More

    ಕಂಗೊಳಿಸಿದ ಹೇಮಗಿರಿ ಮಠದ ನಗಾರಿ ಖಾನಿ

    ಗುತ್ತಲ: ಪಟ್ಟಣದ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರ ಮಠದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಮಹಾ ಕಾರ್ತಿಕೋತ್ಸವದ ನಿಮಿತ್ತ ಭಕ್ತರು ಪಟ್ಟಣದ ಎಲ್ಲಡೆ ಹಣತೆಗಳನ್ನು ಹಚ್ಚಿ ಭಕ್ತಿ-ಭಾವ ಮೆರೆದರು.

    ಕಾರ್ತಿಕೋತ್ಸವದ ಅಂಗವಾಗಿ ಮಠದಿಂದ ಪಟ್ಟಣದ ಬಸ್ ನಿಲ್ದಾಣ, ಅಂಗ್ಲಾಪುರ ಓಣಿ, ಪಂಚಾಯಿತಿ ಹಾಗೂ ಪೇಟೆಯವರೆಗೂ ರಸ್ತೆಗಳ ಇಕ್ಕೆಲಗಳಲ್ಲಿ ಇಟ್ಟಿದ್ದ ಸಾಲು ಸಾಲು ದೀಪಗಳನ್ನು ಪೂಜೆ ವೇಳೆ ಸಹಸ್ರಾರು ಭಕ್ತರು ಭಕ್ತಿಯಿಂದ ಹಚ್ಚಿದರು.

    ಮಠದ ಎದುರುಗಡೆ ಇರುವ ಕಲ್ಯಾಣ ಮಂಟಪದಲ್ಲಿ ತಿರುಗುತ್ತಿದ್ದ 508 ದೀಪಗಳನ್ನು ಹೊಂದಿರುವ ದೀಪಸ್ತಂಭ ದೃಶ್ಯ ಎಲ್ಲರ ಗಮನ ಸೆಳೆಯಿತು. ಅತ್ಯಾಕರ್ಷಕ ನೂರಾರು ಹಣತೆಗೆಳು ಎಲ್ಲರ ಆರ್ಕಷಣೆಯಾಗಿದ್ದರೆ, ಸಾಲಕೃಂತ ದೀಪಗಳು ಎಲ್ಲರ ಗಮನ ಸೆಳೆದವು. ಮಠದ ನಗಾರಿ ಖಾನಿ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ದೃಶ್ಯ ಎಲ್ಲರನ್ನು ಆಕರ್ಷಿಸಿತು.

    ಭಕ್ತರು ಹಣತೆ ಹಚ್ಚುತ್ತಿದಂತೆ ಎಲ್ಲೆಡೆ ಹರ ಹರ ಮಹಾದೇವ…ಎಂಬ ಜೈಘೊಷ ಮುಗಿಲು ಮುಟ್ಟಿತ್ತು. ನಿರ್ಮಾಣ ಹಂತದಲ್ಲಿರುವ ನೂತನ ಶಿಲಾ ಮಠ ವಿದ್ಯುತ್ ಅಲಂಕಾರದಿಂದ ಕಂಗೊಳಿಸಿತು.

    ಕಾರ್ತಿಕೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಮಧ್ಯಾಹ್ನ ಮಠದ ಪೂಜೆಯ ನಂತರ ಹೇಮಗಿರಿ ಕಲ್ಯಾಣ ಮಂಟಪದ ನೂತನ ನಿವೇಶನದಲ್ಲಿ ನಿರಂತರ ಅನ್ನ ಸಂತರ್ಪಣೆ ನಡೆಯಿತು.

    ಭಾವೈಕ್ಯಕ್ಕೆ ಸಾಕ್ಷಿ

    ಮುಸ್ಲಿಂ ಸಮಾಜದ ಅನೇಕರು ಕಾರ್ತಿಕೋತ್ಸವದಲ್ಲಿ ಭಾಗವಹಿಸಿ ಭಕ್ತಿ ಭಾವ ಮೆರೆದು ಭಾವೈಕ್ಯಕ್ಕೆ ಸಾಕ್ಷಿಯಾದರು. ರಾಣೆಬೆನ್ನೂರ ತಾಲೂಕಿನ ವಿವಿಧ ಗ್ರಾಮಗಳ ಮುಸ್ಲಿಂ ಸಮಾಜದವರು, ತಾವು ಮಠದ ಭಕ್ತರಾಗಿದ್ದು, ಪ್ರತಿ ಅಮಾವಾಸ್ಯೆ ಹಾಗೂ ಮಠದಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದೇವೆ. ನಮ್ಮ ಕುಟುಂಬದ ಕೆಲವರು ಪಾದಯಾತ್ರೆ ಮೂಲಕ ಆಗಮಿಸುತ್ತಾರೆ ಎಂದು ಸಂಗಾಪುರ ಗ್ರಾಮದ ಮುಸ್ಲಿಂ ಕುಟುಂಬದ ವ್ಯಕ್ತಿಯೊಬ್ಬರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts