More

    ಉತ್ತರಕರ್ನಾಟಕದ ಜನ ಭಕ್ತಿ, ಶ್ರದ್ಧಾವಂತರು

    ಹುಬ್ಬಳ್ಳಿ : ಉತ್ತರ ಕರ್ನಾಟಕದ ಜನಅದರಲ್ಲೂ ಹುಬ್ಬಳ್ಳಿ-ಧಾರವಾಡದವರು ದೇವರಲ್ಲಿ ಶ್ರದ್ಧೆ, ಭಕ್ತಿ, ಗೌರವ ಉಳ್ಳವರು. ಅದಕ್ಕಾಗಿಯೇ ಈ ಭಾಗದಲ್ಲಿ ಶ್ರೀಕ್ಷೇತ್ರದಿಂದ ಬಹಳಷ್ಟು ಶೈಕ್ಷಣಿಕ ಸಾಧನೆ ಸಾಧ್ಯವಾಯಿತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

    ಇಲ್ಲಿನ ಉಣಕಲ್ಲನ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮೂರು ಕೋಟಿ ರೂ. ವೆಚ್ಚದ ನಿಯೋಜಿತ ಬೃಹತ್ ಶಿಲಾ ಮಂಟಪ ಕಟ್ಟಡದ ಭೂಮಿ ಪೂಜೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.

    ಸಂತ ಮಹಾಂತರನ್ನು ಪೂಜ್ಯ ಮನೋಭಾವದಿಂದ ಕಾಣುವ ಸಂಪ್ರದಾಯ ಇಲ್ಲಿಯ ವಿಶೇಷತೆ. ಇದರಿಂದ ನಮ್ಮ ಸಂಸ್ಕ್ರತಿಯ ಪುನರುತ್ಥಾನ ಸಾಧ್ಯ ಎಂದು ಹೇಳಿದರು.

    ನಾಡಿನ ಮಠಗಳು ಶಿಕ್ಷಣ ಹಾಗೂ ಧಾರ್ವಿುಕ ಕಲೆ ಪರಂಪರೆಯ ನಿಟ್ಟಿನಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ್ದು, ಕೊಡುಗೈ ದಾನಿಗಳಾದ ಭಕ್ತರ ಸಹಕಾರದಿಂದ ಸಾಧ್ಯವಾಯಿತು ಎಂದರು.

    ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಸಾನ್ನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ, ನೂರಾ ಮೂರು ವರ್ಷಗಳ ಹಿಂದೆ ನಮ್ಮನಗಲಿದ ಹಟಯೋಗಿ ಸಿದ್ದಪ್ಪಜ್ಜ ಇಂದಿಗೂ ನಮ್ಮಮನದಲ್ಲಿ ಸ್ಥಿರವಾಗಿ ನಿಂತಿರುವುದು ಅವರಲ್ಲಿರುವ ಯೋಗ ಸಿದ್ದಿಯ ಪ್ರತೀಕ ಎಂದು ಹೇಳಿದರು.

    ಹುಕ್ಕೇರಿಯ ಚರಂತೇಶ್ವರಮಠದ ಶ್ರೀ ಶರಣುಬಸವ ದೇವರು ಮಾತನಾಡಿ, ಉಣಕಲ್ಲ ಸಿದ್ದಪ್ಪಜ್ಜ ಆಂದ್ರಪ್ರದೇಶದ ಹಳ್ಳಿಯಿಂದ ಬಂದು, ಉಳವಿಯ ಹೆದ್ದಾರಿ ಉಣಕಲ್ಲ ಗ್ರಾಮದಲ್ಲಿ ನೆಲೆನಿಂತು ದೇಸಿ ಸಂಸ್ಕ್ರತಿ ಯನ್ನು ಭಕ್ತಸಮೂಹಕ್ಕೆ ಸಾರಿ ಹೇಳಿದರು ಎಂದರು.

    ಇದೇ ಸಂದರ್ಭದಲ್ಲಿ ರಾಜಣ್ಣ ಕೊರವಿ ಕುಟುಂಬದವರು ಹತ್ತು ಲಕ್ಷ ರೂ. ನಿಯೋಜಿತ ಕಟ್ಟಡಕ್ಕೆ ದೇಣಿಗೆ ನೀಡಿದರು.

    ಸದಸ್ಯರಾದ ರಾಮಣ್ಣ ಪದ್ಮಣ್ಣವರ,ರಾಮಚಂದ್ರ ಜಾಧವ, ರಮೇಶ ಕೊರವಿ,ರಾಜು ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.

    ಪಾಲಿಕೆ ಸದಸ್ಯ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಕೆ.ಎಸ್. ಕೌಜಲಗಿ ಉಣಕಲ್ಲ ಸ್ಥಳಮಹಿಮೆ ಪರಿಚಯಿಸಿದರು.

    ಎಸ್.ಐ.ನೇಕಾರ ನಿರೂಪಿಸಿದರು.

    ಇದಕ್ಕೂ ಮೊದಲು ಡಾ. ವೀರೇಂದ್ರ ಹೆಗ್ಗಡೆ ಅವರು ಉಣಕಲ್ಲ ಐತಿಹಾಸಿಕ ಹಿನ್ನೆಲೆಯ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts