More

    ಪರ್ಸೆಂಟೇಜ್ ಆರೋಪ ರಾಜಕೀಯ ಪ್ರೇರಿತ

    ರಾಣೆಬೆನ್ನೂರ: ಪರ್ಸೆಂಟೇಜ್ ಆರೋಪ ರಾಜಕೀಯವಾಗಿದೆ. ಈ ಬಗ್ಗೆ ದಾಖಲೆಗಳಿದ್ದರೆ ಕೊಡಲಿ. ಅದಕ್ಕಾಗಿಯೇ ಲೋಕಾಯುಕ್ತ ಸಂಸ್ಥೆಯನ್ನು ಮಾಡಿದ್ದೇವೆ. ಕಾಂಗ್ರೆಸ್​ನವರು ದಾಖಲೆ ನೀಡಿದರೆ ತನಿಖೆ ಮಾಡುತ್ತೇವೆ. ಆಗ ಸತ್ಯ ಹೊರಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಬಿ.ಕೆ. ಹರಿಪ್ರಸಾದ ಅವರಿಗೆ ಯಾವಾಗಲೂ ಕನಸಿನಲ್ಲಿ ಮಹ್ಮದ್ ಅಲಿ ಜಿನ್ನಾ ಕಾಣುತ್ತಾರೆ. ಜಿನ್ನಾಗೂ ಕೂಡ ಕಾಂಗ್ರೆಸ್​ನವರ ಮೇಲೆ ಬಹಳ ಪ್ರೀತಿಯಿತ್ತು. ಹೀಗಾಗಿ ಅವರು ಸಾವರ್ಕರ್ ಮತ್ತು ಜಿನ್ನಾ ಒಂದೇ ಎಂದು ಹೇಳುತ್ತಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ ಹೇಳಿಕೆಗೆ ತೀರುಗೇಟು ನೀಡಿದರು.

    ರೈತ ಕೂಲಿ ಕಾರ್ವಿುಕರ ಮಕ್ಕಳಿಗೂ ವಿದ್ಯಾನಿಧಿ: ರೈತರ ಮಕ್ಕಳಿಗಾಗಿ ಈಗಾಗಲೇ ವಿದ್ಯಾನಿಧಿ ನೀಡಿದ್ದೇವೆ. ಮುಂದೆ ರೈತ ಕೂಲಿ ಕಾರ್ವಿುಕರ ಮಕ್ಕಳಿಗೂ ವಿದ್ಯಾನಿಧಿ ಕೊಡಬೇಕು. ಬಡ ಮಕ್ಕಳಿಗಾಗಿ 4 ಸಾವಿರ ಅಂಗನವಾಡಿ ಕೇಂದ್ರ ತೆರೆಯಬೇಕು ಎಂದು ಗುರುವಾರ ಕರೆದಿದ್ದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

    ಸ್ತ್ರೀಶಕ್ತಿ ಸಂಘಗಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ 1.50 ಲಕ್ಷ ರೂ. ಕೊಡಲು ಹಾಗೂ ಕರಕುಶಲ ಕೆಲಸಗಾರರಿಗೆ 50 ಸಾವಿರ ರೂ. ಧನ ಸಹಾಯ ನೀಡಲು ತೀರ್ಮಾನ ಮಾಡಿದ್ದೇವೆ. ಕುರಿ ಕಾಯುವವರಿಗೆ ವಿಶೇಷ ಯೋಜನೆ ರೂಪಿಸುತ್ತಿದ್ದು, ಸದ್ಯ ಕುರಿಗಾರ ಸಂಘಗಳಿಗೆ 20 ಕುರಿ ಹಾಗೂ 1 ಟಗರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

    ಚರ್ಚೆಗೆ ಬನ್ನಿ… ಸಿಎಂ ಸವಾಲು: ಸಾಮಾಜಿಕ ನ್ಯಾಯ ಎಂದು ಹೇಳುವ ಕಾಂಗ್ರೆಸ್​ನವರು ಜನರಿಗೆ ಏನು ಕೊಟ್ಟಿದ್ದಾರೆ? ರೈತರಿಗೆ ವಿಶೇಷ ಯೋಜನೆ ಕೊಟ್ಟರಾ? ಮಹಿಳೆಯರಿಗೆ ಕೆಲಸ ಕೊಟ್ಟರಾ? ಯುವಕರಿಗೆ ಕೆಲಸ ಕೊಟ್ಟರಾ ಎಂದು ಪ್ರಶ್ನಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಿಜವಾಗಿ ಸಾಮಾಜಿಕ ನ್ಯಾಯ ಕೊಟ್ಟವರು ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ನಮ್ಮ ರಾಜ್ಯ ಸರ್ಕಾರ. ನಾವು ಮಾಡಿದ ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತೇವೆ. ಕಾಂಗ್ರೆಸ್​ನವರು ಜನರಿಗೆ ಸೇವೆ ಮಾಡಿದ್ದೆ ಆಗಿದ್ದರೆ, ಜನರ ಮುಂದೆ ಇಡಲಿ. ಈ ಬಗ್ಗೆ ರ್ಚಚಿಸೋಣ. ಜನರು ಯಾರನ್ನು ಬೆಂಬಲಿಸುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts