More

    ಯೂನಿಫಾರಂ ಅಳತೆ ಬದಲಾಗ ಬಾರದು

    ಚಿತ್ರದುರ್ಗ: ತರಬೇತಿ ಅವಧಿ ತಮ್ಮ ಯೂನಿಫಾರಂ ಅಳತೆ ಏನಿತ್ತೊ ಅದೇ ಅಳತೆ ನಿವೃತ್ತಿ ಸಂದರ್ಭದಲ್ಲೂ ಇರಬೇಕೆಂದು ಡಿಸಿ ಜಿಆರ್‌ಜೆ ದಿವ್ಯಾ ಪ್ರಭು ಹೇಳಿದರು. ನಗರದ ಕವಾಯಿತು ಮೈದಾನದಲ್ಲಿ ಮಂಗಳವಾರ 2022ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ,ಸರ್ಕಾರಿ ನೌ ಕರಿ ಸೇವೆ ಎಲ್ಲರಿಗೂ ದೊರೆಯದು,ಅದರಲ್ಲೂ ಆಶಕ್ತರಿಗೆ

    ನೆರವಾಗುವ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಿರುವುದು ಪುಣ್ಯ,ಇಲ್ಲಿ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ.ಸದೃಢ ಕಾಯ ಕಾಪಾಡಿಕೊಳ್ಳುವ ಹೊಣೆ ತಮ್ಮಗಳ ಮೇಲಿದೆ. ಸೈನಿಕರು,ಪೊಲೀಸ ರು ನಿಜವಾದ ಹಿರೋಗಳು.

    ಸದೃಢ ದೇಹ,ಮಾನಸಿಕ ಸ್ವಾಸ್ಥೃಕ್ಕೆ ಸಹಕಾರಿ. ತಮ್ಮ ಸೇವೆಯಿಂದಾಗಿ ನಾಗರಿಕರಿಂದು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಸ್ವಾ ತಂತ್ರೊೃೀತ್ತರದಲ್ಲಿ 36 ಸಾವಿರ ಜನರ ಪೊಲೀಸರು ಜೀವ ತ್ಯಾಗ ಮಾಡಿದ್ದಾರೆ. ಪ್ರತಿ ವರ್ಷ 25-400 ಜನರು ಹುತಾತ್ಮರಾಗುತ್ತಿದ್ದಾರೆ. ಈ ಕ್ರೀಡಾಕೂಟ ಜೀವನೋತ್ಸಾಹ ಹೆಚ್ಚಿಸಲು ನೆರವಾಗಲಿ. ಗೆಲ್ಲುವವರೆಗೂ ಪ್ರಯತ್ನ ನಿರಂತವಾಗಿರಬೇಕು. ಗೆದ್ದ ಮೇಲೂ ಪ್ರಯತ್ನ ವೇಗ ಹೆ ಚ್ಚಾಗಬೇಕೆ ಹೊರತು ಕಡಿಮೆಯಾಗ ಬಾರದು. ದೇವರು ನಮ್ಮೊಂದಿಗೆ ಇಲ್ಲದಿದ್ದರೂ ಪರವಾಗಿಲ್ಲ,ಗುರಿ ಮುಟ್ಟುವವರಿಗೆ ನಮ್ಮ ಪ್ರಯತ್ನವಿರ ಬೇಕೆಂದರು.

    ಎಸ್ಪಿ ಕೆ.ಪರಶುರಾಮ್ ಮಾತನಾಡಿ,ಅಧಿಕಾರಿಗಳಿಗಿಂತ ಸಿಬ್ಬಂದಿ ದೈಹಿಕ ಸಾಮರ್ಥ್ಯ ಅಧಿಕವಿರುತ್ತದೆ. ಕಾನಸ್ಟೇಬಲ್‌ಗಳಿಗೆ ಕ್ರೀಡೆ ಹಿನ್ನೆಲೆ ಇರುತ್ತದೆ,ಕ್ರೀಡಾಕೂಟ ಹಬ್ಬವಿದ್ದಂತೆ ಎಂದರು. ಉಪಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾತನಾಡಿದರು. ಐಮಂಗಲ ತರಬೇತಿ ಶಾಲೆ ಪ್ರಾಂಶುಪಾಲ ಪಾಪಣ್ಣ,ಎಎಸ್‌ಪಿ ಕುಮಾರಸ್ವಾಮಿ ಇದ್ದರು. ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ ವಂದಿಸಿದರು. ಚಿತ್ರದುರ್ಗ,ಹಿರಿ ಯೂರು,ಚಳ್ಳಕೆರೆ ಉಪ ವಿಭಾಗ,ಸಶಸ್ತ್ರ ಮೀಸಲು ಪಡೆ ಹಾಗೂ ಮಹಿಳಾ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

    ಇಂದು ಸಮಾರೋಪ
    ನಗರದ ಪೊಲೀಸ್ ಕವಾಯಿತು ಮೈದಾದಲ್ಲಿ ನ.16ರಂದು ಸಂಜೆ 4ಕ್ಕೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದೆ.ದಾ ವಣಗೆರೆ ಪೂರ್ವ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್,ವಿಶೇಷ ಆಹ್ವಾನಿತರಾಗಿ ಜಿಪಂ ಸಿಇಒ ಎಂ.ಎಸ್.ದಿ ವಾಕರ್ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts