More

    ಕೊಂಚ ಬಿಡುವು ಕೊಟ್ಟ ಮಳೆ

    ತೀರ್ಥಹಳ್ಳಿ: ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿ ಸುತ್ತಮುತ್ತ ವಿಪರೀತ ಮಳೆಯಾಗಿದ್ದು ಶುಕ್ರವಾರ ಆಗುಂಬೆ ಭಾಗ ಸೇರಿದಂತೆ ತಾಲೂಕಿನಾದ್ಯಂತ ಮಳೆ ಪ್ರಮಾಣ ಇಳಿಮುಖವಾಗಿದೆ.

    ಮುಂಗಾರು ಬಿರುಸುಗೊಂಡಿದ್ದರಿAದ ತುಂಗಾನದಿಯಲ್ಲಿ ಏರಿಕೆ ಕಂಡಿದ್ದ ನೀರಿನ ಮಟ್ಟ ಗುರುವಾರ ಸಂಜೆ ವೇಳೆಗೆ ಮರ‍್ನಾಲ್ಕೂ ಅಡಿಯಷ್ಟು ಇಳಿಕೆಯಾಗಿದೆ. ಮಳೆ ಇಳಿಮುಖವಾದ ಕಾರಣ ತಾಲೂಕಿನ ಎಲ್ಲ ಪ್ರಮುಖ ನದಿಗಳಲ್ಲೂ ನೀರಿನ ಮಟ್ಟ ಕುಸಿತಗೊಂಡಿದೆ. ಪ್ರತಿ ವರ್ಷ ಜೂನ್ ನಂತರದಲ್ಲಿ ತುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ಈ ವರ್ಷ ಜುಲೈ ಎರಡನೇ ವಾರವಾದರೂ ನದಿ ಪಾತ್ರ ತುಂಬದಿರುವುದು ಗಮನಾರ್ಹ ಸಂಗತಿಯಾಗಿದೆ.
    ಶುಕ್ರವಾರ ಬೆಳಗಿನವರೆಗೆ ಕಳೆದ 24 ಗಂಟೆಗಳಲ್ಲಿ ಆಗುಂಬೆ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 78 ಮಿಮೀ ಮಳೆಯಾಗಿದ್ದು ಮಂಡಗದ್ದೆ ಹೋಬಳಿ 20 ಮಿಮೀ ಅತಿ ಕಡಿಮೆ ಮಳೆಯಾಗಿದೆ. ಉಳಿದಂತೆ ಕಸಬಾ ಹೋಬಳಿಯಲ್ಲಿ 37.2ಮಿಮೀ, ಅಗ್ರಹಾರ ಹೋಬಳಿಯಲ್ಲಿ 42.8 ಮಿಮೀ, ಮುತ್ತೂರು ಹೋಬಳಿಯಲ್ಲಿ 31.8 ಮಿಮೀ ಮಳೆ ಬಿದ್ದಿದೆ. ಜನವರಿಯಿಂದ ತಾಲೂಕಿನ ವಾಡಿಕೆಯ ಮಳೆ 931 ಮಿ.ಮೀ ಆಗಿದೆ. ಶುಕ್ರವಾರದವರೆಗೆ 401 ಮಿಮೀ ಮಾತ್ರ ಮಳೆಯಾಗಿದೆ.

    ಮಳೆಗೆ ಸ್ಮಶಾನದ ಮೇಲ್ಛಾವಣಿ ಹಾನಿ
    ತೀರ್ಥಹಳ್ಳಿ: ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಗಾಳಿಗೆ ಕೋಣಂದೂರಿನ ದೊಡ್ಡಕೆರೆ ಬಳಿಯ ಸ್ಮಶಾನದ ಮಾಡಿನ ಶೀಟುಗಳು ಹಾರಿ ಹೋಗಿದ್ದು ಶುಕ್ರವಾರ ನಿಧನರಾದ ವ್ಯಕ್ತಿಯ ಅಂತ್ಯಸAಸ್ಕಾರವನ್ನು ಸುರಿಯುತ್ತಿದ್ದ ಮಳೆಯಲ್ಲಿಯೇ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. ಈ ಕುರಿತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರದಲ್ಲಿರುವ ಈ ಮುಕ್ತಿಧಾಮದ ನಿರ್ವಹಣೆ ಕೂಡಾ ಸಮಾಧಾನಕರವಾಗಿಲ್ಲ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನದಲ್ಲಿ ಸೌಲಭ್ಯಗಳಿಗೆ ಕೊರತೆಯಾಗದಂತೆ ಗ್ರಾಪಂ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯವೂ ಜನರಿಂದ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts