More

    ಮಗುವಿನ ಆರೈಕೆಗೆ ಬಂದ ಮಹಿಳೆ ಬಂಧನ

    ಮಂಗಳೂರು: ಬಂಟ್ವಾಳ ಅಮ್ಟಾಡಿ ಗ್ರಾಮದ ಬಾಂಬಿಲ ಪದವು ನಿವಾಸಿ ಐರಿನ್ ವಾಸ್ ಎಂಬಾಕೆ ನವಿಮುಂಬೈಯ ವಾಶಿಯಲ್ಲಿ ಪ್ರತಿಷ್ಠಿತ ಸೆರಾವೋ ಕುಟುಂಬದ ಮಗುವಿನ ಆರೈಕೆಗೆ ಹೋಗಿ ಅಲ್ಲಿ ಮಗುವಿಗೆ ಹಿಂಸೆ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ನವಜಾತ ಮಗುವಿನ ಆರೈಕೆಗೆ ಐರಿನ್‌ಳನ್ನು ತಿಂಗಳಿಗೆ 50 ಸಾವಿರ ಸಂಬಳಕ್ಕೆ ನೇಮಕ ಮಾಡಲಾಗಿತ್ತು. ಒಂದು ವಾರ ಸರಿಯಾಗಿ ನೋಡಿಕೊಂಡ ಆಕೆ ಬಳಿಕ ಮಗುವಿನ ಕೈ, ಕಾಲು, ಕತ್ತು, ತಲೆಗೆ ನೋವು ಮಾಡುವ ಮೂಲಕ ಹಿಂಸೆ ಮಾಡುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮಗು ವಿಪರೀತ ಕೂಗುತ್ತಿರುವುದರಿಂದ ವೈದ್ಯರ ಬಳಿಗೆ ಕರೆದೊಯ್ದಗ ಆರೈಕೆ ಮಾಡುವವಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ವೈದ್ಯರು ಸಿಸಿ ಕ್ಯಾಮರಾ ಅಳವಡಿಸಿ ನಿಗಾ ವಹಿಸುವಂತೆ ಸಲಹೆ ನೀಡಿದ್ದರು.

    ಹಸುಗೂಸಿನ ಸೇವೆ ಮಾಡಬೇಕಿದ್ದ ಐರಿನ್ ಎಸಗಿದ ಅಮಾನುಷ ಕೃತ್ಯಗಳೆಲ್ಲವೂ ಮನೆ ಮಂದಿ ಸಿಸಿ ಕ್ಯಾಮರಾ ಮೂಲಕ ಸೆರೆ ಹಿಡಿದು, ಆಕೆಯನ್ನು ರೆಡ್‌ಹ್ಯಾಂಡಾಗಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಪ್ರಕರಣದ ತನಿಖೆ ನಡೆಇದ ವಾಶಿ ಪೊಲೀಸ್ ಠಾಣಾಧಿಕಾರಿ ರೇಶ್ಮಾ ಬಿ.ಮೊಬಿನ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡು ಸದ್ಯ ಐರಿನ್ ಸಂಬಂಧಿಕರ ಮನೆಯಲ್ಲಿದ್ದು, ಷರತ್ತಿನಂತೆ ತಿಂಗಳಿಗೆ ಎರಡು ಬಾರಿ ಠಾಣೆಗೆ ಬಂದು ಹಾಜರಾಗುತ್ತಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts