More

    ರೈತರ ಮೊಗದಲ್ಲಿ ಮಂದಹಾಸ ತಂದ ಮಳೆ

    ಶಿವಮೊಗ್ಗ: ಮುಂಗಾರು ಕೊರತೆಯಿಂದ ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದ ರೈತರಿಗೆ ಭಾನುವಾರ ರಾತ್ರಿಯಿಡೀ ಸುರಿದ ಮಳೆ ವರದಾನವಾಗಿದೆ. ಜಿಲ್ಲೆಯಾದ್ಯಂತ ಸಂಜೆಯಿಂದ ಆರಂಭಗೊಂಡ ಮಳೆಯು ಬೆಳಗಿನಜಾವರೆಗೆ ಸುರಿದಿದ್ದು ಸಣ್ಣಪುಟ್ಟ ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದವು. ಸತತ ಮೂರು ತಿಂಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.

    ರಾತ್ರಿ ಶುರುವಾದ ಮಳೆ ಮಿಂಚು, ಗುಡುಗು ಸಹಿತ ಬೆಳಗಿನ ಜಾವದವರೆಗೆ ಅಬ್ಬರಿಸಿತು. ಮಳೆ ಇಲ್ಲದೆ ಬಾಯ್ತೆರೆದು ನಿಂತಿದ್ದ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳಿಗೆ ಒಂದೇ ರಾತ್ರಿ ನೀರು ಹರಿದುಬಂದಿದ್ದು ತೆನೆಗಟ್ಟುತ್ತಿದ್ದ ಭತ್ತಕ್ಕೆ ಮಳೆ ವರವಾಯಿತು. ಜತೆಗೆ ಅಡಕೆ, ಬಾಳೆ, ಮೆಕ್ಕೆಜೋಳ, ಶುಂಠಿ ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳಿಗೂ ಮಳೆ ಬಂದಿದ್ದು ಅನುಕೂಲವಾಗಿದೆ.
    ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಶಿಕಾರಿಪುರ, ಭದ್ರಾವತಿ ಮತ್ತು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲೂ ಉತ್ತಮ ಮಳೆ ಬಿದ್ದಿದೆ. ಅದರಲ್ಲೂ ಶರಾವತಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರದಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ರಾತ್ರಿಗೆ 9 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಂದಿದೆ. ಭಾನುವಾರ ಬೆಳಗ್ಗೆಯಷ್ಟೇ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿತ್ತು. ಸೋಮವಾರ ಬೆಳಗ್ಗೆ ಒಳಹರಿವಿನ ಪ್ರಮಾಣ 9,568 ಕ್ಯೂಸೆಕ್‌ಗೆ ತಲುಪಿತ್ತು.
    ಶಿವಮೊಗ್ಗ ನಗರದ ಸೇರಿ ಜಿಲ್ಲೆಯ ಬಹುತೇಕ ಭಾಗದಲ್ಲಿ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬೆಳಗ್ಗೆಯೂ ವಿದ್ಯುತ್ ಸಂಪರ್ಕ ಇರಲಿಲ್ಲ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರ ಮನೆ ಮೇಲೆ ಬಿದ್ದು ದಂಪತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts