More

    ಯುವ ಸಂಘಗಳ ಸಂಖ್ಯೆ ಕ್ಷೀಣ

    ಮುದ್ದೇಬಿಹಾಳ: ಯುವ ನೀತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಅದನ್ನಿನ್ನೂ ಅಳವಡಿಸಿಲ್ಲ. ಗ್ರಾಮೀಣ ಯುವ ಸಂಘಗಳಿಗೆ ಹೆಚ್ಚಿನ ಮಾನ್ಯತೆ ಕೊಡುವಂತೆ ಕೇಳಿದ್ದರೂ ಪ್ರಯೋಜನವಾಗಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಜನ ಸಂಘಟನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.

    ಪಟ್ಟಣದ ನಂದಿನಿ ಪಾರ್ಟಿ ಹಾಲ್‌ನಲ್ಲಿ ಒಕ್ಕೂಟದ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳೊಂದಿಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷೃಕ್ಕೆ ಉತ್ತರ ನೀಡಲು ಒಕ್ಕೂಟವೇ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಯುವ ಸಂಘಟನೆಗಳ ಚಟುವಟಿಕೆಗೆ ಹೆಚ್ಚಿನ ಆದ್ಯತೆ ಕೊಡಲು, ರಾಜ್ಯ, ಜಿಲ್ಲಾ ಯುವಜನ ಮೇಳ ನಡೆಸಲು, ರಾಜ್ಯ, ಜಿಲ್ಲಾ ಯುವ ಪ್ರಶಸ್ತಿ ನೀಡಲು ತೀರ್ಮಾನಿಸಿದೆ ಎಂದರು.

    ಸರ್ಕಾರದ ನಿರ್ಲಕ್ಷೃದಿಂದ ಗ್ರಾಮೀಣ ಯುವಜನತೆಯ ದೈಹಿಕ ಚಟುವಟಿಕೆಗಳ ಪ್ರಮುಖ ತಾಣವಾಗಿರುವ ಗರಡಿ ಮನೆಗಳು ಸಂಪೂರ್ಣ ನೆಲ ಕಚ್ಚಿವೆ. ಇಲಾಖೆಯನ್ನು ಕೇವಲ ಕಾಲೇಜು ವಿದ್ಯಾರ್ಥಿ ಕೇಂದ್ರೀಕೃತಗೊಳಿಸದೆ ಗ್ರಾಮೀಣ ಭಾಗದ ಯುವ ಜನತೆಗೂ ಪ್ರಯೋಜನ ಆಗುವ ರೀತಿಯಲ್ಲಿ ಸಿದ್ಧಪಡಿಸಬೇಕು. ಗ್ರಾಮಿಣ ಭಾಗದಲ್ಲಿದ್ದ ಯುವ ಸಂಘಗಳ ಸಂಖ್ಯೆ 45ಸಾವಿರದಿಂದ 5ಸಾವಿರಕ್ಕಿಳಿದಿರುವುದು ದೊಡ್ಡ ದುರಂತ. ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿ, ಜಿಲ್ಲಾ ಯುವ ಸಮ್ಮೇಳನ ಸೇರಿ ಯುವ ಜನತೆಗೆ ಸೇರಿದ ಎಲ್ಲ ಕಾರ್ಯಕ್ರಮಗಳನ್ನೂ ಸರ್ಕಾರ ನಿಲ್ಲಿಸಿದೆ. ನೆಹರು ಯುವ ಕೇಂದ್ರ ಬದಲಾಯಿಸಿ ಮೇರಾ ಭಾರತ್ ಎಂದು ಹೆಸರಿಡಲು ಹೊರಟಿರುವುದರಿಂದ ದೇಶದಲ್ಲಿ ಕೇಂದ್ರಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಈ ವರ್ಷ ಅನುದಾನವನ್ನೇ ಕೊಟ್ಟಿಲ್ಲ. ಅಧಿಕಾರಿಗಳು ಕೆಲಸವಿಲ್ಲದೆ ಸಂಬಳ ಪಡೆಯುತ್ತಿದ್ದಾರೆ ಎಂದರು.

    ಒಕ್ಕೂಟದ ನಿಡಗುಂದಿ ತಾಲೂಕು ಅಧ್ಯಕ್ಷರನ್ನಾಗಿ ಯಲ್ಲಪ್ಪ ಭಜಂತ್ರಿ, ತಾಳಿಕೋಟೆ ತಾಲೂಕು ಅಧ್ಯಕ್ಷರನ್ನಾಗಿ ದೇವಪ್ಪ ಕೂಚಬಾಳ, ನಾಲತವಾಡದ ವಲಯ ಘಟಕದ ಅಧ್ಯಕ್ಷರನ್ನಾಗಿ ಮಲ್ಲು ಹುಡೇದ ಅವರನ್ನು ನೇಮಿಸಿ ಆದೇಶ ಪತ್ರ ವಿತರಿಸಲಾಯಿತು.

    ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ, ಬಾಗಲಕೋಟೆ ಜಿಲ್ಲಾಧ್ಯಕ್ಷ ದಾನಯ್ಯಸ್ವಾಮಿ ಹಿರೇಮಠ, ತಾಲೂಕು ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜುಗೌಡ ತುಂಬಗಿ, ತಾಲೂಕು ಸಂಘಟನಾ ಕಾರ್ಯದರ್ಶಿ ಮಹ್ಮದರಫೀಕ ಶಿರೋಳ, ಶರಣು ಚಲವಾದಿ, ಸಾಬಣ್ಣ ಶಳ್ಳಗಿ, ಮುತ್ತಯ್ಯ ಹಿರೇಮಠ, ರಾಜು ವಾಲಿಕಾರ, ಕೃಷ್ಣ ಕುಂಬಾರ, ಸಚಿನ ಚಲವಾದಿ ಸುದ್ದಿಗೋಷ್ಠಿಯದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts