More

    ಒಕ್ಕಲೆಬ್ಬಿಸಿದರೆ ಹೋರಾಟ ಅನಿವಾರ್ಯ

    ಚಿತ್ರದುರ್ಗ: ಬಗರ್‌ಹುಕುಂ ಮತ್ತು ಅರಣ್ಯ ಭೂಮಿಯಲ್ಲಿ ಶತಮಾನಗಳಿಂದಲೂ ಉಳುಮೆ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ, ಹಕ್ಕು-ಪತ್ರ ವಿತರಿಸುವಂತೆ ಆಗ್ರಹಿಸಿ ಮಾ.4ರಂದು ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ಹೇಳಿದರು.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1956-57ರಲ್ಲೇ ಕಂದಾಯ ಇಲಾಖೆ ಅನೇಕ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿದೆ. ಆದರೂ ಸುಪ್ರೀಂಕೋರ್ಟ್ ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ ಅರಣ್ಯ ಇಲಾಖೆ ಬಡ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
    ಸಾಗುವಳಿದಾರರ ಜಮೀನುಗಳ ಸುತ್ತ ಬೇಲಿ ಹಾಕಲಾಗುತ್ತಿದೆ. ಇದನ್ನೇ ನಂಬಿ ಜೀವಿಸುತ್ತಿರುವ ಭೂರಹಿತರು ಬೀದಿಗೆ ಬಿದ್ದಂತಾಗಿದೆ. ಬೇವಿನಹಳ್ಳಿ, ಎಮ್ಮಿನಗಟ್ಟ, ಭೀಮಸಮುದ್ರ, ತಣಿಗೆಹಳ್ಳಿ, ಡಿ.ಮದಕರಿಪುರ, ಹೊಳಲ್ಕೆರೆ ತಾಲೂಕಿನ ಲಂಬಾಣಿಹಟ್ಟಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವುದರ ಜತೆಗೆ ಕಿರುಕುಳ ನೀಡಲಾಗುತ್ತಿದೆ. ಇದರ ವಿರುದ್ಧ ಹೋರಾಟಕ್ಕೂ ಸಿದ್ಧ ಎಂದರು.
    ಎಸ್ಸಿ, ಎಸ್ಟಿ ಬಗರ್‌ಹುಕುಂ ಫಲಾನುಭವಿಗಳಿಗೆ ಯಾವ ಶುಲ್ಕ ವಿಧಿಸದೆಯೆ ಸಾಗುವಳಿ ಚೀಟಿ ವಿತರಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ಅರಣ್ಯ ಭೂಮಿಗಾಗಿ ಅರ್ಜಿ ಸಲ್ಲಿಸಿರುವ 17,876 ರೈತರು ಅರಣ್ಯ, ಕಂದಾಯ ಇಲಾಖೆ ವ್ಯಾಪ್ತಿಯ 45,850 ಎಕರೆ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದು, 1991-92, 1998-99, 2018-19ನೇ ಸಾಲಿನಲ್ಲಿ ಸಾಗುವಳಿ ಸಕ್ರಮಕ್ಕಾಗಿ ಸಲ್ಲಿಸಿ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಸಾಗುವಳಿ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಅಭಿಯಾನ ಸಮಿತಿ ಸಂಚಾಲಕ ನಾಗರಾಜನಾಯ್ಕ, ವೆಂಕಟೇಶ್‌ನಾಯ್ಕ, ಜೆಡಿಎಸ್ ಮುಖಂಡ ಪಿ.ಎಸ್.ಜಯಣ್ಣ ಇತರರಿದ್ದರು.

    ಮಗ್‌ಶಾಟ್ (ಆರ್.ನಿಂಗನಾಯ್ಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts