More

    ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

    ಬೀರೂರು: ತರೀಕೆರೆ, ಬೀರೂರು, ಲಿಂಗದಹಳ್ಳಿಯಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಮಳೆಯಿಂದ ಬೀರೂರಿನ ಕೆಲವು ತೋಟಗಳಲ್ಲಿ ಬಾಳೆ ಗಿಡಗಳು ನೆಲಕ್ಕೂರುಳಿವೆ. ತರೀಕೆರೆ ತಾಲೂಕಿನ ಎ.ರಂಗಾಪುರ, ಇಟ್ಟಿಗೆ, ಸೀತಾಪುರ ಕಾವಲು, ಹಿರೇಕಾತೂರು, ಬೇಲೇನಹಳ್ಳಿ, ಕಟ್ಟೇಹೊಳೆಯಲ್ಲಿ ಎರಡು ಗಂಟೆಗೂ ಹೆಚ್ಚು ಮಳೆಯಾಗಿದೆ. ಲಿಂಗದಹಳ್ಳಿ ಹೋಬಳಿಯಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿಲ್ಲದೆ ಒಣಗುವ ಹಂತ ತಲುಪಿದ್ದ ಅಡಿಕೆ ತೆಂಗು, ಕಾಫಿ, ಕಾಳು ಮೆಣಸು, ಸೇರಿದಂತೆ ವಿವಿಧ ತೋಟದ ಬೆಳೆಗಳಿಗೆ ಮರುಜೀವ ಬಂದಂತಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts