More

    ಮೂರೇ ತಿಂಗಳಿಗೆ ರಸ್ತೆ ಮೂರಾಬಟ್ಟೆ…

    ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಗಾಳೀಜಡ್ಡಿ ಮುಖ್ಯ ರಸ್ತೆ ಯ ರ್ಕಸವಲ ಕ್ರಾಸ್​ನಿಂದ ರ್ಕಸವಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಸುಧಾರಣೆ ಮಾಡಿ ಮೂರು ತಿಂಗಳೊಳಗೆ ಕಿತ್ತೆದ್ದು ಹೋಗಿದೆ.

    ಗಾಳೀಜಡ್ಡಿ ಮುಖ್ಯರಸ್ತೆಯ ರ್ಕಸವಲ್ ಕ್ರಾಸ್​ನಿಂದ ಪರಿಶಿಷ್ಟ ಜಾತಿ ಕಾಲೋನಿಯವರೆಗೆ ಅಂದಾಜು 638ಮೀಟರ್ ಇದ್ದು ಈ ರಸ್ತೆಯನ್ನು ಕಳೆದ ಮೂರು ತಿಂಗಳ ಹಿಂದಷ್ಟೆ 20ಲಕ್ಷ ರೂಗಳಲ್ಲಿ ಡಾಂಬರೀಕರಣ ಮಾಡಲಾಗಿದೆ.

    ಆದರೆ ಡಾಂಬರೀಕರಣ ಮಾಡಿದ ಒಂದೆರಡು ವಾರದಲ್ಲಿಯೇ ಅಲ್ಲಲ್ಲಿ ಡಾಂಬರೂ ಎದ್ದು ಹೋಗಿತ್ತು. ಈಗ ಮಳೆಗಾಲ ಪ್ರಾರಂಭವಾಗಿ ಒಂದು ತಿಂಗಳೂ ಆಗಿಲ್ಲ. ಈಗಲೇ ಡಾಂಬರೀಕರಣ ಎನ್ನುವುದು ಕಿತ್ತೆದ್ದು ಹೋಗುತ್ತಿದೆ.

    ಈ ರಸ್ತೆಯಲ್ಲಿ ಒಮ್ಮೆ ಓಡಾಡಿದರೆ ಓಡಾಡುವಾಗ ರಸ್ತೆಯೇ ನಡುಗುವ ಅನುಭವ. ಇದು ಗ್ರಾಮೀಣ ರಸ್ತೆ ಆಗಿರುವುದರಿಂದ ನಿತ್ಯ ಕೆಲವೇ ವಾಹನಗಳು ಮಾತ್ರ ಸಂಚರಿಸುತ್ತದೆ.

    ಆದರೂ ಈ ರಸ್ತೆ ಕಿತ್ತು ಅರಲು ಗದ್ದೆಯಂತಾಗುತ್ತಿರುವುದರಿಂದ ರಸ್ತೆ ನಿರ್ವಹಣೆ ಮಾಡುತ್ತಿರುವ ಜಿಪಂ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಊರವರು ಆಗ್ರಹಿಸಿದ್ದಾರೆ.

    ನಾಮಫಲಕ ಇಲ್ಲ: ಸಾಮಾನ್ಯವಾಗಿ ಯಾವುದೇ ಕಾಮಗಾರಿ ಆಗಬೇಕಾದರೆ ಕಾಮಗಾರಿಯ ಮಾಹಿತಿಯ ನಾಮಫಲಕ ಹಾಕುತ್ತಾರೆ. ಆದರೆ ಈ ರಸ್ತೆಗೆ ನಾಮಫಲಕ ಅಳವಡಿಸಿಲ್ಲ. ಯಾವ ಯೋಜನೆ ರಸ್ತೆ, ಎಷ್ಟು ದೂರ, ಕಾಮಗಾರಿಯ ಮೊತ್ತ ಎಷ್ಟು. ನಿರ್ವಹಣೆ ಎಷ್ಟು ವರ್ಷ, ಕಾಮಗಾರಿ ಗುತ್ತಿಗೆದಾರರು ಯಾರು ಎನ್ನುವ ಮಾಹಿತಿಯನ್ನು ಒಳಗೊಂಡಿರುವ ನಾಮ ಫಲಕ ಇರುತ್ತಿತ್ತು ಅದನ್ನೂ ಇಲ್ಲಿ ಅಳವಡಿಸಿಲ್ಲ.

    ರ್ಕಸವಲ್ ರಸ್ತೆಯ ಡಾಂಬರೀಕರಣ ಕಿತ್ತೆದ್ದು ಹೋಗುತ್ತಿದೆ ಎನ್ನುವ ದೂರು ಬಂದಿದೆ. ರಸ್ತೆಯನ್ನು ಪರಿಶೀಲಿಸಿ ಸಂಚಾರಕ್ಕೆ ತೊಂದರೆ ಆಗದಂತೆ ತಾತ್ಕಾಲಿಕವಾಗಿ ಏನು ಮಾಡಬಹುದು ಎನ್ನುವುದನ್ನು ಮಾಡಿಕೊಡುತ್ತೇವೆ.
    | ಕುಸುಮಾ ಹೆಗಡೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿಪಂ ಉಪವಿಭಾಗ ಸಿದ್ದಾಪುರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts