More

    ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸೆನ್ ಟ್ವೀಟ್‌ಗೆ ಪ್ರಧಾನಿ ಮೋದಿ ಕೊಟ್ಟ ಉತ್ತರವೇನು ಗೊತ್ತೇ?

    ಬೆಂಗಳೂರು: ಕರೊನಾ ವೈರಸ್ ಎಂಬ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿತು. ಕಳೆದ ಒಂದು ವರ್ಷದಿಂದ ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್-19ಕ್ಕೆ ಕಡೆಗೂ ಔಷದ ಕಂಡು ಹಿಡಿಯಲಾಗಿದೆ. ಭಾರತದಲ್ಲಿ ವ್ಯಾಸಿನ್ ಕಂಡುಹಿಡಿದ ಬೆನ್ನಲ್ಲೇ ಇತರ ರಾಷ್ಟ್ರಗಳು ಕೂಡ ಸಹಾಯ ಹಸ್ತ ಚಾಚಿವೆ. ಈಗಾಗಲೇ ಭಾರತ ಕೂಡ ಹಲವು ರಾಷ್ಟ್ರಗಳಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ವಿತರಿಸಿದೆ. ದಕ್ಷಿಣ ಆಫ್ರಿಕಾಗೂ ಭಾರತ ಕೋವ್ಯಾಕ್ಸಿನ್‌ಅನ್ನು ಸರಬರಾಜು ಮಾಡಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸೆನ್, ಭಾರತೀಯರ ಉದಾರತೆ ಮೆಚ್ಚಬೇಕು. ಪ್ರತಿದಿನ ಉತ್ತಮ ರೀತಿಯತ್ತ ಸಾಗುತ್ತಿದೆ. ಭಾರತ ಪ್ರೀತಿ ಪಾತ್ರವಾದ ದೇಶ ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಹೀರೋ ರಾಹುಲ್ ಟೆವಾಟಿಯಾ ನಿಶ್ಚಿತಾರ್ಥ

    ಮೂಲತಃ ದಕ್ಷಿಣ ಆಫ್ರಿಕದವರಾದ ಪೀಟರ್ಸೆನ್, ಪ್ರಧಾನಿ ಕಾರ್ಯವನ್ನು ಮೆಚ್ಚಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಭಾರತೀಯರ ಮೇಲಿನ ನಿಮ್ಮ ಪ್ರೀತಿ ವಾತ್ಸಲ್ಯ ನಿಜಕ್ಕೂ ಮೆಚ್ಚಬೇಕು. ಇಡೀ ಜಗತ್ತೇ ಒಂದು ಕುಟುಂಬ ಇದ್ದದಂತೆ, ಎಲ್ಲರೂ ಬಲಿಷ್ಠರಾಗುವ ಮೂಲಕ ಕೋವಿಡ್-19 ವಿರುದ್ಧ ಹೋರಾಡಬೇಕು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಭಾರತದ ಕೋವ್ಯಾಕ್ಸಿನ್‌ಗಳ ಬಗ್ಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇತರ ರಾಷ್ಟ್ರಗಳಾದ ಭೂತಾನ್, ಮಾಲ್ಡಿವ್ಸ್, ಬಾಂಗ್ಲಾದೇಶ, ಬ್ರೆಜಿಲ್ ಹಾಗೂ ನೇಪಾಳ ರಾಷ್ಟ್ರಗಳಿಗೂ ಭಾರತದಿಂದಲೇ ವ್ಯಾಕ್ಸಿನ್ ನೀಡಲಾಗಿದೆ.

    ಇದನ್ನೂ ಓದಿ: ಟೀಮ್ಇಂಡಿಯಾ ಸಭೆಯಲ್ಲಿ ರೈತರ ಬಗ್ಗೆ ಚರ್ಚೆ

    ವ್ಯಾಕ್ಸಿನ್ ಸರಬರಾಜು ಮಾಡುವುದರೊಂದಿಗೆ ಭಾರತ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲೇ ತನ್ನದೇ ಛಾಪು ಮೂಡಿಸಿದೆ. ಏಕಕಾಲದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಚಿಕಿತ್ಸೆಗಳನ್ನು ಭಾರತದಲ್ಲಿ ಪರಿಚಯಿಸಲಾಯಿತು. ಸದ್ಯ ಕರೊನಾ ವಾರಿಯರ್ಸ್‌ಗಳಿಗೆ ಮೊದಲ ಹಂತದಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts