More

    ತಬ್ಲಿಘಿ ಸಭೆಗೆ ಅದರ ಸಂಘಟಕರನ್ನು, ಸೇರಿದವರನ್ನು ಬಿಟ್ಟು ಇನ್ನು ಯಾರನ್ನು ಹೊಣೆ ಮಾಡಬೇಕು?: ಇದು ಡಾ. ಕೆ.ಎಸ್​. ನಾರಾಯಣಾಚಾರ್ಯರ ಪ್ರಶ್ನೆ

    ಮುಗ್ಧ ಭಾರತೀಯರಿಗೆ, ವಂಚಿತ ಸೆಕ್ಯುಲರ್ ಮನನೆಲೆಯ ಮಂಕರಿಗೆ, ಸ್ವದೇಶೀ ದುರ್ದೈವಿಗಳಿಗೆ ಇನ್ನೂ ಗೊತ್ತಿರಲಾರದ ಅನೇಕ ಭಯಂಕರ ಸಂಗತಿಗಳನ್ನು ತಿಳಿಸುವುದೂ ಉಪಕಾರಗಳಲ್ಲಿ ಆದ್ಯ ಅಂತ ನಾನು ಭಾವಿಸಿದ್ದೇನೆ. ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಮಾಹಿತಿ ತುಂಬ ಲಭ್ಯವಿದ್ದರೂ, ಪ್ರಯೋಜನ ಪಡೆಯುವವರು ವಿರಳ. ಆ ಬಗೆಯ ಪ್ರಯೋಜನ ಜನತೆಗೆ ತಲುಪದಂತೆ ತಿರುಚಿ, ಅಪಪ್ರಚುರಿಸಿ, ಅಬ್ಬರಿಸಿ, ವೋಟುಬ್ಯಾಂಕು ಗಟ್ಟಿ ಮಾಡಿಕೊಳ್ಳಲು ನಮ್ಮವರೇ ಆಗಾಗ ಮುಂದೆ ಬರುತ್ತ, ಸಿಕ್ಕ ಸಿಕ್ಕ ಹೇಳಿಕೆಗಳನ್ನು ಈಯುತ್ತಿರುವುದೂ ಇದೆ. ಕಾಶ್ಮೀರದ ಉಮರ್ ಅಬ್ದುಲ್ಲಾ ಸಾಹೇಬರು ಇತ್ತೀಚೆಗೆ ಅಂದದ್ದು- ‘ನಿಜಾಮುದ್ದೀನ್ ಘಟನೆಗೆ ಮತೀಯ ಬಣ್ಣ ಹಚ್ಚಬೇಡಿ. ಸಿಕ್ಕಿದ್ದಕ್ಕೆಲ್ಲ ಮುಸ್ಲಿಂರನ್ನು ದೂಷಿಸಬೇಡಿ’ ಅಂತ. ಸಾಹೇಬ್ರೇ! ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ಮುಸ್ಲಿಂರಲ್ಲದೆ ಹಿಂದೂ, ಸಿಖ್, ಬೌದ್ಧ, ಜೈನರೂ ಇದ್ದರೇ? ಎಷ್ಟು ಜನ? ಸಾಹೇಬ್ರೇ, ಅದು ಅಪ್ಪಟ ಮುಸ್ಲಿಂ ಸಭೆ. ಸೇರಿದವರನ್ನೂ, ಸಂಘಟಿಸಿದವರನ್ನೂ ಅಲ್ಲದೆ ಬೇರಾರನ್ನು ಹೊಣೆಯಾಗಿಸಬೇಕು?

    ತಬ್ಲಿಘಿ ಸಭೆಗೆ ಅದರ ಸಂಘಟಕರನ್ನು, ಸೇರಿದವರನ್ನು ಬಿಟ್ಟು ಇನ್ನು ಯಾರನ್ನು ಹೊಣೆ ಮಾಡಬೇಕು?: ಇದು ಡಾ. ಕೆ.ಎಸ್​. ನಾರಾಯಣಾಚಾರ್ಯರ ಪ್ರಶ್ನೆಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರೂ ಹೀಗೆಯೇ ಹೇಳಿಕೆಯಿತ್ತು ಈಗ ಇತರರು ಅವರನ್ನು ದಬಾಯಿಸುತ್ತಿದ್ದಾರೆ. ಈ ಮಾಜಿ ಹಲವು ಇತರರಂತೆ ದಾರಿಗೆ ಬರುವವರಲ್ಲ! ಅವರು ಹೋದದ್ದೇ ದಾರಿ ಎಂಬ ರೀತಿಯ ನಡೆಯುಳ್ಳವರು! ಆದುದರಿಂದ ಇಂಥವರನ್ನು ಬಿಟ್ಟು ಉಳಿದವರನ್ನಾದರೂ ರಕ್ಷಿಸಲು ಸತ್ಯ ಹೇಳಬೇಕಾಗುತ್ತದೆ. ಕೇಳಿ. ಈ ನಿಜಾಮುದ್ದೀನ್ ದೆಹಲಿ ಪ್ರದೇಶದ ಐದಾರು ಅಂತಸ್ತಿನ, ಸಾವಿರಾರು ಜನ ಸೇರಬಹುದಾದ, ವಾಸಿಸಬಹುದಾದ, ಮರ್ಕಜ್ ಮಸೀದಿಯನ್ನು ಕಟ್ಟಿಸಿದವನು ಬಾಬರ್! ಗಾಬರಿಯಾಗುತ್ತಿದೆಯಲ್ಲವೇ? ಅಲ್ಲಿ ಅವನು ರಾಣಾ ಸಂಗನನ್ನು ಪಾಣೀಪತ್ ಮೊದಲ ಕದನದಲ್ಲಿ ಸೋಲಿಸಿ, ಸೆರೆ ಹಿಡಿದ ಸಾವಿರ ಸಾವಿರ ರಜಪೂತರನ್ನು ಮತಾಂತರಿಸಿ, ಅವರ ಮೂಲಕ ವಿಶ್ವದಾದ್ಯಂತ ಇಸ್ಲಾಂನ್ನು ಹರಡಲು ಈ ಇಮಾರತ್ತನ್ನು ಕಟ್ಟಿಸಿದ. ಸಮೀಪದಲ್ಲೇ ಹುಮಾಯೂನನ ಸಮಾಧಿ, ರೈಲ್ವೆ ಸ್ಟೇಷನ್ನಿಗೇ ಕಾಣುತ್ತದೆ. ಈಗ ಈ ಮಸೀದಿಯ ಪಾಲಕ, ಆ ಪರಂಪರೆಯ ಮತಾಂತರಿತ ರಜಪೂತನೊಬ್ಬನ ಮರಿ ಮೊಮ್ಮಗ!

    ಒಮ್ಮೆ ಮತಾಂತರಿತರಾದವರಿಗೆ ಪರಂಪರೆಯ ಸ್ಮರಣೆಯೂ ನಾಶವಾಗುತ್ತದೆ! ಹಾಗೆ ಅವರು ನೋಡಿಕೊಳ್ಳುತ್ತಾರೆ. Cultural Amnesia ಎಂಬುದು ಈ ರೋಗ. ‘ಆತ್ಮವಿಸ್ಮೃತಿ’ ಎಂಬುದು ಭಾರತೀಯ ಶಬ್ದ. ಇಂಥವರನ್ನು ತಿದ್ದಲು ಸಾಧ್ಯವೇ ಇಲ್ಲ. ಕ್ರೖೆಸ್ತರು ಮಾಡುತ್ತಿರುವುದೂ ಇದನ್ನೇ.

    ಒಮ್ಮೆ ನನ್ನ ಪ್ರವಚನಮಾಲೆಯೊಂದಕ್ಕೆ ದಿನವೂ ತಪ್ಪದೇ ಬರುತ್ತಿದ್ದ ಒಬ್ಬ ಸಂಪ್ರದಾಯಿ ಶ್ರದ್ಧಾಳು ಬೆಂಗಳೂರಿನಲ್ಲಿ, ಪ್ರವಚನಾರಂಭಕ್ಕೆ ಹತ್ತು ನಿಮಿಷ ಮುಂಚೆ ಬಂದು ಒಂದು ಕೌಟುಂಬಿಕ ಸಮಸ್ಯೆ ಹೇಳಿಕೊಂಡರು. ‘ನಾನು ಬ್ರಾಹ್ಮಣ, ನನ್ನ ತಮ್ಮ ಕ್ರೖೆಸ್ತನಾಗಿ ಮತಾಂತರಿತನಾಗಿದ್ದಾನೆ. ಅವನನ್ನು ದಾರಿಗೆ ತರಲು ಸಾಧ್ಯವೇ?’ ಎನ್ನುತ್ತ ಕಣ್ಣೀರು ಸುರಿಸಿದರು. ‘ಪ್ರವಚನಕ್ಕೆ ಕರೆತನ್ನಿ’ ಎಂದೆ. ಆತ ಒಂದು ದಿನ ಬಂದ! ಇವರು ಹಿಗ್ಗಿದರು. ಮುಂದೆ ಆತ ಕಾಣಲಿಲ್ಲ. ‘ಏಕೆ?’ ಎಂದು ಕೇಳಿದೆ. ಅವರೆಂದರು, ‘ಅವನಿಗೆ ನಿಮ್ಮ ಪ್ರವಚನ ಹಿಡಿಸಲಿಲ್ಲ. ಮತಾಂತರಿತ ಸ್ಥಿತಿಯೇ ಸುಖಕರ ಎನ್ನುತ್ತ ಅಲ್ಲೇ ಮತ್ತೆ ಹೋದ’. ಮತಾಂತರದಲ್ಲಿ ಹಣ, ಹೆಣ್ಣು, ನಾನಾ ಆಸೆಗಳೂ, ಮಡಿ, ಮೈಲಿಗೆ, ಕಟ್ಟುಪಾಡುಗಳೂ ಇಲ್ಲದ ಆಹಾರ ರೀತಿಗಳೂ, ತಕ್ಕಮಟ್ಟಿನ ಸ್ವೇಚ್ಛಾಚಾರವೂ ಆರಂಭಕ್ಕೆ ಇರುತ್ತ, ಕ್ರಮೇಣ ಹಿಡಿತ ಹೆಚ್ಚಾಗುತ್ತ ಮತಾಂತರಿತರು ಸ್ವಂತಿಕೆ, ಸ್ವಂತ ವಿಚಾರಶಕ್ತಿ, ಪರಾಮರ್ಶೆಯ ಬುದ್ಧಿಗಳನ್ನು ಕಳೆದುಕೊಂಡು ದೊಂಬಿ ಪ್ರವೃತ್ತಿಯಲ್ಲಿ, ಕುರಿಗಳಂತೆ, ಪಾಶವೀ ಸ್ಥಿತಿಗೆ ಇಳಿಯುತ್ತಾರೆ. ಮೂಲಮತ ಸ್ಥಾಪಕರಿಗೆ ಬೇಕಾದುದೇ ಇದು! ವಿವೇಕಹೀನ ವಿಧೇಯತೆ. ಈ ಬಗ್ಗೆ ಭಾರತಮೂಲದ ನೊಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನೈಪಾಲ್ ಎಂಬ ಬಿಹಾರೀ, ಟ್ರಿನಿಡಾಡ್ ವಾಸಿ, ತಾನು ಕಂಡ ಇಂಥ ಅನುಭವಗಳನ್ನು ಇಂಡೋನೇಷ್ಯಾ ಮುಸ್ಲಿಂರ ಬಗೆಗೆ ಒಂದು ಕಾದಂಬರಿಯಲ್ಲಿ ಬರೆದಿದ್ದಾರೆ. ಇಂಡೋನೇಷ್ಯಾದ ಹಿಂದೂ ಮೂಲಗಳನ್ನು ನೋಡಿ ನಾವು ಹಿಗ್ಗುತ್ತೇವೆ. ಅಲ್ಲಿ ಮುಸ್ಲಿಂ ಮೌಲ್ವಿಗಳ ಆಚರಣೆಗಳ ಬಗ್ಗೆ ತಿಳಿಯುವುದಿಲ್ಲ. ಈಗ ಹೇಳಿ. ಈ ತಬ್ಲಿಘಿ ಜಮಾತ್ ಎಂಬುದು Global evangelical ಸಂಸ್ಥೆ. ವಿಶ್ವದಾದ್ಯಂತ ಇಸ್ಲಾಂ ಹರಡುವ ಉದ್ದೇಶ. ಆಗ ಭಾರತದಲ್ಲಿ ಇನ್ನೂ ಪ್ರಯಾಣ, ವಾಯುವಿಹಾರ ನಿರ್ಬಂಧ ಏರ್ಪಟ್ಟಿರಲಿಲ್ಲ! ನಾವು ಎಂದೂ ಇಂಥ ವಿಷಯಗಳಲ್ಲಿ ‘ಹಿಂದು’ ಅಲ್ಲವೇ?

    ಮಾರ್ಚ್ 30ರಂದು ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆ ಇದನ್ನು ‘ವಿಶ್ವದಲ್ಲೇ ಕರೊನಾ ವೈರಸ್ ಹರಡುವ ಬೃಹತ್ ಸಂಘಟನೆ’ ಎಂದು ಗುರುತಿಸಿ ಬರೆದಿತ್ತು. ‘ಇಡೀ ಆಗ್ನೇಯ ಏಷ್ಯಾಕ್ಕೆ ಇದರಿಂದ ಅಪಾಯವಿದೆ’ ಎಂದು ಎಚ್ಚರಿಸಿತ್ತು. ಅಲ್ಲಿ ಸೇರಿದ್ದವರಲ್ಲಿ 620ಕ್ಕಿಂತ ಹೆಚ್ಚು ಜನರು ರೋಗಕ್ಕೆ ಪಾಸಿಟಿವ್ ಆಗಿ ಗುರುತಿಸಲ್ಪಟ್ಟರು. ಫೆಬ್ರವರಿ ಅಂತ್ಯದವರೆಗೆಈ ಗೋಳು ಸಮ್ಮೇಳನ ನಡೆಯಿತು. ಅದು ನೆರೆಯ ಥೈಲ್ಯಾಂಡಿಗೂ, ಇತರ ಕಡೆಗೂ ಹರಡಿತ್ತು. ಅದೇ ಸಂಘಟನೆಯೇ ಈಗ ದೆಹಲಿಯ ನಿಜಾಮುದ್ದೀನ್​ನಲ್ಲಿ ಸಂಘಟನೆ ಏರ್ಪಡಿಸಿದ್ದು! ಅಂದರೆ ಸಂಘಟಕರು ಹಟಮಾರಿಗಳು! ಮಲೇಷ್ಯಾ ಘಟನೆಯಿಂದ ಪಾಠ ಕಲಿಯಲಿಲ್ಲ! ಜನರನ್ನು ವಂಚಿಸಿ ಸಾಯಿಸಲು ಪಣ ತೊಟ್ಟರೇ? ದೆಹಲಿಯ ನಿಜಾಮುದ್ದೀನ್ ಸಂಘಟನೆಗೆ ಕೊಟ್ಟಿದ್ದು ಮಾರ್ಚ್ 10-13-ಅಂದರೆ ಬರೀ ಮೂರು ದಿನಗಳ ಕಾಲ! ಆದರೆ, ಇವರು ಹದಿನೈದು ದಿನ ನಡೆಸಿದರು. ವಿದೇಶಗಳಿಂದ ಬಂದ ಅಭ್ಯರ್ಥಿಗಳು ಟೂರಿಸ್ಟ್ ವೀಸಾದ ಮೇಲೆ ಬಂದು, ಅದನ್ನೂ ಅತಿಕ್ರಮಿಸಿದ್ದರು. ಸಂಘಟನೆಗೆ ಹೋಗುತ್ತೇವೆಂದು ಹೇಳದೆ ನಮ್ಮನ್ನು ವಂಚಿಸಿಯೂ ಇದ್ದರು. ಎಷ್ಟೊಂದು ಮೋಸ!

    ಇಲ್ಲಿ ನಮ್ಮ ಪ್ರಚಾರ, ಸುದ್ದಿ, ಮಂತ್ರಿಗಳ ಇಲಾಖೆಯೇ ತಪು್ಪ ಮಾಡಿತ್ತು. ‘ನಾವು ವಿಧಿಸುತ್ತಿರುವುದು ತುರ್ತು ಪರಿಸ್ಥಿತಿಯಲ್ಲ. ಯಾರೂ ಗಾಬರಿಪಡುವ ಅವಶ್ಯಕತೆ ಇಲ್ಲ’ ಎಂದು ಪ್ರಕಟಿಸಿದ್ದು ತಬ್ಲಿಘಿ ಜಮಾತ್​ಗೆ ಅವಕಾಶ ಕೊಂಡಿಯಾಯ್ತು! ಆಗ ವಿಶ್ವ ಆರೋಗ್ಯ ಸಂಸ್ಥೆ ಸಹ ಈ ರೋಗವನ್ನು Pandemic, ವಿಶ್ವವ್ಯಾಪಿ ಎಂದು ಘೋಷಿಸಲಿಲ್ಲ. ಅದೂ ಇವರಿಗೆ ಸಹಾಯವಾಯ್ತು. ಈಗ? ಅದೇ ವಿಶ್ವ ಆರೋಗ್ಯ ಸಂಸ್ಥೆ ಸಹಾಯದಿಂದ ನಿಜಾಮುದ್ದೀನ್ ಮಸೀದಿಯಿಂದ ಕೆಲ ದಿನಗಳ ಹಿಂದಷ್ಟೇ 2,113 ಜನ ಪ್ರತಿನಿಧಿ ಮುಸ್ಲಿಂರನ್ನು ಹೊರ ಹಾಕಲಾಯ್ತು. ‘ಈಗ ಪೂರ್ತಿ ಖಾಲಿ ಮಾಡಿದ್ದೇವೆ’ ಎನ್ನುತ್ತಾರಾದರೂ, 400ಕ್ಕಿಂತ ಹೆಚ್ಚು ವಿದೇಶೀ ಮೌಲ್ವಿಗಳು ತಲೆ ತಪ್ಪಿಸಿಕೊಂಡಿದ್ದಾರೆ ಅಂತ ವರದಿ! ಎಲ್ಲಿ ಹೋದರು? ಈ ಪೈಕಿ ಅನೇಕರು ಸತ್ತಿದ್ದಾರೆಂದೂ ವರದಿ! ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಅಂಡಮಾನ್, ಪಶ್ಚಿಮ ಬಂಗಾಳ, ಅಸ್ಸಾಂ, ಕಾಶ್ಮೀರ, ಉತ್ತರಪ್ರದೇಶ, ಮಹಾರಾಷ್ಟ್ರಗಳಿಂದ ಏಕೆ ಸಾವಿರ ಸಾವಿರ ಜನ ಇಲ್ಲಿ ಸೇರಿದರು? ಅದು ಮತಾಂತರದ ಮಬ್ಬು!

    ಇನ್ನೊಂದು ಮಾತು. ಹಿಂದೆ ಕಂಸನಂತಹ ದುಷ್ಟ ಆಡಳಿತಗಾರರು ಶತ್ರುಗಳನ್ನು ಸಾಯಿಸಲು ‘ವಿಷಕನ್ಯೆ’ಯರನ್ನು ತಯಾರು ಮಾಡುತ್ತಿದ್ದರು. ‘ಪೂತನೆ’ ಅಂಥವರಲ್ಲಿ ಒಬ್ಬಳು. ಆದರೆ, ಕೌಟಿಲ್ಯ ಇದೇ ಪ್ರಯೋಗದಿಂದ, ಚಂದ್ರಗುಪ್ತನನ್ನು ಕೊಲ್ಲಲು ಹೊರಟಿದ್ದ ಪರ್ವತರಾಜನನ್ನೇ ಕೊಲ್ಲಿಸಿದ! (ನನ್ನ ‘ಆಚಾರ್ಯ ಚಾಣಕ್ಯ’ ಓದಿ). ಈಗ ವಿಷಕನ್ಯೆಯರ ಬದಲಿಗೆ ವಿಷಪುರುಷರ ತಯಾರಿ ಆಗುತ್ತಿದೆ! ವಿಷ ತುಂಬಿದ ತಲೆಯ ಎಲ್ಲರೂ ಇಂಥವರೇ! ರಾಷ್ಟ್ರವನ್ನು ರಕ್ಷಿಸಲು ಇಂಥವರ ಮೇಲೆ ನಿರ್ದಯ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಅರಗಿನ ಮನೆಯ ರೂವಾರಿ, ಶಕುನಿಯ ಏಜೆಂಟು ಪುರೋಚನನನ್ನೇ ಆಗ ಪಾಂಡವರು ಅಗ್ನಿಗೆ ಆಹುತಿಯನ್ನಾಗಿ ಕೊಡಲಿಲ್ಲವೇ? ಮುಹೂರ್ತಕ್ಕೆ ಮೊದಲೇ ಸತ್ತನಲ್ಲ? ಹಾಗೆ, ಈಗಲೂ ದುಷ್ಟ ವಿಚಾರಗಳನ್ನೂ, ರಾಷ್ಟ್ರನಾಶ ಯತ್ನಗಳನ್ನೂ ಮಾಡುವ ಸಂಘಟನೆಗಳಿಗೆ ‘ಆಪರೇಷನ್ ಪುರೋಚನ’ ಎಂಬುದು ಬೇಕಾಗುತ್ತದೆ.

    ಬಾಬ್ರಿ ಮಸೀದಿಯೇ ಹೋಯ್ತು! ರಾಮ ಜನ್ಮಭೂಮಿ ಮುಕ್ತವಾಯ್ತು. ಬಾಬರನು ನಿರ್ವಿುಸಿದ ಇತರ ಇಂಥ ದುರ್ವಿಚಾರ ಪ್ರಚಾರಕ ಕ್ಷೇತ್ರಗಳನ್ನು ಸರ್ಕಾರ ಏಕೆ ಸಾರ್ವಜನಿಕ ಉಪಯೋಗದ ಕೇಂದ್ರಗಳನ್ನಾಗಿ ಬದಲಿಸಬಾರದು? ರೈಲ್ವೆ ಬೋಗಿಗಳು, ಕಾಲೇಜು, ಲಾಡ್ಜ್​ಗಳು ಶುಶ್ರೂಷಾ ಸ್ಥಾನವಾಗಬಹುದಾದರೆ, ನಿಜಾಮುದ್ದೀನ್​ದಂಥ ಕಟ್ಟಡಗಳೂ ಸಾರ್ಥಕ್ಯ ಪಡೆಯಲು ಇದು ಸಕಾಲ! ಸ್ಟಾಲಿನ್, ಹಿಂದೆ ಚರ್ಚುಗಳನ್ನೂ ಆಹಾರ ದಾಸ್ತಾನು ಮಳಿಗೆಗಳನ್ನಾಗಿ ಪರಿವರ್ತಿಸಿದ್ದನಲ್ಲ? ಕಮ್ಯುನಿಷ್ಟರು ಈಗ ಇಂಥದನ್ನು ಪ್ರತಿಪಾದಿಸುವರೇ? ಹಾಯ್! ಭಾರತ ಶತ್ರುಗಳು ಒಂದೇ ಸಲ ಸಾಯುವುದಿಲ್ಲ. ಕುರುಕ್ಷೇತ್ರವೇ ಬೇಕು!

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಲಾಕ್​ಡೌನ್​: ಆಟೋ ಸೀಜ್​ ಮಾಡಿ ಠಾಣೆಗೆ ಕೊಂಡೊಯ್ಯುವಾಗ ಅಪಘಾತಕ್ಕೀಡಾಗಿದ್ದ ಪೇದೆ ಚಿಕಿತ್ಸೆ ಫಲಿಸದೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts