More

    ರಾಜ್ಯದ ಜನರಿಗೆ ಮಿಲ್ಕ್​ ಶಾಕ್​! 3 ರೂ. ಹೆಚ್ಚಳ

    ಬೆಂಗಳೂರು: ನಂದಿನಿ ಹಾಲಿನ ದರ ಏರಿಸಬೇಕೆಂಬ ಕರ್ನಾಟಕ ಹಾಲು ಮಹಾಮಂಡಳಿಗಳ ಒಕ್ಕೂಟದ ಬಹು ದಿನಗಳ ಬೇಡಿಕೆಗೆ ಸರ್ಕಾರ ಕೊನೆಗೂ ಮಣಿದಿದೆ. ಆಗಸ್ಟ್​ ಒಂದರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಮೂರು ರೂ. ಏರಿಕೆಯಾಗುತ್ತಿದ್ದು, ಈ ಮೂರು ರೂ. ಹಾಲು ಉತ್ಪಾದಕರಿಗೆ ವರ್ಗಾವಣೆಯಾಗುತ್ತದೆ.

    ಹಾಲಿನ ಒಕ್ಕೂಟಗಳು ನಷ್ಟದಲ್ಲಿದ್ದು, ಹಾಲು ಉತ್ಪಾದಕರೂ ಸಹ ಮೇವಿನ ಬೆಲೆ ಏರಿಕೆಯಿಂದ ಸಂಕಷ್ಟು ಅನುಭವಿಸುತ್ತಿದ್ದು, ಪ್ರತಿ ಲೀಟರ್ ಮೇಲೆ 5 ರೂ. ದರ ಏರಿಸುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಕೋರಿದ್ದವು.

    ಮೂರು ಬಾರಿ ಸರ್ಕಾರದ ಒಪ್ಪಿಗೆಗೆ ಹಾಲು ಒಕ್ಕೂಟ ಮನವಿ ಮಾಡಿತ್ತು. ವಿಧಾನಸಭೆ ಚುನಾವಣೆ, ಹೊಸ ಸರ್ಕಾರ ರಚನೆಯ ನೆಪ ಹೇಳಿ ಮುಂದೂಡಲಾಗಿತ್ತು. ಕೊನೆಗೂ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಹಾಲು ಒಕ್ಕೂಟಗಳು ಬೆಲೆ ಏರಿಕೆ ಪ್ರಸ್ತಾಪ ಮಂಡಿಸಿದವು. ಮತ್ತು ಅನಿವಾರ್ಯತೆಯನ್ನು ವಿವರಿಸಿದವು.

    ಮೂರು ತಾಸು ಮ್ಯಾರಥಾನ್ ಸಭೆಯಲ್ಲಿ ಸಾಕಷ್ಟು ಚರ್ಚೆಯಾಯಿತು. ಹಾಳು ದರ ಏರಿಸದೇ ಪರ್ಯಾಯ ದಾರಿಗಳ ಬಗ್ಗೆಯೂ ವಿಚಾರ ವಿನಿಮಯ ನಡೆಯಿತು. ಮೊದಲ ಎರಡೂವರೆ ತಾಸಿನ ಸಭೆಯಲ್ಲಿ ಸಿಎಂ ಬೆಲೆ ಏರಿಕೆಗೆ ಒಪ್ಪಿರಲಿಲ್ಲ.

    ಕೆಲವು ಹಾಲು ಒಕ್ಕೂಟಗಳು ಲಾಭ ಮಾಡಿಕೊಳ್ಳುತ್ತವೆ, ಮತ್ತೆ ಕೆಲವು ನಷ್ಟದಲ್ಲಿರುತ್ತವೆ ಎಂದರೆ ಏನರ್ಥ. ಯಾವುದೇ ಕಾರಣಕ್ಕೂ ಬೆಲೆ ಏರಿಕೆಗೆ ಅವಕಾಶ ಕೊಡುವುದಿಲ್ಲ. ಹಾಲಿನ ದರ ಏರಿಕೆಯಾದರೆ ಸರ್ಕಾರ ಉತ್ತರ ಕೊಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ವಾದಿಸಿದರು.
    ಅಂತಿಮವಾಗಿ ಹಾಲು ಒಕ್ಕೂಟಗಳ ಒತ್ತಾಯಕ್ಕೆ ಸಿಎಂ ಮಣಿಯಲೇ ಬೇಕಾಯಿತು. ಆದರೆ, ಎಷ್ಟು ಏರಿಕೆ ಮಾಡಬೇಕೆಂಬ ವಿಷಯದಲ್ಲಿ ಚರ್ಚೆಯಲ್ಲಿ ಪ್ರತಿ ಲೀಟರ್‌ಗೆ ಮೂರು ರೂ. ಏರಿಕೆ ಮಾಡಲು ಸಿಎಂ ಒಪ್ಪಿದರು.

    ಆದರೆ, ಇದೇ ವೇಳೆ ಸಿಎಂ ಹಾಲು ಒಕ್ಕೂಟಗಳಿಗೆ ಷರತ್ತನ್ನೂ ಹಾಕಿದರು. ಏರಿಕೆ ಮಾಡುವ ಮೂರು ರೂ.ದರವನ್ನು ಹಾಲು ಉತ್ಪಾದಕರಿಗೆ ರವಾನಿಸಬೇಕು. ಒಂದು ವೇಳೆ ಒಂದೇ ಒಂದು ದೂರು ಬಂದರೂ ಸಂಬಂಧಪಟ್ಟ ಜಿಲ್ಲಾ ಹಾಲು ಒಕ್ಕೂಟಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವುದಾಗಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts