More

    ರಾತ್ರಿ ವಾಕಿಂಗ್‌ ಹೋಗುತ್ತಿದ್ದ ಅಪ್ಪನ ವಿರುದ್ಧ ಮಗನಿಂದಲೇ ಪೊಲೀಸರಿಗೆ ದೂರು! 

    ಲಾಕ್‌ಡೌನ್‌ ಇರುವಾಗ ಮನೆಯಿಂದ ಹೊರಗೆ ಬರಬೇಡಿ, ಕರೊನಾ ವೈರಸ್‌ ಸಮಸ್ಯೆ ಗಂಭೀರವಾಗಿದೆ ಎಂದು ಯಾರು ಎಷ್ಟೇ ಬಡಿದಾಡಿಕೊಂಡರೂ ಅದನ್ನು ‌ಕಿವಿ ಮೇಲೆ ಹಾಕಿಕೊಳ್ಳದವರು ಅಲ್ಲಲ್ಲಿ ಇದ್ದಾರೆ.

    ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿ ರೋಡಿಗೆ ಇಳಿಯುತ್ತಿರುವವರನ್ನು ನಿಯಂತ್ರಿಸುವುದು ಪೊಲೀಸರಿಗೆ ತಲೆನೋವು ಕೂಡ ಆಗಿದೆ. ಇನ್ನು‌ ಚಿಕ್ಕಮಕ್ಕಳು ರೋಡಿಗೆ ಇಳಿಯದಂತೆ ಮಾಡಲು ಅಪ್ಪ ಅಮ್ಮ ಹರಸಾಹಸ ಮಾಡೋದೂ ನಡೆದೇ ಇದೆ. ಅದೇ ಇನ್ನೊಂದೆಡೆ, ಇಲ್ಲೊಂದು ಪ್ರಕರಣದಲ್ಲಿ ವಾಕಿಂಗ್‌ ಪ್ರಿಯ ಅಪ್ಪನನ್ನು ನಿಯಂತ್ರಣಕ್ಕೆ ತರಲು ಮಗನೊಬ್ಬ ಏನು ಮಾಡಿದ ಎಂದು ತಿಳಿದು ಖುದ್ದು ಅಪ್ಪನೇ ದಂಗಾಗಿ ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    59 ವರ್ಷದ ವ್ಯಕ್ತಿಯೊಬ್ಬರಿಗೆ ದಿನವೂ ರಾತ್ರಿ 8 ಗಂಟೆಯ ಹೊತ್ತಿಗೆ ವಾಕಿಂಗ್‌ ಹೋಗುವ ರೂಢಿ. ಆದರೆ ಲಾಕ್‌ಡೌನ್‌ ಸಮಯದಲ್ಲಿ ಹೊರಗೆ ಓಡಾಡದಂತೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ, ಹೊರಗಡೆ ಹೋಗದಂತೆ ಅವರ ಮಗ ಪದೇ ಪದೇ ಹೇಳುತ್ತಿದ್ದ. ಆದರೆ ಈ ಅಪ್ಪ ತನಗೇನೂ ಆಗುವುದಿಲ್ಲ ಎಂದು ಮಗನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಒಂದು ದಿನ, ಎರಡು ದಿನ… ಹೇಳಿ ನೋಡಿದ ಈ ಮಗ. ಆದರೆ ಅಪ್ಪ ಮಾತ್ರ ಕ್ಯಾರೇ ಮಾಡಲಿಲ್ಲ. ನಿನಗೆ ತಕ್ಕ ಶಾಸ್ತಿ ಕಲಿಸುತ್ತೇನೆ ಎಂದುಕೊಂಡ ಅಪ್ಪ.

    ಅದೊಂದು ದಿನ ಮನೆ ಬಾಗಿಲು ಅಪ್ಪ ತೆರೆದು ನೋಡಿದರೆ ಎದುರಿಗೆ ಪೊಲೀಸ್‌! ಈ ಪೊಲೀಸರು ತಮ್ಮ ಮನೆಗೆ ಯಾಕಾಗಿ ಬಂದಿದ್ದಾರೆ ಎಂದು ಅಪ್ಪ ದಂಗಾಗಿ ಹೋದರು. ಕಾರಣ ಕೇಳಿದಾಗ ಅವರ ವಿರುದ್ಧವೇ ದೂರು ದಾಖಲಾದದ್ದು ಕೇಳಿ ಇನ್ನೂ ಶಾಕ್‌ ಆಯಿತು. ಆಗ ಒಳಗಿನಿಂದ ಬಂದ ಮಗ, ತಾನೇ ದೂರು ನೀಡಿರುವುದಾಗಿ ಹೇಳಿದ! ಅಪ್ಪನನ್ನು ತನ್ನಿಂದ ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂದು ಗೊತ್ತಾದಾಗ ರೋಡಿಗಿಳಿಯೋ ಅಪ್ಪನ ವಿರುದ್ಧ ಮಗ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟುಬಿಟ್ಟಿದ್ದ.

    ಕರೊನಾ ವೈರಸ್ ಗಂಭೀರತೆಯನ್ನು ಅರಿಯದೆ ಅಪ್ಪ ಚಿಕ್ಕ ಮಕ್ಕಳ ಥರ ಹಠ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಗರಾಯ ವಿವರಿಸಿದಾಗಲೇ ಈ ಅಪ್ಪನಿಗೆ ತಿಳಿದದ್ದು ಮಗನೇ ತಮ್ಮ ವಿರುದ್ಧ ದೂರು ಕೊಟ್ಟಿದ್ದಾನೆ ಎಂದು.
    ಮಗನ ದೂರಿನ ಆಧಾರದ ಮೇಲೆ ಅಪ್ಪನ ವಿರುದ್ಧ ಕೇಸ್ ಬುಕ್ ಮಾಡಿಕೊಳ್ಳಲಾಗಿದೆ. ಲಾಕ್‌ಡೌನ್‌ ಆದೇಶ ಉಲ್ಲಂಘನೆ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಂಡಿರುವ ಪೊಲೀಸರು ಖಡಕ್‌ ವಾರ್ನಿಂಗ್‌ ಕೊಟ್ಟು ಹೋಗಿದ್ದಾರೆ. ತಾನು ಮಾಡಲಾಗದ್ದನ್ನು ಪೊಲೀಸರು ಮಾಡಿದ್ದಾರೆ ಎಂದು ಮಗನೀಗ ನಿಟ್ಟುಸಿರು ಬಿಟ್ಟಿದ್ದಾನೆ.

    ಇನ್ನು ಮುಂದೆ ಕರೊನಾ ವೈರಸ್​ ಹೆಲ್ತ್ ಬುಲೆಟಿನ್ ಬಿಡುಗಡೆ ಜವಾಬ್ದಾರಿ ಸಚಿವ ಸುರೇಶ್​ ಕುಮಾರ್​ ಹೆಗಲಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts