More

    ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ

    ಮೂಡಲಗಿ: ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವದ್ಧಿ ಸಂಸ್ಥೆ ಧಾರ್ಮಿಕ ಕ್ಷೇತ್ರ ಅಷ್ಟೇ ಅಲ್ಲದೆ, ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಜ್ಞಾನದೀಪ ಶಿಕ್ಷಕರ ನೇಮಕಾತಿ ಹಾಗೂ ಬಡಮಕ್ಕಳ ಕಲಿಕೆಗಾಗಿ ಸುಜ್ಞಾನ ನಿ ಶಿಷ್ಯವೇತನ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.

    ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ
    ಮೂಡಲಗಿ ಪಟ್ಟಣದ ಬಿಇಒ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅತಿಥಿ ಶಿಕ್ಷಕರ ನೇಮಕಾತಿ ಮತ್ತು ಶಿಷ್ಯವೇತನ ಮಂಜೂರಾತಿ ಪತ್ರವನ್ನು ಬಿಇಒ ಅಜಿತ ಮನ್ನಿಕೇರಿ, ಹನಮಂತ ಗುಡ್ಲಮನ್ನಿ, ನಾಗರತ್ನಾ ಹೆಗಡೆ ವಿತರಿಸಿದರು.

    ಪಟ್ಟಣದ ಬಿಇಒ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವದ್ಧಿ ಯೋಜನೆಯ ಸಮುದಾಯ ಕಾರ್ಯಕ್ರಮ ಅಡಿಯಲ್ಲಿ ಮೂಡಲಗಿ ಶೆಕ್ಷಣಿಕ ವಲಯಕ್ಕೆ ಜ್ಞಾನದೀಪ ಶಿಕ್ಷಕರ ನೇಮಕಾತಿ ಮತ್ತು ಸುಜ್ಞಾನ ನಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಯೋಜನೆಯ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ ಮಾತನಾಡಿ, ಶಿಕ್ಷಕರ ಕೊರತೆ ಇರುವ ಕಡೆ ಮಕ್ಕಳ ಕಲಿಕೆಗೆ ತೊಂದರೆ ಉಂಟಾಗಬಾರದೆಂದು ಪ್ರತಿ ವಲಯದಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿ ಅವರಿಗೆ ಗೌರವಧನವನ್ನು ಸಂಸ್ಥೆಯಿಂದ ನೀಡಲಾಗುತ್ತಿದ್ದು, ಮೂಡಲಗಿ ಬಿಇಒ ಅವರ ವಿಶೇಷ ಕಾಳಜಿಯಿಂದ ಹೆಚ್ಚು ಅತಿಥಿ ಶಿಕ್ಷಕರು ನೀಡಲಾಗಿದೆ ಎಂದರು.

    ಪುರಸಭೆ ಮಾಜಿ ಅಧ್ಯಕ್ಷ ಹನಮಂತ ಗುಡ್ಲಮನಿ, ಕಾನಿಪ ಮೂಡಗಿ ತಾಲೂಕಾಧ್ಯಕ್ಷ ಕೆ.ಬಿ.ಗಿರೆಣ್ಣವರ, ಕಾರ್ಯದರ್ಶಿ ಮಲ್ಲು ಬೋಳನವರ, ಹನಮಂತ ಸತರಡ್ಡಿ ಮತ್ತಿತರರು ಇದ್ದರು. ಯೋಜನೆಯ ತಾಲೂಕು ಯೋಜನಾಕಾರಿ ಆಜು ನಾಯ್ಕ ಸ್ವಾಗತಿಸಿದರು. ಕಷಿ ಮೇಲ್ವಿಚಾರಕ ಮೈಲಾರಪ್ಪ ಪೈಲಿ, ವ್ಯವಸ್ಥಾಪಕ ಪರಶುರಾಮ ಚಲವಾದಿ ನಿರೂಪಿಸಿದರು. ಕಾಮಾಕ್ಷಿ ನಾಯ್ಕ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts