More

    ಆದಿವಾಸಿ ಮುಖಂಡ ಸೋಮಣ್ಣ ಹೋರಾಟ ಅವಿಸ್ಮರಣೀಯ

    ಸರಗೂರು: ಅರಣ್ಯದಿಂದ ಗಿರಿಜನರನ್ನು 1980ರಲ್ಲಿ ಹೊರ ಹಾಕಿದ ಸಂದರ್ಭ ಅವರಿಗೆ ಪುನರ್ವಸತಿ ಕಲ್ಪಿಸಲು ಆದಿವಾಸಿ ಮುಖಂಡ ಸೋಮಣ್ಣ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಸಾಕಷ್ಟು ಜನರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ನೆರವಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ ಹೇಳಿದರು.

    ಪಟ್ಟಣದ ಪ್ರಗತಿ ಶಾಲೆಯಲ್ಲಿ ಆದಿವಾಸಿ ಮುಖಂಡ, ಪದ್ಮಶ್ರೀ ಪುರಸ್ಕೃತ ಸೋಮಣ್ಣ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸೋಮಣ್ಣ ಅವರು ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಮೊತ್ತ ಗಿರಿಜನ ಹಾಡಿ ನಿವಾಸಿ. ಸುಮಾರು 4 ದಶಕದಿಂದ ಬುಡಕಟ್ಟು ಜನರ ಹಕ್ಕುಗಳಾಗಿ ಹೋರಾಟ ನಡೆಸುತ್ತಿದ್ದು, ವ್ಯಾಸಂಗ ಮಾಡಿದ್ದು 2ನೇ ತರಗತಿಯಾದರೂ ಗಿರಿಜನರ ಹಕ್ಕುಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ ಎಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಣ್ಣ, ನನ್ನ ಅಳಿಲು ಸೇವೆಯನ್ನು ಕೇಂದ್ರ ಸರ್ಕಾರ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡುತ್ತಿರುವುದು ಬದುಕಿನ ಸಾರ್ಥಕ ಕ್ಷಣವಾಗಿದೆ. ಹೋರಾಟದಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು, ಮಾಧ್ಯಮಗಳು ಸಾಥ್ ನೀಡಿವೆ ಎಂದರು.

    • ಸಂವಿಧಾನ ಸಂರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಬೀರ್ವಾಳ್ ಬಸವರಾಜು, ಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೊವಿಂದಾಚಾರಿ, ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ವಿ.ನಾಗರಾಜು, ಆಡಳಿತಾಧಿಕಾರಿ ಮುರಳೀಧರ್, ಮುಖ್ಯ ಶಿಕ್ಷಕ ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts