More

    ಟ್ರಂಪ್​ಗಾಗಿ ತುಂಬಿ ಹರಿಯಲಾರಂಭಿಸಿದಳು ಯಮುನಾ: ವಾಸನೆ ತಡೆಗಟ್ಟಲು ನದಿಗೆ ನೀರು ಬಿಟ್ಟ ಸರ್ಕಾರ

    ಮಥುರಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬರುತ್ತಿರುವ ಹಿನ್ನೆಲೆ ದೇಶದಲ್ಲಿ ಭಾರೀ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಇದೀಗ ಟ್ರಂಪ್​ಗೆ ನಮ್ಮ ದೇಶದ ಯಮುನಾ ನದಿ ಸುಂದರವಾಗಿ ಕಾಣಲಿ ಎಂಬ ಕಾರಣಕ್ಕೆ ನದಿಗೆ ನೀರನ್ನು ಸಹ ಬಿಡಲಾಗಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಫೆ.24 ಮತ್ತಯ 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್​ನ ಮೊಟೆರಾದಲ್ಲಿ ಕ್ರೀಡಾಂಗಣವನ್ನು ಉದ್ಘಾಟಿಸಲಿರುವ ಟ್ರಂಪ್​ ಅದಕ್ಕೂ ಮೊದಲು 22ಕಿ.ಮೀ. ರೋಡ್​ ಶೋನಲ್ಲಿ ಭಾಗವಹಿಸಲಿದ್ದಾರೆ. ಮೊದಲು ದೆಹಲಿಗೆ ಬಂದಿಳಿಯಲಿರುವ ಟ್ರಂಪ್​​ ಅಹಮದಾಬಾದ್​ನ ಜತೆ ಆಗ್ರಾಕ್ಕೂ ಕೂಡ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಹೀಗಾಗಿ ಆಗ್ರಾವನ್ನೂ ಸಹ ಸುಂದರವಾಗಿಸುವ ಕೆಲಸ ನಡೆಯುತ್ತಿದೆ. ಆಗ್ರಾದ ತಾಜ್​ ಮಹಲ್​ ಬಳಿ ಹರಿಯುವ ಯಮುನಾ ನದಿಯನ್ನೂ ಸುಂದರವಾಗಿಸುವ ಪ್ರಯತ್ನ ನಡೆದಿದೆ. ನದಿಯ ಕಲುಷಿತತೆಯನ್ನು ಟ್ರಂಪ್​ ಕಣ್ಣಿಗೆ ಕಾಣದಿರುವಂತೆ ಮಾಡುವ ಸಲುವಾಗಿ ನದಿಗೆ 500 ಕ್ಯುಸೆಕ್​ ನೀರು ಬಿಡಲಾಗಿದೆ.

    ಉತ್ತರಪ್ರದೇಶದ ಬುಲಂದರ್​ಶಹರ್​ನ ಗಂಗನ್​ಹರ್​ ಪ್ರದೇಶದಿಂದ ಯಮುನಾ ನದಿಗೆ 500 ಕ್ಯೂಸೆಕ್​ ನೀರನ್ನು ಉತ್ತರ ಪ್ರದೇಶದ ನೀರಾವರಿ ಇಲಾಖೆ ಬಿಡುಗಡೆ ಮಾಡಿದೆ. ಈ ನೀರು ಫೆ.20ಕ್ಕೆ ಮಥುರಾ ತಲುಪಲಿದ್ದು, ಫೆ.21ರ ಮಧ್ಯಾಹ್ನದ ಹೊತ್ತಿಗೆ ಆಗ್ರಾ ತಲುಪಲಿದೆ. ಫೆ.24ರವರೆಗೆ ಯಮುನೆಯಲ್ಲಿ ಉತ್ತಮ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತದ ಅನೇಕ ನದಿಗಳು ಸಂಪೂರ್ಣವಾಗಿ ಕಲುಷಿತವಾಗಿದ್ದು ಅದರಲ್ಲಿ ಯಮುನಾ ನದಿಯೂ ಒಂದು. ಈ ನದಿಯ ನೀರಿನಿಂದ ಆಗ್ರಾದ ಕೆಲ ಪ್ರದೇಶದಲ್ಲಿ ದುರ್ವಾಸನೆ ಉಂಟಾಗಿದೆ. ಇದೀಗ ನೀರು ಬಿಟ್ಟಿರುವುದರಿಂದಾಗಿ ದುರ್ವಾಸನೆ ದೂರಾಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಮಥುರ ಮತ್ತು ಆಗ್ರಾದಲ್ಲಿ ಹರಿಯುವ ಈ ನದಿಯಲ್ಲಿ ಆಮ್ಲಜನಕದ ಮಟ್ಟವೂ ಹೆಚ್ಚಲಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts