More

    ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

    ಕನಕಪುರದಲ್ಲಿ ಸಂಗಮದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲು ಹೊರಟಿದ್ದ ರೈತರು

    ಕನಕಪುರ: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಂಗಮದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಬೆಂಡೆಗೋಡು ಚೆಕ್‌ಪೋಸ್ಟ್ ಬಳಿ ತಡೆದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದರು.
    ನಗರದ ದೇಗಲು ಮಠದಲ್ಲಿ ವಾಸ್ತವ್ಯ ಹೂಡಿದ್ದ ರೈತರು ಬುಧವಾರ ಬೆಳಗ್ಗೆ ಚನ್ನಬಸಪ್ಪ ವೃತ್ತದಿಂದ ಸಂಗಮದತ್ತ ಮೆರವಣಿಗೆಯಲ್ಲಿ ಹೊರಟರು. ಬಿಗಿ ಬಂದೋಬಸ್ತ್ ಏರ್ಪಡಿಸಿದ್ದ ಕಾರಣ ರೈತರು ರಸ್ತೆಯಲ್ಲಿಯೇ ಕುಳಿತು ಪ್ರತಿಭಟಿಸಿದರು.

    ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ, ಸರ್ಕಾರದ ಕೈಯಲ್ಲಿ ಆಗದ ಕೆಲಸವನ್ನು ಮಾಡಲು ಮುಂದಾದ ರೈತರನ್ನು ತಡೆದು ಅಡ್ಡಿಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳದಲ್ಲಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ.ಸುರೇಶ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರಾದರೂ ಪಟ್ಟು ಬಿಡಲಿಲ್ಲ. ಕೆಲಹೊತ್ತು ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬಸ್ ಹಾಗೂ ಪೊಲೀಸ್ ವಾಹನದಲ್ಲಿ ಪ್ರತಿಭಟನಾಕಾರರನ್ನು ತುಂಬಿ ಕರೆದೊಯ್ಯಲಾಯಿತು.

    ಡಿವೈಎಸ್‌ಪಿಗಳಾದ ಕಷ್ಣಕುವಾರ್, ಲೋಕೇಶ್, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಕೆ.ಎಲ್.ಕೃಷ್ಣ, ಮಿಥುನ್ ಶಿಲ್ಪ, ಟಿ.ಟಿ. ಕಷ್ಣ, ಎಸ್‌ಐ ಅನಂತರಾಮು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts