More

    ಮೂವರು ಪೇದೆಗಳಿಗೆ ಕರೊನಾ ಸೋಂಕು

    ಬೆಳಗಾವಿ: ಬೆಳಗಾವಿಯ ಹೆಡ್‌ಕ್ವಾರ್ಟರ್ಸ್‌ನ ಮೂವರು ಪೊಲೀಸ್ ಪೇದೆಗಳಿಗೆ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಬಿಮ್ಸ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ರವಾನಿಸಲಾಗಿದೆ. ನಿಪ್ಪಾಣಿಯ ಕೊಗನೊಳ್ಳಿ ಚೆಕ್‌ಪೋಸ್ಟ್, ರಾಯಬಾಗ ಸೇರಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಇವರು ಕರ್ತವ್ಯ ನಿರ್ವಹಿಸಿದ್ದರು.

    ಸೋಂಕಿತ ಪೇದೆಗಳ ಜತೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಈ ಪೇದೆಗಳು ಬೆಳಗಾವಿ ಹೆಡ್‌ಕ್ವಾರ್ಟರ್ಸ್‌ನಲ್ಲಿ ವಾಸವಿರುವ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ಹೆಡ್‌ಕ್ವಾರ್ಟರ್ಸ್ ಪ್ರದೇಶ ವನ್ನು ಸೀಲ್‌ಡೌನ್ ಮಾಡಿದೆ.

    ಬಳೆಗಾರ್ತಿಗೂ ಸೋಂಕು: ಪ್ರತಿದಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಬಳೆ ತೊಡಿಸುತ್ತಿದ್ದ 58 ವರ್ಷದ ಬಳೆಗಾರ್ತಿಗೂ ಸೋಂಕು ತಗುಲಿದೆ. ಬೆಳಗಾವಿ ಮಾಳಿ ಗಲ್ಲಿಯ ಈ ಮಹಿಳೆ, ನಗರದ ಗಲ್ಲಿಗಲ್ಲಿಗಳಲ್ಲಿ ಸುತ್ತಾಡಿ 200ಕ್ಕೂ ಅಧಿಕ ಮಹಿಳೆಯರಿಗೆ ಬಳೆ ತೊಡೆಸಿದ್ದಾಳೆ ಎಂದು ತಿಳಿದು ಬಂದಿದೆ. ಮಹಿಳೆಯ ಟ್ರಾವೆಲ್ ಹಿಸ್ಟರಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಯಾರನ್ನು ಎಲ್ಲಿ ಕ್ವಾರಂಟೈನ್ ಮಾಡಬೇಕು ಎನ್ನುವುದೇ ಅಧಿಕಾರಿಗಳಿಗೆ ತಿಳಿಯದಾಗಿದೆ. ಈಕೆಯಿಂದ ಬಳೆ ತೊಡಿಸಿಕೊಂಡ ಮಹಿಳೆಯರಿಗೂ ಇದೀಗ ಕರೋನಾತಂಕ ಶುರುವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts