More

    ಕ್ರೀಡೆಯಿಂದ ಒಗ್ಗಟ್ಟು-ತ್ಯಾಗದ ಮನೋಭಾವ ಮೂಡುತ್ತದೆ

    ಮಡಿಕೇರಿ: ಹಾಕಿ, ಫುಟ್ಬಾಲ್, ಕ್ರಿಕೆಟ್ ಮುಂತಾದ ಗುಂಪು ಕ್ರಿಡೆಯಿಂದ ನಮ್ಮಲ್ಲಿ ಹೊಂದಾಣಿಕೆ, ಒಗ್ಗಟ್ಟು, ತ್ಯಾಗ ಹಾಗೂ ಮತ್ತೋರ್ವರಿಗೆ ಸಹಾಯ ಮಾಡುವ ಮನೋಭಾವ ಮೂಡುತ್ತದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕ್ರೀಡಾಪಟು ಕಾರೇರ ಕವನ್ ಮಾದಪ್ಪ ಹೇಳಿದರು.


    ವಾಂಡರ್ಸ್‌ ಸ್ಪೋಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ನಗರದ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಮಕ್ಕಳ ಬೇಸಿಗೆ ಕ್ರೀಡಾ ತರಬೇತಿ ಶಿಬಿರದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದರು.


    ಮನುಷ್ಯ ಕ್ರೀಡೆ ಅಥವಾ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳದಿದ್ದರೆ ಜೀವನ ಪರಿಪೂರ್ಣವಾಗುವುದಿಲ್ಲ. ಗುಂಪು ಕ್ರೀಡೆಗಳಲ್ಲಿ ಹೊಂದಾಣಿಕೆ, ತ್ಯಾಗ, ಸಹಾಯ ಮಾಡುವ ಮನೋಭಾವ ಮೂಡುತ್ತದೆ. ಸೇನೆಯಲ್ಲಿಯೂ ಇದೇ ರೀತಿಯ ಮನೋಭಾವವಿರುತ್ತದೆ. ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವದರಿಂದ ಹೊಸ ಮಾನವರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.


    ಹಿಂದೆ ಯೋಗದ ಮಹತ್ವ ಯಾರಿಗೂ ತಿಳಿದಿರಲಿಲ್ಲ. ಯೋಗ ಹೇಳಿಕೊಡುವವರೂ ಇರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಯೋಗದ ಬಗ್ಗೆ ವಿಶ್ವದೆಲ್ಲೆಡೆ ಪರಿಚಯವಾಗಿದೆ. ಮನುಷ್ಯ ಚಟುವಟಿಕೆಯಿಂದ ಇದ್ದರೆ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದರು.


    ಕ್ರೀಡೆ ಹಾಗೂ ವ್ಯಾಯಾಮದಿಂದಾಗುವ ಪ್ರಯೋಜನ ಈ ಶಿಬಿರ ಮುಕ್ತಾಯವಾಗುವ ವೇಳೆಗೆ ನಿಮಗಳಿಗೆ ಅರಿವಾಗಲಿದೆ. ಇಲ್ಲಿ ಕಲಿಸಿದನ್ನು ಶಿಬಿರ ಮುಗಿದ ಬಳಿಕವೂ ಅಭ್ಯಾಸ ಮಾಡಬೇಕು. ಮನೆಯಲ್ಲಿ ಕುಳಿತುಕೊಳ್ಳದೆ ಹತ್ತಿರದ ಮೈದಾನಕ್ಕೆ ತೆರಳಿ ಅಭ್ಯಾಸ ಮಾಡುವಂತೆ ಕಿವಿಮಾತು ಹೇಳಿದರು.


    ಈ ಸಂದರ್ಭದಲ್ಲಿ ಮೂಡಾ ಮಾಜಿ ಅಧ್ಯಕ್ಷ, ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯ ಚುಮ್ಮಿ ದೇವಯ್ಯ, ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರು, ಪೋಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts