More

    ಇವರಿಗೆ ಕಾಗೆಯಿಂದಲೇ ಅದೃಷ್ಟ! ಮನೆಯಲ್ಲೇ ಬಿಳಿಕಾಗೆ ಸಾಕ್ತಿದ್ದಾರೆ

    ಕೊಪ್ಪಳ: ಮನೆಯಲ್ಲಿ ಗಿಣಿ, ಪಾರಿವಾಳ, ಬಾತುಕೋಳಿ… ಸಾಕುವುದನ್ನು ಕಂಡಿದ್ದೇವೆ. ಇನ್ನು ಕಾಗೆ? ಈ ಹೆಸರು ಹೇಳಿದಾಕ್ಷಣ ಹಲವರ ಮನದಲ್ಲಿ ಅಪಶಕುನದ ಭೀತಿ, ಆತಂಕ ಮೂಡುತ್ತೆ. ಇನ್ನು ಮನೆಯ ಆಚೆ ಕಾಗೆ ಕೂತರೂ ಓಡಾಡುವಾಗ ಮೈಯೆಲ್ಲ ಕಣ್ಣಾಗಿರ್ತಾರೆ. ಅಂತಹದ್ದರಲ್ಲಿ ಕಾಗೆಯನ್ನು ಯಾರು ಸಾಕುತ್ತಾರೆ ಹೇಳಿ?

    ಆದರೆ, ಇಲ್ಲೊಬ್ಬ ಕಾಗೆಯನ್ನು ಮನೆಯಲ್ಲೇ ಸಾಕಿದ್ದಾನೆ. ಈತನ ಪಾಲಿಗೆ ಇದು ಶುಭಶಕುನವಂತೆ! ಕೊಪ್ಪಳದ ಕಾರಟಗಿ ತಾಲೂಕು ಬಸವಣ್ಣ ಕ್ಯಾಂಪ್ ಹೊರವಲಯದ ನಿವಾಸಿ ಕೃಷ್ಣಪ್ಪ ಅವರು ಕಾಗೆಯನ್ನು ಮನೆಯಲ್ಲಿ ಸಾಕುತ್ತಿದ್ದಾರೆ. ಅಂದಹಾಗೆ ಇದು ಎಂತಹ ಕಾಗೆ ಗೊತ್ತಾ? ಇದನ್ನೂ ಓದಿರಿ ಇಲ್ಲಿಗೆ ಬಂದ್ರೆ ಕರೊನಾ ಸೋಂಕು ಗ್ಯಾರಂಟಿ..? ಅಧಿಕಾರಿಗಳ ಎಡವಟ್ಟಿಗೆ ಬಲಿಯಾಗದಿರಿ!​

    ಇವರಿಗೆ ಕಾಗೆಯಿಂದಲೇ ಅದೃಷ್ಟ! ಮನೆಯಲ್ಲೇ ಬಿಳಿಕಾಗೆ ಸಾಕ್ತಿದ್ದಾರೆಕೃಷ್ಣಪ್ಪ ಸಾಕಿರುವುದು ಕಪ್ಪು ಕಾಗೆಯಲ್ಲ, ಅದು ಬಿಳಿ ಕಾಗೆ. ಬಸವಣ್ಣ ಕ್ಯಾಂಪ್ ಹೊರವಲಯದಲ್ಲಿ ಪತ್ತೆಯಾದ ಬಿಳಿ ಕಾಗೆಯನ್ನು ತಂದು ಪಂಜರದಲ್ಲಿ ಸಾಕುತ್ತಿದ್ದಾರೆ. ಇದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಈತನ ಮನೆಗೆ ಭೇಟಿ ನೀಡುತ್ತಿದ್ದಾರೆ. ಕಾಗೆ ತಾಗಿದರೆ ಅಪಶಕುನ ಅಂತಲೇ ಭಾವಿಸುವ ಈ ಜನರ ನಡುವೆ ಕೃಷ್ಣಪ್ಪ ಕಾಗೆ ಸಾಕಿದ್ದಾರೆ ಅನ್ನೋ ವಿಚಾರ ಸ್ಥಳೀಯವಾಗಿ ಬಾರಿ ಸದ್ದು ಮಾಡುತ್ತಿದೆ.

    ಇದನ್ನೂ ಓದಿರಿ ರಸ್ತೆಯಲ್ಲೇ ಸುಟ್ಟು ಕರಕಲಾದ ಲಾರಿ, ಚಾಲಕನ ಬುರುಡೆ ಮಾತ್ರ ಕಾಣ್ತಿದೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts