More

    “ಸಸಾರ ಅಲ್ಲವೋ ಸಂಸಾರ’ ಕೃತಿ ಬಿಡುಗಡೆ

    ಧಾರವಾಡ: ಲೇಖಕಿ ರಾಧಿಕಾ ಕಾಖಂಡಿಕಿ ಅನುವಾದಿಸಿದ ‘ಸಸಾರ ಅಲ್ಲವೋ ಸಂಸಾರ’ ಕೃತಿಯನ್ನು ನಗರದ ರಂಗಾಯಣದಲ್ಲಿ ಮನೋಹರ ಗ್ರಂಥ ಮಾಲಾ ವತಿಯಿಂದ ಬಿಡುಗಡೆ ಮಾಡಲಾಯಿತು.


    ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಾಟಕಕಾರ ಆನಂದ ಝುಂಜರವಾಡ, ಪತಿ- ಪತ್ನಿಯ ಕೌಟುಂಬಿಕ ಸಂಬಂಧ ಸರಿ ಇಲ್ಲದಿದ್ದರೆ ಮಕ್ಕಳ ಮೇಲೆ ಆಗುವ ಬದಲಾವಣೆಗಳನ್ನು ‘ಸಸಾರ ಅಲ್ಲವೋ ಸಂಸಾರ’ ನಾಟಕದಲ್ಲಿ ಸೂಕ್ಷ ್ಮವಾಗಿ ಹೇಳಲಾಗಿದೆ ಎಂದರು.


    ಹದಗೆಟ್ಟ ಸಂಬಂಧದಿಂದ ಆಗುವ ಕೆಟ್ಟ ಪರಿಣಾಮಗಳು ಒಂದು ತಲೆಮಾರಿಗೆ ಮಾತ್ರ ಸೀಮಿತವಾಗದೆ, ಮುಂದಿನ ತಲೆಮಾರನ್ನು ಆಕ್ರಮಿಸಬಹುದು ಎನ್ನುವ ಎಚ್ಚರಿಕೆ ನೀಡುವಲ್ಲಿ ನಾಟಕ ಯಶಸ್ವಿಯಾಗಿದೆ. ಮೂಲ ಮರಾಠಿ ಲೇಖಕ ಡಾ. ಸೀತಾರಾಮ ಉಮರ್ಜೀಕರ ಅವರ ನಾಟಕ ರಚನೆ, ಆಯ್ದುಕೊಂಡ ವಿಷಯ ವಿಟಿತ ಕುಟುಂಬದ ಕಥೆಯಾದರೂ ನಾಟಕದಲ್ಲಿ ಬಳಸಿದ ಕಾಲೈಕ್ಯ, ಸ್ಥಳೈಕ್ಯ, ಕ್ರಿಯೈಕ್ಯ ತುಂಬಾ ಮಹತ್ವದ್ದಾಗಿದೆ ಎಂದರು.


    ಅಧ್ಯಕ್ಷತೆ ವಹಿಸಿದ್ದ ಲೇಖಕ ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಇತರ ಭಾಷೆಯ ಉತ್ತಮ ಕೃತಿಗಳು ಕನ್ನಡಕ್ಕೆ ಬರಬೇಕು. ಹಾಗೆಯೇ ಕನ್ನಡದ ಪ್ರಮುಖ ಗ್ರಂಥಗಳು ಭಾರತೀಯ ಮತ್ತು ವಿಶ್ವದ ಇತರ ಭಾಷೆಗಳಿಗೆ ಅನುವಾದಗೊಳ್ಳಬೇಕು ಎಂದು ಆಶಿಸಿದರು.


    ಮೂಲ ಲೇಖಕ ಡಾ. ಸೀತಾರಾಮ ಉಮರ್ಜೀಕರ, ಅನುವಾದಕಿ ರಾಧಿಕಾ ಕಾಖಂಡಿಕಿ ಮಾತನಾಡಿದರು.


    ಡಾ. ಹ.ವೆಂ. ಕಾಖಂಡಿಕಿ, ಮನೋಹರ ಗ್ರಂಥಮಾಲಾ ವ್ಯವಸ್ಥಾಪಕ ಡಾ. ರಮಾಕಾಂತ ಜೋಶಿ, ಮೃದುಲ ನಾಗಸಂಪಿಗೆ, ಪ್ರೊ. ಹರ್ಷ ಡಂಬಳ, ಅನಿಲ ಕಾಖಂಡಿಕಿ, ಪ್ರೊ. ಕವಿತಾ ನಾಗಸಂಪಿಗೆ, ಚಂದ್ರಕಾಂತ ಬೆಲ್ಲದ, ಮಲ್ಲಿಕಾರ್ಜುನ ಹಿರೇಮಠ, ದುಷ್ಯಂತ ನಾಡಗೌಡ, ಸಮೀರ ಜೋಶಿ, ಅರವಿಂದ ಕುಲಕರ್ಣಿ, ಡಾ.ಶಶಿಧರ ನರೇಂದ್ರ, ಕಿಶೋರ್ ಮಾಡಲಗಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts