More

  ಎಚ್ಚರಿಕೆ ಗಂಟೆ ಬಾರಿಸಿದ ಸಿಆರ್​ಪಿಎಫ್ ಯೋಧರ ಕರೊನಾ ಪಾಸಿಟಿವ್ ಪ್ರಕರಣ..!

  ವದೆಹಲಿ: ರಾಷ್ಟ್ರದ ಅತಿದೊಡ್ಡ ಅರೆಸೇನಾ ಪಡೆಯಾದ ಕೇಂದ್ರ ಮೀಸಲು ಪೊಲೀಸ್ ಭದ್ರತಾ ಪಡೆ (ಸಿಆರ್​ಪಿಎಫ್) ದೆಹಲಿ ಮೂಲದ ಬಟಾಲಿಯನ್​​ನಲ್ಲಿ ಕೋವಿಡ್– 19 ಸೋಂಕಿತರ ಸಂಖ್ಯೆ 122 ಕ್ಕೇರಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

  ಸೋಂಕಿತರು ಇಲ್ಲಿಯ ಮಯೂರ್ ವಿಹಾರ್ ಮೂರನೇ ಹಂತದಲ್ಲಿರುವ 31 ನೇ ಬಟಾಲಿಯನ್​​ನ ಯೋಧರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

  ಬಟಾಲಿಯನ್​ನ 122 ಯೋಧರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಇನ್ನೂ 100 ಜನರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  ಶುಕ್ರವಾರ 12 ಯೋಧರಿಗೆ ಸೋಂಕು ತಗುಲಿದ್ದು, ಕಳೆದ ವಾರವಷ್ಟೇ ಬಟಾಲಿಯನ್​ನ 55 ವರ್ಷದ ಸಬ್ ಇನ್ಸ್​​ಪೆಕ್ಟರ್ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದರು. ಈಗ ಸೋಂಕಿತರ ಸಂಖ್ಯೆ 122 ಕ್ಕೇರಿದ್ದು, ಆತಂಕ ಸೃಷ್ಟಿಸಿದೆ . (ಏಜೆನ್ಸೀಸ್)

  ಇದನ್ನೂ ಓದಿ.

  ಚೆನ್ನೈನಲ್ಲಿ ತ್ಯಾಜ್ಯ ನೀರಿನಿಂದ ಹರಡುತ್ತಿದೆಯಾ ಕರೊನಾ? ಸಂಸ್ಕರಿಸಿದ ನೀರಿನಲ್ಲಿ ಕಂಡುಬಂತು ವೈರಸ್​, ದೇಶದಲ್ಲೇ ಮೊದಲ ವಿದ್ಯಮಾನ

  f

  See also  ಬಾಂಗ್ಲಾದೇಶದ ಕೆಲ ಭಾಗಗಳಲ್ಲಿ ಚಂಡಮಾರುತ ಬೀಸುವ ಸಾಧ್ಯತೆ; ರಾಜ್ಯಕ್ಕೂ ತಟ್ಟಲಿದೆ ಚಂಡಮಾರುತದ ಎಫೆಕ್ಟ್​​; ಹವಾಮಾನ ಇಲಾಖೆಯ ಎಲರ್ಟ್..!​​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts