More

    ಮಂತ್ರವಾಡಿಯಲ್ಲಿ ತೇರನೆಳೆದ ಮಹಿಳೆಯರು

    ಸವಣೂರ: ಶ್ರೀ ಲಿಂ. ಕೆಂಜಡೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅವರ 43ನೇ ಪುಣ್ಯಾ ರಾಧನೆ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ತಾಲೂಕಿನ ಮಂತ್ರವಾಡಿ ಗ್ರಾಮದಲ್ಲಿ ಶುಕ್ರವಾರ ಪಾರ್ವತಿ ದೇವಿಯ ಮಹಾ ರಥೋತ್ಸವವನ್ನು ಮಹಿಳೆಯರೇ ಎಳೆದರು.

    ಮಂತ್ರವಾಡಿಯ ಯೋಗಿಗಳಾಗಿದ್ದ ಲಿಂ. ಕೆಂಜಡೇಶ್ವರ ಶಿವಾಚಾರ್ಯರ ಕಾಲದಿಂದ ಈ ನಿಯಮವನ್ನು ಪ್ರತಿ ವರ್ಷವೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

    ಸುಕ್ಷೇತ್ರ ಮಂತ್ರವಾಡಿ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ಬೆಟ್ಟದ ತುದಿಯಿಂದ ಕೆಳಗಿರುವ ಪಾದಗಟ್ಟಿಯವರೆಗೆ, ನಂತರ ಪುನಃ ಪಾದಗಟ್ಟಿಯಿಂದ ಬೆಟ್ಟದ ತುದಿಯವರೆಗೆ ಪಾರ್ವತಿ ದೇವಿಯ ಅಲಂಕೃತ ತೇರನ್ನು ಎಳೆಯುವ ನೂರಾರು ಮಹಿಳೆಯರು, ನಿರಂತರವಾದ ಜಯಕಾರಗಳೊಂದಿಗೆ ಸಂಭ್ರಮಿಸಿದರು. ವಾದ್ಯವೈಭವಗಳೊಂದಿಗೆ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts