More

    ರಂಗಭೂಮಿಯಿಂದ ಜೀವನದ ಮನವರಿಕೆ: ಬಳ್ಳಾರಿಯಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಅಭಿಮತ

    ಬಳ್ಳಾರಿ: ಸಮಾಜದ ಪ್ರತಿಯೊಬ್ಬರಿಗೂ ಜೀವನದ ಬಗ್ಗೆ ಮನವರಿಕೆ ಮಾಡಿಕೊಡುವ ಶಕ್ತಿ ರಂಗಭೂಮಿಗೆ ಮಾತ್ರ ಇದೆ ಎಂದು ನಾಡೋಜ ಬೆಳಗಲ್ಲು ವೀರಣ್ಣ ಹೇಳಿದರು.

    ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ನಗರದ ನಲ್ಲಚೆರವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಂದ್ಯಾಳು ಶ್ರೀ ಮಹಾದೇವತಾತ ಕಲಾ ಸಂಘ ಶನಿವಾರ ಏರ್ಪಡಿಸಿದ್ದ ರಂಗಭೂಮಿಗೆ ಬಳ್ಳಾರಿ ಕೊಡುಗೆ ಉಪನ್ಯಾಸ ಹಾಗೂ ರಂಗ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಂಗಭೂಮಿಯಲ್ಲಿ ಹಲವು ಪಾತ್ರಗಳಿವೆ. ಅವುಗಳನ್ನು ಪ್ರೇಕ್ಷಕರ ಮನ ಮುಟ್ಟುವಂತೆ ಅಭಿನಯಿಸುವ ಕಲಾವಿದನ ಮೇಲೆ ರಂಗಭೂಮಿ ಆಶೀರ್ವಾದ ಸದಾ ಇರುತ್ತದೆ. ರಂಗಭೂಮಿ ಕಲಾವಿದರಲ್ಲಿ ಕೆಲವರು ನಿಷ್ಠೆ, ಶ್ರದ್ಧೆ, ಆಸಕ್ತಿ ವಹಿಸಿಕೊಂಡಿದ್ದರೆ, ಇನ್ನೂ ಹಲವರು ಕಲೆಯನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಅನೇಕ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಹಲವು ಕಲಾವಿದರ ಸೇವೆ, ಅನೇಕ ಹಳ್ಳಿಗಳಲ್ಲಿ ನಮ್ಮ ತಂಡ ಕಟ್ಟಿಕೊಂಡು ನಾಟಕ ಮಾಡಿದ್ದೇನೆ. ಇದರಿಂದಾಗಿ ರಂಗಭೂಮಿಯಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ಮಾತನಾಡಿ, ವಿಶ್ವ ರಂಗಭೂಮಿ ಇವತ್ತಿನ ನಿನ್ನೆಯದ್ದಲ್ಲ. ರಂಗಭೂಮಿ ಮೂಲಕ ಸಮಾಜದ ಓರೆಕೋರೆ ತಿದ್ದುವ ಕೆಲಸ ಮಾಡಲಾಗಿದೆ. ಬಳ್ಳಾರಿಯ ವಿವಿಧ ಕಲಾವಿದರು ಇಡೀ ಜೀವನವನ್ನು ನಾಟಕಕ್ಕೆ ಅರ್ಪಿಸಿದ್ದು, ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಎಂ.ಮೋಹನ್ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಕಾರ್ಯದರ್ಶಿ ಯಶ್ವಂತ್‌ರಾಜ್ ನಾಗಿರೆಡ್ಡಿ, ಉಪನ್ಯಾಸಕರಾದ ಪ್ರಾಣೇಶ್, ಯರ‌್ರಿಗೌಡ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts