More

    ಸಮಾಜಕ್ಕೆ ಧಾರೆ ಎರೆದ ಗುರುವಿನಲ್ಲಿ ಆಗಾಧ ಶಕ್ತಿ

    ನಾಲತವಾಡ: ನಿಮಗೆ ಅಕ್ಷರ ಮಾತ್ರ ಕಲಿಸದೇ ಸಮಾಜದಲ್ಲಿ ಸಂಸ್ಕಾರದೊಂದಿಗೆ ಬದುಕಲು ಕಲಿಸಿದ ಗುರುಗಳ ಸೇವೆ ಯಾವ ಕ್ಷೇತ್ರಕ್ಕೂ ಸರಿಸಾಟಿಯಿಲ್ಲ. ಹೀಗಾಗಿ ತಾವು ಮಾಡುತ್ತಿರುವ ಗುರು ಸೇವೆ ದೇವರ ಸೇವೆಯಾಗಿದೆ ಎಂದು ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.

    ಇಲ್ಲಿಯ ಹಳ್ಳೂರ ಪ್ಯಾಲೇಸ್‌ನಲ್ಲಿ ವೀರೇಶ್ವರ ಹಾಗೂ ಬಸವೇಶ್ವರ ಪ್ರೌಢ ಶಾಲೆಯ 1995-96ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ನೇತ್ರದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಗುರುವಂದನಾ ಕಾರ್ಯಕ್ರಮ ತಮ್ಮ ಬಾಲ್ಯವನ್ನು ಸ್ಮರಿಸುವ ಜತೆಗೆ ಪರಸ್ಪರ ಭೇಟಿಗೆ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿ ಜೀವನದಲ್ಲಿ ತಾವು ಅನುಭವಿಸಿದ ಕಷ್ಟ ಸುಖಗಳನ್ನು ಮರೆತು ಕಲಿಸಿದ ಗುರುವಿನ ಋಣ ತೀರಿಸುತ್ತಿದ್ದೀರಿ. ಈ ಕಾರ್ಯಕ್ರಮದಲ್ಲಿ ನೇತ್ರದಾನ ವಾಗ್ದಾನ ಮಾಡಿರುವ ಕಾರ್ಯವೂ ಶ್ಲಾಘನೀಯ ಎಂದರು.

    ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಬೆವರು ಸುರಿಸುವವರು ಇತಿಹಾಸ ಸೃಷ್ಟಿಸುತ್ತಾರೆ ಎನ್ನುವುದನ್ನು ಯಾರು ಮರೆಯಬೇಡಿ. ನಿಮ್ಮನ್ನು ಮಹಾನ್ ವ್ಯಕ್ತಿಗಳನ್ನಾಗಿ ಸಮಾಜಕ್ಕೆ ಧಾರೆ ಎರೆದ ಗುರುಗಳ ಸೇವೆ ಎಷ್ಟು ಸ್ಮರಿಸಿದರೂ ಸಾಲದು. ಜಾನಪದ ಕ್ಷೇತ್ರಕ್ಕೆ ಒತ್ತು ಕೊಡಿ ಎಂದರು.

    ಬಸವರಾಜ ಗುರೂಜಿ, ವೀರೇಶ ಇಲಕಲ್ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಸ್ಥಾವರಮಠ, ಜಗದೀಶ ಜಾಲಹಳ್ಳಿ, ಮುತ್ತಣ್ಣ ನಂದಿಹಾಳ, ತುಳಸಾ ಗ್ಯಾರಿಗಾ, ಬಸಮ್ಮ ವಾಲಿಶೆಟ್ಟಿ, ಡಾ. ಮಹಾಂತೇಶ ಪಟ್ಟಣಶೆಟ್ಟಿ, ರವಿ ಸಿರಿ, ಸಂಗಮ್ಮ ಬಂಟನೂರ, ಅಶೋಕ ಗಡ್ಡಿ, ಬಸವರಾಜ ಶಾಂತಗಿರಿ ಅನಿಸಿಕೆ ಹಂಚಿಕೊಂಡರು.

    ವೀರೇಶ್ವರ, ಬಸವೇಶ್ವರ ಪ್ರೌಢ ಶಾಲೆ ಹಾಗೂ ಸ್ಥಳಿಯ ಕೆಬಿಎಂಪಿಎಸ್, ಕೆಜಿಎಂಪಿಎಸ್ ಶಾಲೆಯ ಗುರುಗಳು ವೇದಿಕೆಗೆ ಆಗಮಿಸುತ್ತಿದ್ದಂತೆ ಗುರುಗಳನ್ನು ಅದ್ದೂರಿಯಾಗಿ ಬರ ಮಾಡಿಕೊಂಡ ಶಿಷ್ಯಂದಿರು ಹೂಗುಚ್ಛಗಳನ್ನು ಸಮರ್ಪಿಸಿದರು. ಶಿಷ್ಯರು ಗುರುಗಳಿಗೆ ಗುರುವಂದನೆ ಸಲ್ಲಿಸಿದರು.

    ಗುರುವಂದನೆ ಸ್ವೀಕರಿಸಿದ ಹಿರಿಯ ಜೀವಿಗಳಾದ ಎಂ.ವಿ. ಹಾದಿಮನಿ, ಎಲ್.ಆರ್. ಗೊಳಸಂಗಿ ಮಾತನಾಡಿದರು. ರಾಜು ಹಾದಿಮನಿ, ಮುರುಗೇಶ ಸಂಗಮ, ವೀರೇಂದ್ರ ಪಾಟೀಲ, ನಿರೂಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts