More

    ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಇಲ್ಲ

    ಸಾಗರ: ಅಭಿವೃದ್ಧಿ ಕೆಲಸದಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ, ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ರಾಜ್ಯದಲ್ಲಿ ನಿಮ್ಮ ಸರ್ಕಾರವಿದೆ. ಅನುದಾನ ತಂದು ಅಭಿವೃದ್ಧಿ ಮಾಡೋಣ, ನಾನು ಸ್ಥಳೀಯ ಶಾಸಕರಿಗೆ ಎಂದು ಪ್ರತಿಸ್ಪಽðಯಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ನಗರದಲ್ಲಿ ಸೋಮವಾರ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಮೋರ್ಚಾಗಳ ಸಮಾವೇಶದಲ್ಲಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಅನುದಾನ ತರಲಾಗಿದೆ. ಕಾರ್ಯಕರ್ತರು ಕ್ಷೇತ್ರದಲ್ಲಾಗಿರುವ ಕೆಲಸವನ್ನು ಜನರ ಮನೆಮನೆಗೆ ತಲುಪಿಸಬೇಕು ಎಂದರು.
    ಈ ಬಾರಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗ ಜಿಲ್ಲೆಗೆ ನಯಾಪೈಸೆ ಕೊಟ್ಟಿಲ್ಲ. ೨೦೦೯ರಿಂದ ೨೦೨೨ರವರೆಗೆ ಶಿವಮೊಗ್ಗ ಜಿಲ್ಲೆಗೆ ಅನುದಾನದ ಸುವರ್ಣ ಯುಗವಾಗಿತ್ತು. ಸದ್ಯದಲ್ಲಿಯೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ತಾಳಗುಪ್ಪ-ಸಿದ್ದಾಪುರ ರೈಲ್ವೆ ಯೋಜನೆ ವಿಸ್ತರಣೆಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
    ಕಾಂಗ್ರೆಸ್‌ನವರು ಅಂಬೇಡ್ಕರ್ -ೆÇÃಟೋ ಬಳಸಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಅವರು ಚುನಾವಣೆಗೆ ಸ್ಪಽðಸಿದ್ದಾಗ ಕಾಂಗ್ರೆಸ್ಸಿಗರು ನಡೆದುಕೊಂಡ ನೀತಿ ರೀತಿ ಎಲ್ಲರಿಗೂ ಗೊತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರು ಬಾಳಿ ಬದುಕಿದ ಊರನ್ನು ಅಭಿವೃದ್ಧಿಪಡಿಸಿದ್ದಾರೆ. ಸಂವಿಧಾನವನ್ನು ನೀಡಿದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರಿಗೆ ನಿಜವಾದ ಗೌರವವನ್ನು ನಮ್ಮ ಪಕ್ಷ ಸಲ್ಲಿಸುತ್ತಿದೆ. ನಾವು ಎಂದಿಗೂ ಚುನಾವಣೆಗೋಸ್ಕರ ಅಭಿವೃದ್ಧಿ ಮತ್ತು ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮೂಲಕ ಅಽಕಾರಕ್ಕೆ ಬಂದಿದೆ. ಚುನಾವಣೆ ಮುನ್ನ ನೀಡಿದ ಭರವಸೆ ಒಂದಾದರೆ ಈಗ ನಡೆದುಕೊಳ್ಳುತ್ತಿರುವುದು ಅದಕ್ಕೆ ತದ್ವಿರುದ್ಧ. ಪದವೀಧರರಿಗೆ ಮಾಸಾಶನ ಕೊಡುತ್ತೇವೆ ಎಂದಿದ್ದ ಕಾಂಗ್ರೆಸ್ ಈಗ ೨೦೨೨-೨೩ನೇ ಸಾಲಿನ ಪದವೀಧರರಿಗೆ ಮಾತ್ರ ಎಂದು ಕಂಡಿಷನ್ ಹಾಕಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿತ್ತು. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಹೊರತುಪಡಿಸಿ ರಾಜ್ಯದ ಜನರಿಗೆ 10 ಕೆಜಿ ಅಕ್ಕಿಯನ್ನು ಕೊಡಬೇಕು. ಎಲ್ಲ ಪಡಿತರ ಚೀಟಿದಾರರ ಖಾತೆಗೆ 10 ಕೆಜಿ ಅಕ್ಕಿ ಹಣವನ್ನು ಜಮೆ ಮಾಡಬೇಕು. ವಿದ್ಯುತ್ ದರವನ್ನು ದಿಢೀರನೇ ಏರಿಸಿದ್ದರಿಂದ ಜನರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ಳುತ್ತಿದೆ. ಒಂದು ರೀತಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಪ್ರಸನ್ನ ಕೆರೆಕೈ, ಮಧುರಾ ಶಿವಾನಂದ್, ಮಾಲತೇಶ್, ವಿ.ಮಹೇಶ್, ಎಸ್.ಕೆ.ಪ್ರಭಾವತಿ, ಲೋಕನಾಥ ಬಿಳಿಸಿರಿ, ಗಣೇಶಪ್ರಸಾದ್, ಸಂತೋಷ್, ಪ್ರದೀಪ್ ಆಚಾರಿ ಇದ್ದರು.

    ಬಿಜೆಪಿ ಸೋತರೆ ದೇಶ ಸೋತಂತೆ
    ಮುAದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ಕೈಗೊಳ್ಳಬೇಕಾಗಿದೆ. ಬಿಜೆಪಿ ಸೋತರೆ ದೇಶ ಸೋತಂತೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು. ರಾಘವೇಂದ್ರ ಅನುಕರಣೀಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಸಾಗರದ ಬಿ.ಎಚ್.ರಸ್ತೆ ಅಗಲೀಕರಣ, ತುಮರಿ ಸೇತುವೆ ನಿರ್ಮಾಣದಂತಹ ವಿಶೇಷ ಯೋಜನೆ ತಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾವು ಮೈಮರೆಯುವುದು ಬೇಡ. ಹಾಲಿ ಸಾಗರ ಕ್ಷೇತ್ರದಲ್ಲಿ ದಬ್ಬಾಳಿಕೆ, ದೌರ್ಜನ್ಯ ಪ್ರಾರಂಭವಾಗಿದೆ. ಈಗಾಗಲೇ ಉಪ್ಪಳ್ಳಿ, ಉಳ್ಳೂರು, ಕೋಟೆಕೊಪ್ಪ, ಸಾಗರ ನಗರದಲ್ಲಿಯೂ ಜಾಗದ ಅತಿಕ್ರಮಣ ಆರಂಭಗೊAಡಿದೆ. ಬರುವ ದಿನಗಳಲ್ಲಿ ಇದಕ್ಕೆಲ್ಲ ಹೋರಾಟದ ಮೂಲಕ ಪಕ್ಷ ಉತ್ತರ ಕೊಡುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts