More

    ಇನ್ಮೇಲೆ ಶನಿವಾರ ಪೂರ್ತಿ ದಿನ ತರಗತಿ; ದಸರಾ, ಕ್ರಿಸ್‌ಮಸ್ ರಜೆಗೆ ಕತ್ತರಿ

    ಬೆಂಗಳೂರು: ಈ ವರ್ಷ ಶೈಕ್ಷಣಿಕ ವರ್ಷ ಸಾಕಷ್ಟು ವಿಳಂಬವಾಗಿ ಆರಂಭವಾಗುವುದರಿಂದ ತರಗತಿಗಳನ್ನು ಸರಿದೂಗಿಸಲು ದಸರಾ ಮತ್ತು ಕ್ರಿಸ್‌ಮಸ್ ರಜೆಗೆ ಕತ್ತರಿ ಬೀಳಲಿದೆ.

    ಮೊದಲಿಗೆ ದಸರಾ ರಜೆಯನ್ನು 21 ದಿನ ನೀಡಲಾಗುತ್ತಿತ್ತು. ಕೆಲವು ಕ್ರೈಸ್ತ ಸಮುದಾಯದ ಆಡಳಿತದ ಶಾಲೆಗಳು ಇದರಲ್ಲೇ ವಿಭಾಗ ಮಾಡಿ ಕ್ರಿಸ್‌ಮಸ್‌ಗೆ 10 ದಿನ ರಜೆ ನೀಡುತ್ತಿದ್ದವು. ಇದಕ್ಕೂ ಮೊದಲು ರಾಜ್ಯ ಸರ್ಕಾರ 29 ದಿನ ದಸರಾ ರಜೆ ನೀಡುತ್ತಿತ್ತು. ಕಾಲಕ್ರಮೇಣ ಶೈಕ್ಷಣಿಕ ತರಗತಿಗಳು ಹೆಚ್ಚಾದ್ದರಿಂದ ಅದನ್ನು 21 ದಿನಕ್ಕೆ ಇಳಿಸಿತು.
    ಈ ಬಾರಿ ಲಾಕ್‌ಡೌನ್‌ನಿಂದಾಗಿ ಶೈಕ್ಷಣಿಕ ವರ್ಷ ವೇಳಾಪಟ್ಟಿಯೇ ಬದಲಾಗಿಬಿಟ್ಟಿದೆ. ಸಿಕ್ಕ ಅವಧಿಯೊಳಗೆ ಪಠ್ಯಕ್ರಮಗಳ ಬೋಧನೆ, ಸಿಸಿಇಗಾಗಿ ಪರೀಕ್ಷೆಗಳನ್ನು ನಡೆಸಬೇಕಿರುವುದರಿಂದ ರಜೆ ಕಡಿತ ಮಾಡಲು ಶಿಕ್ಷಣ ಇಲಾಖೆ ಆಲೋಚಿಸಿದೆ.

    ಇದನ್ನೂ ಓದಿ: ಪಠ್ಯ ಪುಸ್ತಕಗಳಿಗಿಲ್ಲ ಲಾಕ್‌ಡೌನ್ ಎಫೆಕ್ಟ್, ಶಾಲೆ ಆರಂಭದಲ್ಲೇ ಲಭ್ಯ ಡಿಡಿಪಿಐ ಮಾಹಿತಿ

    ಅಲ್ಲದೆ, ಪ್ರತಿ ಶನಿವಾರ ಅರ್ಧ ದಿನ ತರಗತಿ ತೆಗೆದುಕೊಳ್ಳುವ ಬದಲು ಪೂರ್ತಿ ದಿನ ತೆಗೆದುಕೊಳ್ಳುವ ಬಗ್ಗೆಯೂ ಆಲೋಚಿಸುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ 2020-21ನೇ ವೇಳಾಪಟ್ಟಿ ಪ್ರಕಾರ ಮೇ 29ರಿಂದ ಶಾಲೆಗಳು ಮರು ಪ್ರಾರಂಭಗೊಳ್ಳಬೇಕಾಗಿತ್ತು.

    ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆಗಳನ್ನು ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಆಲೋಚಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೊದಲಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಆಯೋಜಿಸಿ ಆನಂತರವಷ್ಟೇ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

    ಇದನ್ನೂ ಓದಿ: ಶಾಲೆಗಳಲ್ಲಿ ಶುರುವಾಗಲಿದೆ ಶಿಫ್ಟ್​, ಎರಡು ದಿನಕ್ಕೊಮ್ಮೆ ಕ್ಲಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts