More

    ಪೈಪ್ ಒಡೆದು ಕುಡಿಯುವ ನೀರು ಪೋಲು

    ತಿ.ನರಸೀಪುರ: ಪಟ್ಟಣದ ವಿದ್ಯೋದಯ ಕಾಲೇಜು ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಇದನ್ನು ದುರಸ್ತಿಗೊಳಿಸದ ಪುರಸಭೆ ಹಾಗೂ ತಾಲೂಕು ಆಡಳಿತದ ನಿರ್ಲಕ್ಷೃಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಪಟ್ಟಣದ ವಿದ್ಯೋದಯ ಕಾಲೇಜು ರಸ್ತೆಯ ವಿದ್ಯಾಗಣಪತಿ ದೇವಸ್ಥಾನದ ಎದುರು ಮುಂಭಾಗ ಮೊದಲೇ ಒಡೆದಿದ್ದ ಪೈಪನ್ನು ಸರಿಪಡಿಸದೆ ಡಾಂಬರೀಕರಣ ಮಾಡಿದ ಹಿನ್ನೆಲೆಯಲ್ಲಿ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಜತೆಗೆ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ.
    ಕಾಲೇಜು ರಸ್ತೆಯಲ್ಲಿ ಡಾಂಬರೀಕರಣ ಮಾಡುತ್ತಿದ್ದ ವೇಳೆ ಸಾರ್ವಜನಿಕರು ಪೈಪ್ ಒಡೆದಿರುವ ಬಗ್ಗೆ ಗಮನ ಸೆಳೆದರೂ ಸಂಬಂಧಿಸಿದ ಗುತ್ತಿಗೆದಾರ ಅವರ ಮಾತಿಗೆ ಮನ್ನಣೆ ಡಾಂಬರೀಕರಣ ಮಾಡಿದ್ದೇ ಸಮಸ್ಯೆಗೆ ಕಾರಣವಾಗಿದೆ.


    ಕಳೆದ ಮೂರು ತಿಂಗಳಿಂದಲೂ ಒಡೆದ ಪೈಪನ್ನು ದುರಸ್ತಿ ಪಡಿಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನೀರು ಹರಿದು ರಸ್ತೆ ರಾಡಿಯಾಗುತ್ತಿದೆ. ವಿದ್ಯಾಗಣಪತಿ ದೇವಸ್ಥಾನದಿಂದ ಖಾಸಗಿ ಬಸ್ ನಿಲ್ದಾಣದವರೆಗೂ ನೀರು ಹರಿದು ಹೋಗುತ್ತಿದ್ದು, ಇದುವರೆಗೂ ಪುರಸಭೆಯವರಾಗಲಿ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿಲ್ಲ. ಬೇಸಿಗೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿಲ್ಲದೆ ಪರದಾಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ತಾಲೂಕು ಆಡಳಿತದ ಬೇಜವಾಬ್ದಾರಿತನದಿಂದ ದಿನಕ್ಕೆ ಸಾವಿರಾರು ಲೀಟರ್ ನೀರು ಪೋಲಾಗುತ್ತಿರುವುದು ವಿಪರ್ಯಾಸ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts