More

    ದೇಶ ಕಾಯುವ ಯೋಧರ ಸೇವೆ ಸ್ಮರಣೀಯ

    ತರೀಕೆರೆ: ದೇಶದ ರಕ್ಷಣೆಗಾಗಿ ದೇಹ ತ್ಯಾಗ ಮಾಡಿದ ಯೋಧರ ಸೇವೆ ಸ್ಮರಣೀಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
    ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ತಾಪಂ, ನೆಹರು ಯುವ ಕೇಂದ್ರ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ನಮ್ಮ ಮಣ್ಣು-ನಮ್ಮ ದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ದೇಶಕ್ಕೆ ಸ್ವಾತಂತ್ರೃ ದೊರೆತು 75 ವರ್ಷ ಸಂದಿವೆ. ಇದುವರೆಗೂ ಅನೇಕ ಯೋಧರು ರಾಷ್ಟ್ರದ ರಕ್ಷಣೆಗಾಗಿ ಬಲಿಯಾಗಿದ್ದು, ಅವರೆಲ್ಲರ ಬಲಿದಾನದ ನೆನಪಿಗಾಗಿ ದೆಹಲಿಯಲ್ಲಿ ಉದ್ಯಾನ ನಿರ್ಮಾಣ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
    ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಎಸ್.ಗಣೇಶ್ ಮಾತನಾಡಿ, ಈ ಕಾರ್ಯಕ್ರಮ ರಾಷ್ಟ್ರ ವ್ಯಾಪ್ತಿಯಾಗಿದೆ. ಈ ಸಲುವಾಗಿ ದೇಶದ ವಿವಿಧೆಡೆ 7,500 ಕಡೆ ಮಣ್ಣು ಸಂಗ್ರಹಿಸಲಾಗುತ್ತಿದ್ದು, ಇದರಿಂದ ದೆಹಲಿಯಲ್ಲಿ ಹುತಾತ್ಮ ಯೋಧರ ನೆನಪಿಗಾಗಿ ಅಮೃತ ಉದ್ಯಾನ ನಿರ್ಮಾಣವಾಗಲಿದೆ ಎಂದು ಹೇಳಿದರು.
    ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ರಾಷ್ಟ್ರದ ಐಕ್ಯತೆ ಕುರಿತು ಜಾಗೃತಿ ಮೂಡಿಸಲು ಮಣ್ಣು ಸಂಗ್ರಹ ಕಾರ್ಯ ನಡೆಯುತ್ತಿದೆ. ದೇಶದ ರಕ್ಷಣೆ ಮತ್ತು ಐಕ್ಯತೆಗಾಗಿ ಶ್ರಮಿಸಿದ ಸೈನಿಕರ ಸೇವೆ ಅವಿಸ್ಮರಣೀಯ. ಇಂಥ ಸಂದರ್ಭಗಳಲ್ಲಿ ಅಂಥವರನ್ನು ಸ್ಮರಿಸುವುದು ಪ್ರಸ್ತುತ ಎಂದರು.
    ತಾಪಂ ಇಒ ಎಸ್.ಗೀತಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ, ಪುರಸಭೆ ಅಧ್ಯಕ್ಷ ಪರಮೇಶ್, ಪ್ರಾಚಾರ್ಯ ಡಾ.ಮಂಜುನಾಥ್, ಮಾಜಿ ಸೈನಿಕ ರಂಗನಾಥ್, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಟಿ.ಎಸ್.ದರ್ಶನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts