More

    ಪ್ರಾಣವಾಯು ಬಳಕೆ ವೈದ್ಯರ ವಿವೇಚನೆಗೆ ಬಿಡಿ

    ರಾಣೆಬೆನ್ನೂರ: ಕರೊನಾ ಸೋಂಕಿತರ ಅನುಕೂಲಕ್ಕಾಗಿ ಇಲ್ಲಿಯ ಪಿಕೆಕೆ ಇನಿಷಿಯೇಟಿವ್ ಹಾಗೂ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ನೀಡಿದ ಉಚಿತ ಆಕ್ಸಿಜನ್ ಪೂರೈಕೆ ಬಸ್​ಗಳ ಸೇವೆಗೆ ಶಾಸಕ ಎಚ್.ಕೆ. ಪಾಟೀಲ ಬುಧವಾರ ಚಾಲನೆ ನೀಡಿದರು.
    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಆಗದ ರಾಜ್ಯ ಸರ್ಕಾರ ರೋಗಿಗಳಿಗೆ ಕಡಿಮೆ ಪ್ರಮಾಣದಲ್ಲಿ ಆಕ್ಸಿಜನ್ ನೀಡುವಂತೆ ವೈದ್ಯರಿಗೆ ಹೇಳುತ್ತಿದೆ. ಅದರ ಪ್ರಕಾರ ಜಿಲ್ಲಾಧಿಕಾರಿ ಕೆಲಸ ಮಾಡುತ್ತಿದ್ದಾರೆ. ಹೀಗಾದರೆ ರೋಗಿಗಳ ಗತಿ ಏನು? ಸರ್ಕಾರ ಕೂಡಲೆ ಆಕ್ಸಿಜನ್ ಬಳಕೆ ವಿಚಾರವನ್ನು ವೈದ್ಯರ ವಿವೇಚನೆಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.
    ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ 721 ಮಕ್ಕಳಿಗೆ ಕರೊನಾ ಸೋಂಕು ತಗುಲಿದೆ. ಆದರೆ, ರಾಜ್ಯ ಸರ್ಕಾರ ಮಕ್ಕಳ ಜಾಗೃತಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಔಷಧವಿದೆ. ಆಕ್ಸಿಜನ್ ಇದೆ ಎಂದು ಸುಳ್ಳು ಹೇಳುತ್ತಲೇ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಮಾತನಾಡಿ, ನಗರ ಹಾಗೂ ಗ್ರಾಮೀಣ ಭಾಗದ ಕರೊನಾ ಸೋಂಕಿತರ ಅನುಕೂಲಕ್ಕಾಗಿ ಎರಡು ಬಸ್​ಗಳನ್ನು ತಾಲೂಕು ಆಸ್ಪತ್ರೆಗೆ ನೀಡಲಾಗಿದೆ. ಅದರಲ್ಲಿ ಆಕ್ಸಿಜನ್ ಕಾನ್ಸನ್​ಟ್ರೇಟರ್ ಅಳವಡಿಸಲಾಗಿದ್ದು, ತುರ್ತು ಇರುವ ರೋಗಿಗಳಿಗೆ ಕೂಡಲೆ ಚಿಕಿತ್ಸೆ ನೀಡಲು ನೆರವಾಗಲಿದೆ ಎಂದು ಹೇಳಿದರು.
    ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ವಿಪ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಪ್ರಮುಖರಾದ ಚಂದ್ರಣ್ಣ ಬೇಡರ, ಎಂ.ಎಂ. ಹಿರೇಮಠ, ಮಂಜನಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ರವೀಂದ್ರಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts