More

    ಕಾಲುವೆಗೆ ನೀರು ಹರಿಸುವುದು ಸ್ಥಗಿತ

    ರಬಕವಿ/ಬನಹಟ್ಟಿ: ಘಟಪ್ರಭಾ ಎಡದಂಡೆ ಕಾಲುವೆಗಳ ಕೊನೆಯ ಹಂತಕ್ಕೆ ನೀರು ತಲುಪುವ ಮುನ್ನವೇ ಜ.10ರಿಂದಲೇ ನೀರು ಹರಿಸುವುದನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಇಲ್ಲಿವರೆಗೆ ಹರಿಸಿದ ನೀರಿನಿಂದ ಕಾಲುವೆ ಆರಂಭದಲ್ಲಿರುವ ಕೆರೆ, ಬಾಂದಾರಗಳು ಮಾತ್ರ ತುಂಬಿದ್ದು, ನೀರು ಬಾರದೆ ಕಾಲುವೆ ಕೊನೆ ಭಾಗದ ಜಲಮೂಲಗಳು ಭರ್ತಿಯಾಗಿಲ್ಲ. ಇದರಿಂ ಕಾಲುವೆ ಕೊನೆಯ ಭಾಗದ ಜನರಲ್ಲಿ ಆತಂಕ ಮೂಡಿದೆ.

    ಜಿಎಲ್‌ಬಿಸಿ ಕಾಲುವೆಗೆ ಜ.1 ರಿಂದ ಜ.10 ರವರೆಗೆ ನೀರು ಹರಿಸಲು ಈ ಮೊದಲು ಆದೇಶ ಹೊರಡಿಸಲಾಗಿತ್ತು. ನಂತರ ರೈತರ ಬೇಡಿಕೆಗೆ ಸ್ಪಂದಿಸಿ ಜ.15 ರವರೆಗೆ ನೀರು ಹರಿಸುವ ಅವಧಿಯನ್ನು ವಿಸ್ತರಿಸಿ ನೀರಾವರಿ ಇಲಾಖೆ ಮತ್ತೊಂದು ಆದೇಶ ಹೊರಡಿಸಿತ್ತು. ಆದರೆ, ಮೊದಲಿನ ಆದೇಶದಂತೆಯೇ ಜ.10 ರವರೆಗೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲು ಹಿಡಕಲ್ ಜಲಾಶಯದ ಅಧೀಕ್ಷರ ಅಭಿಯಂತರ ಕಚೇರಿ ಈಗ ಕ್ರಮ ಕೈಗೊಂಡಿದೆ. ಈಗಾಗಲೇ ಕಾಲುವೆಗೆ ಹರಿಸಿದ ನೀರು ಕೆರೆ ಕಟ್ಟೆ, ಹೊಲಗದ್ದೆಗಳಿಗೆ ತಲುಪುವ ಮುಂಚೆಯೇ ಸ್ಥಗಿತಗೊಳಿಸಲು ಮುಂದಾಗಿರುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ನಾವಲಗಿ ಗ್ರಾಮದ ರೈತ ಮುಖಂಡ ಅಲ್ಲಪ್ಪ ಹೆಂಡಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜ.10 ರಿಂದ 15 ರವರೆಗೆ ಹೆಚ್ಚುವರಿಯಾಗಿ 2 ಸಾವಿರ ಕ್ಯೂಸೆಕ್ ನೀರನ್ನು ಕಾಲುವೆ ಮೂಲಕ ಹಿಡಕಲ್ ಜಲಾಶಯದಿಂದ ಹರಿಸಬೇಕು ಎಂಬ ಆದೇಶವಿತ್ತು. ಆದರೆ ಈ ಬಾರಿ ಸರಿಯಾಗಿ ಮಳೆಯಾಗದ ಕಾರಣ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಬೇಸಿಗೆ ದಿನಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಜಲಾಶಯದಲ್ಲಿ ನೀರು ಕಾಯ್ದುಕೊಳ್ಳಲು ಕಾಲುವೆಗೆ ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಎಲ್‌ಬಿಸಿ ಅಧಿಕಾರಿ ಶ್ರೀಧರ ನಂದಿಹಾಳ ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts