More

    ಹೊರಗೆ ಬಂದರೆ ಬಾಸುಂಡೆ ಭಯ

    ತೇರದಾಳ: ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತೇರದಾಳ ಮತಕ್ಷೇತ್ರದಲ್ಲಿ ಹೈಅಲರ್ಟ್‌ನಿಂದ ಪೊಲೀಸ್ ಇಲಾಖೆ ಕಾರ್ಯ ಮಾಡುತ್ತಿದೆ.

    ಪೊಲೀಸರಿಗೆ ಕ್ಯಾರೇ ಎನ್ನದ ಜನತೆ ಸೈನಿಕರನ್ನು ನೋಡುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದಾರೆ. ಭಾನುವಾರ ಕೆಲ ಗ್ರಾಮಗಳಲ್ಲಿ ಬೆತ್ತದ ರುಚಿ ತೋರಿಸಿ ಜನರು ಹೊರಬಾರದಂತೆ ಮಾಡಲಾಗಿದೆ. ಪಟ್ಟಣದಲ್ಲಿ ಮೆಡಿಕಲ್ ಸೇವೆ ಲಭ್ಯವಿದೆ. ಪಿಎಸ್‌ಐ ವಿಜಯ ಕಾಂಬಳೆ ನೇತೃತ್ವದಲ್ಲಿ ಬಿಗಿಬಂದೊಬಸ್ತ್ ಮುಂದುವರಿದಿದೆ. ಆದರೂ ಕೆಲವೆಡೆ ತಮ್ಮ ಮನೆಯ ಕಟ್ಟೆಗಳಲ್ಲಿ ಜನತೆ ಕಂಡುಬರುತ್ತಿದ್ದಾರೆ. ಪಟ್ಟಣದಲ್ಲಿಯೂ ದೆಹಲಿಯಿಂದ ಜನರು ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದವಾದರೂ ಸ್ಥಳೀಯ ಪಿಎಚ್‌ಸಿ ವೈದ್ಯಾಧಿಕಾರಿ ಎಸ್.ಡಿ. ನಿಡೋನಿ ಈ ವಾದವನ್ನು ತಳ್ಳಿಹಾಕಿದರು.

    ಹನಗಂಡಿ ಗ್ರಾಮದ ಮುಖ್ಯರಸ್ತೆಯಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ವಾಹನ ಸವಾರರನ್ನು ತಡೆದು ಹೊರಗೆ ಬಂದರೆ ಬೈಕ್ ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದರು. ರಜೆ ವೇಳೆ ಸೈನಿಕರು ಸದರಿ ಗ್ರಾಮ ಸೇರಿ ವಿವಿಧೆಡೆ ಕರೊನಾ ಸೋಂಕು ತಡೆಯಲು ಸೇವೆ ಸಲ್ಲಿಸುತ್ತಿರುವುದಕ್ಕೆ ಜತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts