More

  ಭಾರತದಲ್ಲಿ ಸಿಲುಕಿದ 193 ಪಾಕಿಸ್ತಾನಿ ಪ್ರಜೆಗಳು ಸ್ವದೇಶಕ್ಕೆ ತೆರಳಲು ಕೇಂದ್ರದ ಗ್ರೀನ್ ಸಿಗ್ನಲ್

  ನವದೆಹಲಿ: ಲಾಕ್​ಡೌನ್​​ನಿಂದಾಗಿ ಭಾರತದ 10 ರಾಜ್ಯಗಳಲ್ಲಿ ಸಿಲುಕಿರುವ ಅಂದಾಜು 193 ಪಾಕಿಸ್ತಾನಿ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ಅನುಮತಿಸಿದೆ.

  ಅತ್ತಾರಿವಾಘಾ ಗಡಿ ಮೂಲಕ ಭಾರತದಿಂದ ಸ್ವದೇಶಕ್ಕೆ ತೆರಳಲು ಅನುಮತಿ ನೀಡಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕುರಿತು ಆಯಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ್ದು, ಪ್ರಜೆಗಳಿಗೆ ಪ್ರಯಾಣ ಬೆಳೆಸಲು ಅನುಕೂಲ ಕಲ್ಪಿಸಬೇಕೆಂದು ಹಾಗೂ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದೂ ತಿಳಿಸಿದೆ.

  ಮೇ 5 ವರೆಗೆ ಅವರು ಸ್ವದೇಶಕ್ಕೆ ತೆರಳಲು ಅನುಮತಿ ನೀಡಲಾಗಿದೆ. ಮೇ 5 ರಂದು ಬೆಳಗ್ಗೆ ವಾಘಾ ಗಡಿಗೆ ಬಂದು ತಲುಪಿದರೆ ವಲಸೆ ಮತ್ತು ಗಡಿ ತಪಾಸಣಾ ಕೇಂದ್ರದಲ್ಲಿ ಎಲ್ಲ ರೀತಿಯ ಪರಿಶೀಲನೆ ಹಾಗೂ ತಪಾಸಣೆ ಪ್ರಕ್ರಿಯೆ ನಡೆಸಿದ ನಂತರ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಪಾಕಿಸ್ತಾನಿ ಪ್ರಜೆಗಳಿಗೆ ತಿಳಿಸಲಾಗಿದೆ.

  ಲಾಕ್ಡೌನ್ ಜಾರಿಯಿಂದಾಗಿ ಭಾರತದಲ್ಲಿ ಸಿಲುಕಿರುವ ಪಾಕಿಸ್ತಾನಿ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ತಾನ ಭಾರತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

  ಕೋವಿಡ್ -19ನಿಂದಾಗಿ ಲಾಕ್​​ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಭಾರತದಿಂದ ಸ್ವದೇಶಕ್ಕೆ ಹೋಗುತ್ತಿರುವ ಎರಡನೇ ಪಾಕಿಸ್ತಾನಿ ತಂಡ ಇದಾಗಿದೆ. ಈಗ ಸ್ವದೇಶಕ್ಕೆ ಹೊರಡಲಿರುವ ಪಾಕಿಸ್ತಾನಿ ಪ್ರಜೆಗಳು ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಛತ್ತೀಸ್ಗಢ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ದೆಹಲಿ ಹತ್ತು ರಾಜ್ಯಗಳ 25 ಜಲ್ಲೆಗಳಲ್ಲಿ ಸಿಲುಕಿದವರಾಗಿದ್ದು, ಒಟ್ಟು 193 ಜನರಿದ್ದಾರೆ. ಅವರಲ್ಲಿ ಹೆಚ್ಚಿನವರು ಶನಿವಾರ ಅಥವಾ ಭಾನುವಾರ ರಸ್ತೆ ಮಾರ್ಗವಾಗಿ ಪಂಜಾಬ್​ನ ಅತ್ತಾರಿಗೆ ಪ್ರಯಾಣ ಆರಂಭಿಸಲಿದ್ದಾರೆ.

  See also  ಭಾನುವಾರ ಇಂಗ್ಲೆಂಡ್‌ಗೆ ಪಾಕಿಸ್ತಾನ ತಂಡ

  ಕಳೆದ ಏಪ್ರಿಲ್​ನಲ್ಲಿ ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಸಿಲುಕಿದ್ದ ಪಾಕಿಸ್ತಾನಿ ಪ್ರಜೆಗಳ ತಂಡವನ್ನು ಕಳುಹಿಸಲಾಗಿತ್ತು

  ಇದನ್ನೂ ಓದಿ

  ಪ್ರಧಾನಿ ಹೆಲಿಕಾಪ್ಟರ್ ಚೆಕ್ ಮಾಡಿದ್ದ ಕರ್ನಾಟಕದ ಐಎಎಸ್ ಅಧಿಕಾರಿಯಿಂದ ಈಗ ತಬ್ಲಿಘಿಗಳ ಪ್ರಶಂಸೆ!: ರಾಜ್ಯ ಸರ್ಕಾರದಿಂದ ನೋಟಿಸ್

  ಹಿಂದಿರುಗುವ ಎಲ್ಲ ಪಾಕಿಸ್ತಾನಿ ಪ್ರಜೆಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳು ಹಾಗೂ ಭಾರತ ಸರ್ಕಾರದ ಅಸ್ತಿತ್ವದಲ್ಲಿರುವ ನಿಬಂಧನೆಗಳ ಪ್ರಕಾರ ಪರೀಕ್ಷಿಸಬೇಕೆಂದು, ಲಕ್ಷಣರಹಿತ ವ್ಯಕ್ತಿಗಳಿಗೆ ಮಾತ್ರ ಸ್ವದೇಶಕ್ಕೆ ಹೋಗಲು ಅವಕಾಶ ನೀಡಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ದಮ್ಮು ರವಿ ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದಾರೆ.

  ಆದಾಗ್ಯೂ, ಈಗಿರುವ ಆರೋಗ್ಯ ತಪಾಸಣಾ ಕ್ರಮಗಳಿಂದ ವ್ಯಕ್ತಿಯಲ್ಲಿನ ಕೋವಿಡ್– 19 ಸ್ಥಿತಿಗತಿಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ. ಏಕೆಂದರೆ ಕಳೆದ ಮಾರ್ಚ್​​ನಲ್ಲಿ ಅತ್ತಾರಿವಾಘಾ ಗಡಿ ದಾಟಿದವರಲ್ಲಿ ಇಬ್ಬರಿಗೆ ಕೋವಿಡ್– 19 ಸೋಂಕು ಇರುವುದು ಪತ್ತೆಯಾಗಿದ್ದು ಅವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು ಎನ್ನುತ್ತಾರೆ.  

  ಇದನ್ನೂ ಓದಿ.

  ಚೆನ್ನೈನಲ್ಲಿ ತ್ಯಾಜ್ಯ ನೀರಿನಿಂದ ಹರಡುತ್ತಿದೆಯಾ ಕರೊನಾ? ಸಂಸ್ಕರಿಸಿದ ನೀರಿನಲ್ಲಿ ಕಂಡುಬಂತು ವೈರಸ್​, ದೇಶದಲ್ಲೇ ಮೊದಲ ವಿದ್ಯಮಾನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts