More

    112ಗೆ ಡಯಲ್ ಮಾಡಿ ರಕ್ಷಣೆ ಪಡೆಯಿರಿ

    ತೇರದಾಳ: ಗ್ರಾಮೀಣ ಜನರಿಗೆ ತಕ್ಷಣ ರಕ್ಷಣೆಗಾಗಿ ಪೊಲೀಸ್ ಇಲಾಖೆ ಇಆರ್‌ಎಸ್‌ಎಸ್ (ಎಮರ್ಜೆನ್ಸಿ ರಿಸ್ಪಾನ್ಸ್ ಸಪೋರ್ಟ್ ಸಿಸ್ಟಮ್) ತುರ್ತು ವಾಹನವನ್ನು ಪ್ರತಿ ತಾಲೂಕಿಗೊಂದರಂತೆ ಕೊಡಮಾಡಿದೆ.

    ಹಳಿಂಗಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಗಸ್ತು ತಿರುಗಿದ ವಾಹನ ಎರಡು ಗಂಟೆ ನಂತರ ನಿಯೋಜಿತ ಗ್ರಾಮದೆಡೆಗೆ ತೆರಳಿತು. ರಕ್ಷಣಾ ತುರ್ತು ವಾಹನದಲ್ಲಿ ಪೊಲೀಸ್ ಪೇದೆ ಎಸ್.ಎಲ್.ಆದರಗಿ, ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಆರ್.ಎಂ.ತಹಸೀಲ್ದಾರ್, ವಾಹನ ಚಾಲಕ ಗೌಡಪ್ಪ ಸಿರಿಯಾಳ ಕಾರ್ಯದಲ್ಲಿದ್ದರು.

    ಎರಡು ತಿಂಗಳುಗಳಿಂದ ವಾಹನ ಸೇವೆಯಲ್ಲಿದ್ದು, ಬೆಂಕಿ ಅವಘಡ, ಅಪಘಾತ, ಜಗಳದಿಂದಾಗುವ ಉದ್ವಿಘ್ನ ಪರಿಸ್ಥಿತಿ ನಿಯಂತ್ರಿಸುವ ಕಾರ್ಯವನ್ನು ತಾಲೂಕಿನಲ್ಲಿ ಮಾಡಲಾಗುತ್ತಿದೆ. ಅತ್ಯಾಚಾರಗಳಂತಹ ಗಂಭೀರ ಸಮಸ್ಯೆಗಳಿಗೂ ಸಾರ್ವಜನಿಕರು ಅದರಲ್ಲೂ ಮಹಿಳೆಯರು ಸೇವೆಯನ್ನು ಪಡೆದುಕೊಳ್ಳಬಹುದು. 112 ನಂಬರ್‌ಗೆ ಡಯಲ್ ಮಾಡಿದರೆ ತಮ್ಮ ರಕ್ಷಣೆಗಾಗಿ ತುರ್ತು ವಾಹನ ಧಾವಿಸಿ ಬರುತ್ತದೆ ಎಂದು ಸಿಬ್ಬಂದಿ ಹೇಳುತ್ತಾರೆ.

    ಇಆರ್‌ಎಸ್‌ಎಸ್ ತುರ್ತು ವಾಹನವು 247 ಸೇವೆಯಲ್ಲಿದ್ದು, ತಾಲೂಕಿನಲ್ಲಿಯೂ ಸೇವೆ ಲಭ್ಯವಿರುವುದರಿಂದ ವಾಹನ ಸಂಚರಿಸುತ್ತಿದೆ. ಅತಿ ಅಗತ್ಯ ಸಂದರ್ಭದಲ್ಲಿ 112ಗೆ ಡಯಲ್ ಮಾಡಿದರೆ ತಕ್ಷಣವೇ ರಕ್ಷಣಾ ಸೇವೆಯನ್ನು ಪಡೆದುಕೊಳ್ಳಬಹುದು.
    ವಿಜಯ ಕಾಂಬಳೆ, ಠಾಣಾಧಿಕಾರಿ, ತೇರದಾಳ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts