More

    ಹಿರಿಯ ಚೇತನಗಳ ಸ್ಮರಣೆ ಶ್ಲಾಘನೀಯ

    ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಬೆಳೆಸುವ ಮತ್ತು ಸಂಸ್ಕೃತಿ ಉಳಿಸುವ ಕಾಯಕ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 133ನೇ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಹಿರಿಯ ಚೇತನಗಳ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾವರ್ಧಕ ಸಂಘವು ಕನ್ನಡ ನೆಲವನ್ನು ಶ್ರೀಮಂತಗೊಳಿಸಿದ ಚೇತನಗಳನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ‘ನೆನೆ ನೆನೆ ಆ ದಿನವ’ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಧಾರವಾಡದ ಡೆಪ್ಯೂಟಿ ಚನ್ನಬಸಪ್ಪ ಕನ್ನಡ ವಿಕಾಸ ವೇದಿಕೆ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಅವರು ‘ಡೆಪ್ಯೂಟಿ ಚೆನ್ನಬಸಪ್ಪನವರು’ ಸ್ಮರಣೆ ವಿಷಯ ಕುರಿತು ಮಾತನಾಡಿ, ಈ ನೆಲ ಕನ್ನಡದ ಪ್ರದೇಶವಾಗಿ ಉಳಿಯಲು, ಕನ್ನಡದ ಮುದ್ರೆಯನ್ನು ಒತ್ತಿದವರಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಮೊದಲಿಗರು ಎಂದರು.
    ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಹಿರಿಯ ಆಜೀವ ಸದಸ್ಯರಾದ ಧಾರವಾಡದ ಕಸ್ತೂರಿ ಜಿಗಜಿನ್ನಿ, ಹುಬ್ಬಳ್ಳಿಯ ಶಶಿಧರ ಮಠದ, ಧಾರವಾಡದ ಡಾ. ಶಿವಯೋಗಿ ಟೆಂಗಿನಕಾಯಿ ಅವರನ್ನು ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ನ ಸದಸ್ಯೆ ಭಾರತಿದೇವಿ ರಾಜಗುರು ಗೌರವಿಸಿದರು.
    ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಜಿನದತ್ತ ಹಡಗಲಿ, ಬಸವಪ್ರಭು ಹೊಸಕೇರಿ, ಡಾ. ಮಹೇಶ ಹೊರಕೇರಿ, ಡಾ. ಶೈಲಜಾ ಅಮರಶೆಟ್ಟಿ, ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ನಿಂಗಣ್ಣ ಕುಂಟಿ, ಬಿ.ಎಸ್. ಶಿರೋಳ, ಜಿ.ಬಿ. ಹೊಂಬಳ, ಸಿ.ಯು. ಬೆಳ್ಳಕ್ಕಿ, ಶಿವಣ್ಣ ಬೆಲ್ಲದ, ಡಾ. ಎಚ್.ಎ. ಪಾರ್ಶ್ವನಾಥ, ಎಂ.ಎಂ. ಚಿಕ್ಕಮಠ, ರಾಮಚಂದ್ರ ಧೋಂಗಡೆ, ಶ್ರೀನಿವಾಸ ವಾಡಪ್ಪಿ, ಹೇಮಾ ಪಟ್ಟಣಶೆಟ್ಟಿ, ಶಾರದಾ ಕೌದಿ, ಮಧುಮತಿ ಸಣಕಲ್, ಶಶಿಧರ ಉಜ್ಜಿನಿ, ಸದಾಶಿವ ಜನಗೌಡರ, ಪ್ರಕಾಶ ಮುಳಗುಂದ, ಎಸ್.ಕೆ. ಕುಂದರಗಿ, ರೇಖಾ ಅಂತಕ್ಕನವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts