More

    ಚಿನ್ನಾಭರಣ ದೋಚಿದ್ದ ನರ್ಸ್; ಮನೆ ಕೆಲಸದಾಕೆ ಸೆರೆ

    ಬೆಂಗಳೂರು: ದೂರದರ್ಶನದ ನಿವೃತ್ತ ಅಧಿಕಾರಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ನರ್ಸ ಸೇರಿ ಇಬ್ಬರು ಮಹಿಳೆಯರನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರ 1ನೇ ಹಂತದ ನಿವಾಸಿ ಮಂಜುಳಾ ಮತ್ತು ಪ್ರಗತಿಪುರದ ಮಹದೇವಮ್ಮ ಬಂಧಿತರು. 383 ಗ್ರಾಂ ಚಿನ್ನಾಭರಣ ಮತ್ತು 104 ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಜೆ.ಪಿ. ನಗರ 1ನೇ ಹಂತದ 29ನೇ ಮುಖ್ಯರಸ್ತೆಯಲ್ಲಿರುವ ದೂರದರ್ಶನ ನಿವೃತ್ತ ಅಧಿಕಾರಿ ಮುನಿಕೃಷ್ಣಪ್ಪ ಮನೆಯಲ್ಲಿ ಕೃತ್ಯ ನಡೆದಿತ್ತು. ಅವರ ಪುತ್ರ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ನರ್ಸ್ ಮತ್ತು ಮನೆ ಕೆಲಸದವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಕೃತ್ಯ ಬಯಲಾಗಿದೆೆ.
    ಪತ್ನಿ ಜತೆ ಮುನಿಕೃಷ್ಣಪ್ಪ ನೆಲೆಸಿದ್ದು, ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅವರೆಲ್ಲ ಪಾಲಕರಿಂದ ಪ್ರತ್ಯೇಕವಾಗಿ ತಮ್ಮ ಕುಟುಂಬಗಳ ಜತೆ ವಾಸವಾಗಿದ್ದಾರೆ.

    ಯಲಬುರ್ಗಾ ತಾಲೂಕಿನ ಎರೆ ಹಂಚಿನಾಳು ಗ್ರಾಮದ ಮಂಜುಳಾ ವಾರದ ಹಿಂದೆಯಷ್ಟೇ ಏಜೆನ್ಸಿ ಮೂಲಕ ಮುನಿಕೃಷ್ಣಪ್ಪ ಮನೆಗೆ ವೃದ್ಧರ ಆರೈಕೆಗೆ ಶುಶ್ರೂಷಕಿಯಾಗಿ ನೇಮಕಗೊಂಡಿದ್ದಳು. ಅದೇ ಮನೆಯಲ್ಲಿ ವಾಸವಾಗಿದ್ದಳು. ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ತಟ್ಟೆಕೆರೆ ಗ್ರಾಮದ ಮಹದೇವಮ್ಮ ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲ ದಿನಗಳ ಹಿಂದೆ ಬ್ಯಾಂಕ್ ಕೆಲಸದ ನಿಮಿತ್ತ ಮುನಿಕೃಷ್ಣಪ್ಪ ಹೊರಹೋಗಿದ್ದಾಗ ಚಿನ್ನಾಭರಣವನ್ನು ಆರೋಪಿಗಳು ಕಳವು ಮಾಡಿದ್ದರು.

    ಮರುದಿನ ಸಂಜೆ ಮನೆಯಲ್ಲಿ ಆಭರಣ ಪರಿಶೀಲಿಸಿದಾಗ ಕಳ್ಳತನ ವಿಷಯ ಗೊತ್ತಾಗಿತ್ತು. ಕೂಡಲೇ ಪುತ್ರನ ಮೂಲಕ ಜೆ.ಪಿ.ನಗರ ಠಾಣೆಗೆ ದೂರು ನೀಡಿದ್ದರು. ಮನೆಯಲ್ಲಿ ಇದ್ದ ಮಂಜುಳಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts