಿಕ ಪ್ರವಾಸಕ್ಕೆ ಇಲಾಖೆಯಿಂದಲೇ ಅನುದಾನ ನೀಡಬೇಕಿದೆ. ಎಲ್ಲ ಮಕ್ಕಳಿಗೂ ನೀಡಲು ಸಾಕಷ್ಟು ಹಣ ಬೇಕಾಗುತ್ತದೆ. ಆದ್ದರಿಂದ ವಸತಿ ಶಾಲೆಯಲ್ಲಿ ಒಂದು ಬಾರಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಉದ್ದೇಶದಿಂದ ಈ ರೀತಿಯ ನಿಯಮಗಳನ್ನು ತರಲಾಗಿದೆ ಎಂದು ವಸತಿ ಶಾಲೆಯ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಾಲಕರ ಅನುಮತಿ ಪಡೆಯುವುದು ಕಡ್ಡಾಯ

    ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ರವಾಸ ಕೈಗೊಳ್ಳಲು ಕಡ್ಡಾಯವಾಗಿ ಪಾಲಕರ ಅನುಮತಿ ಪಡೆಯಬೇಕು. ಪ್ರವಾಸದ ನಂತರ ಖರ್ಚಿನ ಬಾಬ್ತು ಲೆಕ್ಕಪತ್ರಗಳನ್ನು ಇಲಾಖೆಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಬಲವಂತವಾಗಿ ಹಣ ಸಂಗ್ರಹಿಸಿ ಪ್ರವಾಸ ಕೈಗೊಳ್ಳಬಾರದು. ಡಿಸೆಂಬರ್ ತಿಂಗಳೊಳಗೆ ಪ್ರವಾಸ ಕೈಗೊಳ್ಳಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಕರು ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts