More

    ಹೂಗಾರ ಕಾರ್ಯ ಸ್ಮರಣೀಯ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಇನ್ನೊಬ್ಬರ ಒಳಿತಿಗೆ ಬಾಳುವುದೇ ಸರ್ವಶ್ರೇಷ್ಠವಾದುದು. ದಿ. ಆರ್​.ಎಸ್​. ಹೂಗಾರ ಇನ್ನೊಬ್ಬರ ಏಳಿಗೆಗೆ ಬದುಕಿ ಚಿರಸ್ಥಾಯಿ ಆಗಿದ್ದಾರೆ ಎಂದು ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಆರ್​. ಎಸ್​.ಹೂಗಾರ ದತ್ತಿ ನಿಮಿತ್ತ ಸಂದಲ್ಲಿ ಗುರುವಾರ ಏರ್ಪಡಿಸಿದ್ದ ಆರ್​.ಎಸ್​. ಹೂಗಾರ ಸೇವಾರತ್ನ ಪ್ರಶಸ್ತಿ ಪ್ರದಾನ ಮತ್ತು ಬಡ ವಿದ್ಯಾಥಿರ್ಗಳಿಗೆ ಕಲಿಕಾ ಪ್ರೋತ್ಸಾಹ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
    ತಂದೆ-ತಾಯಿ ಋಣ ತೀರಿಸುವುದು ಎಷ್ಟು ಮುಖ್ಯವೋ ಸಮಾಜದ ಋಣ ತೀರಿಸುವುದೂ ಅಷ್ಟೇ ಮುಖ್ಯ. ಹೂಗಾರ ಬ್ಯಾಂಕಿಂಗ್​ ೇತ್ರದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವರಲ್ಲಿದ್ದ ಸಾಮಾಜಿಕ ತುಡಿತ ಅವಿಸ್ಮರಣೀಯ. ಶಿಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಾವಿರಾರು ವಿದ್ಯಾಥಿರ್ಗಳಿಗೆ ವಿದ್ಯಾರ್ಜನೆಗೆ ಅವಕಾಶ ಮಾಡಿದ್ದು ಪುಣ್ಯದ ಕಾರ್ಯ. ಅವರು ಜನಮೆಚ್ಚುವ ಕಾರ್ಯ ಮಾಡಿದ ಮಹಾನುಭಾವರು ಎಂದರು.
    ಕೆಎಲ್​ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅವರು ಆರ್​.ಎಸ್​. ಹೂಗಾರ ಸೇವಾರತ್ನ ಪ್ರಶಸ್ತಿ&2024 ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡುವುದೇ ಶ್ರೇಷ್ಠ ಧರ್ಮ. ನಾವು ಇನ್ನೊಬ್ಬರನ್ನು ಖುಷಿಪಡಿಸಲು ಕಾರ್ಯ ಮಾಡದೆ ಆತ್ಮಸಾಗೆ ಅನುಗುಣವಾಗಿ ಮಾಡಬೇಕು. ಆರ್​.ಎಸ್​. ಹೂಗಾರ ಸೇವಾರತ್ನ ಪ್ರಶಸ್ತಿಯು ನನಗೆ ಜೀವನದಲ್ಲಿ ಇನ್ನೂ ಹೆಚ್ಚಿನ ಸಮಾಜಸೇವೆ ಮಾಡಲು ಶಕ್ತಿ ನೀಡಿದೆ ಎಂದರು.
    ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಅಧ್ಯತೆ ವಹಿಸಿದ್ದರು. ಬಡ ವಿದ್ಯಾಥಿರ್ಗಳಾದ ರಾಕೇಶ ಮಂಜುನಾಥ ಗಡಾದ, ಖುತೆಜಾಬಿ ಕೋಟೂರ, ಪ್ರಜ್ವಲ ಹೊನ್ನಳ್ಳಿ, ವರ್ಷಾ ಗದಗ ಅವರಿಗೆ ದಿ. ಆರ್​.ಎಸ್​.ಹೂಗಾರ ದತ್ತಿ ಪರ ಕಲಿಕಾ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
    ಶಿವಾನಂದ ಭಾವಿಕಟ್ಟಿ, ಡಾ. ಸಂಜೀವ ಕುಲಕಣಿರ್, ಕೆ.ಎಂ. ಅಂಗಡಿ, ಎಸ್​.ಎಂ. ದಾನಪ್ಪಗೌಡರ, ನಿಂಗಣ್ಣ ಕುಂಟಿ, ಜಿ.ಬಿ. ಸಜ್ಜನರ, ಸುರೇಶ ಹೊರಕೇರಿ, ಚಿದಂಬರ ನಿಂಬರಗಿ, ಮಹಾಂತೇಶ ನರೇಗಲ್​, ಅನಿಲ ಮೇತ್ರಿ, ಚಿದಾನಂದ ಮಾಸನಕಟ್ಟಿ, ಸುರೇಶ ಹಿರೇಮಠ, ಮಕ್ಕಳು, ಪಾಲಕರು, ಇತರರು ಇದ್ದರು.
    ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts