More

    ಅಭಿವೃದ್ಧಿಗೆ ಅನುದಾನ ಕೊಡಲು ಖಜಾನೆಯಲ್ಲಿ ಹಣವಿಲ್ಲ: ನಿಖಿಲ್ ಕುಮಾರಸ್ವಾಮಿ ಆರೋಪ

    ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ದಿ ಕುಂಠಿತವಾಗಿ ಸಿಎಂ, ಡಿಸಿಎಂ, ಸಚಿವರು ಆದರ ಬಗ್ಗೆ ಮೊದಲು ಉತ್ತರ ಕೊಡಲಿ. ಆಮೇಲೆ ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಎನ್ನುವ ಬಗ್ಗೆ ಮಾತಾಡಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
    ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ ಎಂಬ ಸಿಎಂ, ಡಿಸಿಎಂ, ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಾತ್ಯತೀತ ಎನ್ನುವುದು ಪ್ರಶ್ನೆ ಅಲ್ಲ. ಕರ್ನಾಟಕದಲ್ಲಿ ಕನ್ನಡಿಗರು ನೋವು ಅನುಭವಿಸುತ್ತಿದ್ದು, ಅವರ ನೋವಿಗೆ ಸ್ಪಂದಿಸಬೇಕಿದೆ ಎಂದರು.
    ಎಂಎಲ್‌ಎಗಳಿಗೆ ಕರೆ ಮಾಡಿ ಕೇಳಿ ಕ್ಷೇತ್ರಗಳಿಗೆ ಅನುದಾನ ಕೊಡಲು ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಇದರ ಬಗ್ಗೆ ಮೊದಲು ಕಾಂಗ್ರೆಸ್ ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.

    ರಾಜಕೀಯ ಸಲ್ಲದು

    ರಾಮಮಂದಿರ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಯಾವುದೇ ರಾಜಕೀಯ ಪಕ್ಷಗಳು ರಾಜಕೀಯ ಮಾಡಬಾರದು. ರಾಮಮಂದಿರ ಎನ್ನುವುದು ನಮ್ಮ ಹೆಮ್ಮೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.

    ಕೋಲಾರ ಮುಖಂಡರ ಸಭೆ

    ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ 8 ಕ್ಷೇತ್ರಗಳ ನಾಯಕರ ಸಭೆ ಮಾಡಿದ್ದೇವೆ. ಪ್ರತಿಯೊಬ್ಬರ ಜತೆ ಕುಳಿತುಕೊಂಡು ಯಾವ ರೀತಿ ಮುಂದೆ ಚುನಾವಣೆ ನಡೆಸಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ಸಂಭಾವ್ಯ ಅಭ್ಯರ್ಥಿಗಳ ಚರ್ಚೆ ವಿಚಾರ, ಜನರ ಅಭಿಪ್ರಾಯ ಏನು ಎಂಬ ಕುರಿತು ಚರ್ಚೆ ಮಾಡಿದ್ದೇವೆ ಎಂದರು.

    ಅಣ್ಣತಮ್ಮಂದಿರಂತೆ ದುಡಿಯುತ್ತೇವೆ

    ನಮಗೆ ಸಿಗೋ ಸ್ಥಾನ ನಾವು ಗೆಲ್ಲಬೇಕು. 28 ಕ್ಷೇತ್ರಗಳಲ್ಲಿ 28 ಕ್ಷೇತ್ರ ಬಿಜೆಪಿ-ಜೆಡಿಎಸ್ ಗೆಲ್ಲಬೇಕು.ಅದಕ್ಕಾಗಿ ಅಣ್ಣ-ತಮ್ಮಂದಿರ ರೀತಿ ದುಡಿಯುತ್ತೇವೆ ಎಂದು ಹೇಳಿದರು.
    ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಕುರಿತ ಪ್ರಶ್ನೆಗೆ, ಜ.22 ರಂದು ನನ್ನ ಹುಟ್ಟುಹಬ್ಬ.
    ಇದು ಕಾಕತಾಳೀಯ ಏನೋ ಗೊತ್ತಿಲ್ಲ. ಅಂದು ಐತಿಹಾಸಿಕವಾದ ಕ್ಷಣ. ರಾಮಮಂದಿರ ನಿರ್ಮಾಣ ಆಗುತ್ತಿದೆ. ಇಡೀ ದೇಶ ಎದುರು ನೋಡುತ್ತಿರುವ ಕ್ಷಣ ಅದು. ಇದಕ್ಕಿಂತ ಖುಷಿ ವಿಚಾರ ಯಾವುದು ಇಲ್ಲ. ಪ್ರತಿಯೊಬ್ಬ ಭಾರತೀಯನಿಗೂ ಸಂತೋಷದ ದಿನ. ಹೀಗಾಗಿ ಕೆಲವೊಂದು ಕಾರ್ಯಕ್ರಮ ಮತ್ತು ಸೇವೆ ಮಾಡಬೇಕು ಎಂದು ಅಂದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

    ಸೀಟು ಹಂಚಿಕೆ ಚರ್ಚೆಗೆ ಈ ತಿಂಗಳು ಕುಮಾರಸ್ವಾಮಿ ಮತ್ತು ನಾಯಕರು ದೆಹಲಿ ಹೋಗುತ್ತಾರೆ. ಸೀಟು ಹಂಚಿಕೆಗೆ ದಿನಾಂಕ ಶೀಘ್ರವೇ ಫಿಕ್ಸ್ ಆಗುತ್ತದೆ. ನಾನು ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ. ನನ್ನ ಅಭಿಪ್ರಾಯ ಈಗಾಗಲೇ ಸ್ಪಷ್ಟವಾಗಿ ಸಾಕಷ್ಟು ಬಾರಿ ಹೇಳಿದ್ದೇನೆ. ನಾನು ನನ್ನ ಹೇಳಿಕೆ ಬದಲಾವಣೆ ಮಾಡುವ ವ್ಯಕ್ತಿ ಅಲ್ಲ. ಗುರುವಾರ ಮಂಡ್ಯ ಜಿಲ್ಲೆಯ ಸಭೆ ಇದೆ. ಅ ಸಭೆಯಲ್ಲಿ ನಮ್ಮ ನಾಯಕರು ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಚರ್ಚೆ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಡೆಯುತ್ತಿರುವ ಚರ್ಚೆ ಊಹಾಪೋಹವಷ್ಟೆ.
    ಅದರ ಬಗ್ಗೆ ನಮಗೆ ಕ್ಲಾರಿಟಿ ಇಲ್ಲ. ಸ್ವಲ್ಪ ದಿನದಲ್ಲೇ ಎಲ್ಲವೂ ಗೊತ್ತಾಗಲಿದೆ. ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಮಂಡ್ಯ ಜಿಲ್ಲೆ ಸ್ಥಾನವನ್ನು ಜೆಡಿಎಸ್ ಪಡೆದುಕೊಳ್ಳಬೇಕು. ಅದು ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ಎಲ್ಲವು ತೀರ್ಮಾನ ಆಗುತ್ತದೆ ಎಂದು ನಿಖಿಲ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts