More

    ಮತ್ತೆ ಆತ್ಮದ ಹಿಂದೆ ಬಿದ್ದರಾ ಹರ್ಷ? ‘ದಿ ಸೌಲ್​ ಆಫ್​ ವೇದ’ ಟೀಸರ್​ ಬಿಡುಗಡೆ

    ಬೆಂಗಳೂರು: ಶಿವರಾಜಕುಮಾರ್​ ಅವರ 125ನೇ ಚಿತ್ರವಾದ ‘ವೇದ’ ಬಿಡುಗಡೆಯಾಗುವುದಕ್ಕೆ ಇನ್ನು 20 ದಿನಗಳು ಮಾತ್ರ ಬಾಕಿ ಇವೆ. ಇದೇ ತಿಂಗಳ 23ರಂದು ಚಿತ್ರವು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಮೊದಲ ಟೀಸರ್​ ಆದ ‘ದಿ ಸೌಲ್​ ಆಫ್​ ವೇದ’ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಯುವ ಅಭಿನಯದ ಸಿನಿಮಾದಲ್ಲಿ ಐಶ್ವರ್ಯಾ ನಟಿಸುತ್ತಿರುವುದು ಸುಳ್ಳು ಎಂದ ಪ್ರಿಯಾಂಕಾ ಉಪೇಂದ್ರ

    ‘ವೇದ’ ಚಿತ್ರದ ಕಥೆಯೇನು? ಎಂಬ ವಿಷಯವನ್ನು ಶಿವರಾಜಕುಮಾರ್ ಅವರಾಗಲೀ, ನಿರ್ದೇಶಕ ಹರ್ಷ ಆಗಲೀ ಬಿಟ್ಟುಕೊಟ್ಟಿರಲಿಲ್ಲ. ಚಿತ್ರಕ್ಕೆ ‘ದಿ ಬ್ರೂಟಲ್​ ಸಿಕ್ಸ್ಟೀಸ್​’ ಎಂಬ ಅಡಿಬರಹ ಇದ್ದುದರಿಂದ, ಈ ಚಿತ್ರವು 1960ರ ಕಾಲಘಟ್ಟದಲ್ಲಿ ನಡೆಯುವ ಕಥೆ ಎಂಬುದು ಮಾತ್ರ ಸ್ಪಷ್ಟವಾಗಿತ್ತು. ಬಹುಶಃ ಆಗಿನ ಕಾಲದ ಭೂಗತಲೋಕದ ಕಥೆ ಇರಬಹುದು ಎಂಬ ಅಂದಾಜಿತ್ತು.

    ಆದರೆ, ಇಂದು ಬಿಡುಗಡೆಯಾಗಿರುವ ಚಿತ್ರದ ಟೀಸರ್​ ನೋಡಿದರೆ, ಹರ್ಷ ಮತ್ತೊಮ್ಮೆ ಆತ್ಮ ಮತ್ತು ಮಾಟ-ಮಂತ್ರದ ಕಥೆ ಹೇಳುವುದಕ್ಕೆ ಹೊರಟಿದ್ದಾರಾ? ಎಂಬ ಪ್ರಶ್ನೆ ಎದುರಾಗುತ್ತದೆ. ಚಿತ್ರದಲ್ಲಿ ಗೊಂಬೆಯೊಂದು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಅದನ್ನು ಟೀಸರ್​ನಲ್ಲಿ ಆಗಾಗ ತೋರಿಸಲಾಗುತ್ತದೆ. ಈ ಗೊಂಬೆ ಆಗಾಗ ಬರುವುದು ನೋಡಿದರೆ, ಚಿತ್ರದಲ್ಲಿ ಮಾಟ-ಮಂತ್ರ ಮತ್ತು ಆತ್ಮದ ಛಾಯೆ ಮತ್ತೊಮ್ಮೆ ಕಾಣಿಸುತ್ತದೆ. ಈ ಹಿಂದೆ ‘ಭಜರಂಗಿ’ ಮತ್ತು ‘ಭಜರಂಗಿ 2” ಚಿತ್ರಗಳಲ್ಲೂ, ಆತ್ಮ ಮತ್ತು ಮಾಟ-ಮಂತ್ರದ ಕಥೆಯಿತ್ತು. ಈಗ ಅದೇ ವಿಷಯವನ್ನಿಟ್ಟುಕೊಂಡು ಹರ್ಷ ಇನ್ನೊಂದು ಹೊಸ ಚಿತ್ರ ಮಾಡಿದ್ದಾರಾ? ಎಂಬ ಪ್ರಶ್ನೆ ಬರುವುದು ಸಹಜ.

    ಆದರೆ, ಈ ಬಗ್ಗೆ ಈಗಲೇ ಹೇಳುವುದು ಕಷ್ಟ. ಏಕೆಂದರೆ, ಇದು ಬರೀ ಟೀಸರ್​. ಅದನ್ನು ನೋಡಿ, ಇದು ಇಂಥದ್ದೇ ಕಥೆ ಎಂಬ ತೀರ್ಮಾನಕ್ಕೆ ಬರುವುದು ಕಷ್ಟ. ಹಾಗಾಗಿ, ಚಿತ್ರ ನೋಡಿದ ಮೇಲಷ್ಟೇ, ಅದರ ಬಗ್ಗೆ ಏನಾದರೂ ಹೇಳಬಹುದು.

    ಅಂದಹಾಗೆ, ‘ವೇದ’ ಚಿತ್ರವು ಗೀತಾ ಶಿವರಾಜಕುಮಾರ್​ ನಿರ್ಮಾಣದ ಮೊದಲ ಚಿತ್ರವಾಗಿದ್ದು, ಇದನ್ನು ಅವರು ಗೀತಾ ಆರ್ಟ್ಸ್​ ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ನಿರ್ಮಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ಕಥೆ-ಚಿತ್ರಕಥೆಯನ್ನೂ ಹರ್ಷ ಬರೆದಿದ್ದಾರೆ.

    ಇದನ್ನೂ ಓದಿ: ಸಾಯಿಬಾಬ ಕುರಿತು ಕನ್ನಡದಲ್ಲಿ ಇನ್ನೊಂದು ಸಿನಿಮಾ; ಈ ಬಾರಿ ಮಕ್ಕಳೇ ಪಾತ್ರಧಾರಿಗಳು …

    ಶಿವರಾಜಕುಮಾರ್​, ಗಾನವಿ ಲಕ್ಷ್ಮಣ್​, ಉಮಾಶ್ರೀ, ಅದಿತಿ ಸಾಗರ್​, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ರಾಘು ಶಿವಮೊಗ್ಗ, ಚೆಲುವರಾಜ್​ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಸ್ವಾಮಿ ಗೌಡ ಛಾಯಾಗ್ರಹಣ ಮಾಡಿದ್ದಾರೆ.

    ಹರಿದಾಡುತ್ತಿದ್ದ ಸುದ್ದಿಗೆ ಅಧಿಕೃತ ಮುದ್ರೆ ಒತ್ತಿದ ಸಿಂಹ ಪ್ರಿಯಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts